ನಾಳೆ ವಾರ್ಷಿಕೋತ್ಸವ ಹಾಗೂ ಕೌಶಲ್ಯ ಸೇವಾ ರತ್ನ ಪ್ರಶಸ್ತಿ ಸಮಾರಂಭ

ನಾಳೆ ವಾರ್ಷಿಕೋತ್ಸವ ಹಾಗೂ ಕೌಶಲ್ಯ ಸೇವಾ ರತ್ನ ಪ್ರಶಸ್ತಿ ಸಮಾರಂಭ

ನಾಳೆ ವಾರ್ಷಿಕೋತ್ಸವ ಹಾಗೂ ಕೌಶಲ್ಯ ಸೇವಾ ರತ್ನ ಪ್ರಶಸ್ತಿ ಸಮಾರಂಭ 

ಕಲಬುರಗಿ: ಇಲ್ಲಿನ ಕೌಶಲ್ಯ ಸೇವಾ ಟ್ರಸ್ಟ್ ನ 14 ವರ್ಷದ ವಾರ್ಷಿಕೋತ್ಸವ ಹಾಗೂ ಮಕ್ಕಳ ದಿನಾಚರಣೆ ಮತ್ತು ಕೌಶಲ್ಯ ಸೇವಾ ರತ್ನ ಪ್ರಶಸ್ತಿ ಸಮಾರಂಭ ನಾಳೆ ದಿನಾಂಕ:15-11-2025 ರಂದು ಬೆಳಿಗ್ಗೆ 11:30 ಗಂಟೆಗೆ ಜಯನಗರದ ಶಿವಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಅಶೋಕಕುಮಾರ ಕಮಲಾಪುರ ಅವರು ತಿಳಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕೌಶಲ್ಯ ಸೇವಾ ಟ್ರಸ್ಟ್ ಜನ ಕಲ್ಯಾಣ ಹಾಗೂ ಸಾಮಾಜಿಕ ಕಾರ್ಯಗಳನ್ನು ಮಾಡುವ ಮೂಲಕ ತನ್ನ ಸೇವಾ ಕಾರ್ಯ ನಿರಂತರವಾಗಿ ಮುಂದುವರೆಸುತ್ತಾ ಬಂದಿದೆ.ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಸುಕ್ಷೇತ್ರ ಗಣಜಲಖೇಡದ ಪೂಜ್ಯ ಶ್ರೀ ನಾಗೇಶ ಮುತ್ಯಾ ಅವರು ವಹಿಸಲಿದ್ದಾರೆ.ಕಾಂಗ್ರೆಸ್ ಹಿರಿಯ ಮುಖಂಡ ನಿಲಕಂಠ ಮೂಲಗೆ ಅವರು ಉದ್ಘಾಟಿಸುವರು.ಮುಖ್ಮ ಅತಿಥಿಗಳಾಗಿ ಹೋರಾಟಗಾರ ಹಾಗೂ ಜಯನಗರ ಶಿವಮಂದಿರ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಡಾ‌.ಲಿಂಗರಾಜ ಸಿರಗಾಪೂರ, ಶ್ರೀ ಸುಭಾಷಚಂದ್ರ ಪಾಟೀಲ ಸ್ಮಾರಕ ಜನ ಕಲ್ಯಾಣ ಟ್ರಸ್ಟ್ ಅಧ್ಯಕ್ಷ ಶರಣಗೌಡ ಪಾಳಾ ಅವರು ಆಗಮಿಸಲಿದ್ದಾರೆ.ಅಧ್ಯಕ್ಷತೆಯನ್ನು ಟ್ರಸ್ಟ್ ನ ಅಧ್ಯಕ್ಷ ಅಶೋಕ ಕಮಲಾಪುರ ಅವರು ವಹಿಸಲಿದ್ದಾರೆ ‌

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 14 ಸಾಧಕರಾದ ಗುರುಲಿಂಗಯ್ಯ ಬಸಯ್ಯ ಹಾಲ,ವೆ.ಮಲ್ಲಯ್ಯ ಹಿರೇಮಠ, ಬಸವರಾಜ ಆರ್.ಉಪ್ಪಿನ, ಸಂತೋಷ ಜಿ.ನಾಡಗೇರಿ,ಡಾ.ರತ್ನಕುಮಾರ ಎಸ್ ಮಾಲಿಪಾಟೀಲ, ವಿನಾಯಕ ಜೋಶಿ, ಶ್ರೀಮತಿ ಕಾಶಮ್ಮ ಎನ್.ಚೌಕ್ಕೆಗೌಡ,ಕು.ಮಾಲಾ ದಣ್ಣೂರ,ಅಪ್ಪಾರಾವ ಮೋರೆ,ಸೂರ್ಯಕಾಂತ ಕೆ.ಬಿ, ಸುರೇಶ್ ಕುಲಕರ್ಣಿ,ಬಾಬಾ ಫಕ್ರುದ್ದೀನ್, ಪೀರಪ್ಪ ಹಾಗೂ ಮಹೇಂದ್ರಸಿಂಗ್ ಎಂ.ರಾಜಪೂತ ಅವರಿಗೆ ಕೌಶಲ್ಯ ಸೇವಾ ರತ್ನ ಪ್ರಶಸ್ತಿ ನೀಡಲಾಗುವುದು.ನಂತರ ಶಿವರಾಜ್ ಆರ್.ಚಿದ್ರಿ, ಪ್ರಶಾಂತ ತಂಬೂರಿ ಮತ್ತು ವಿನೋದ ಎಸ್.ದೇಸಾಯಿ ಇವರನ್ನು ವಿಶೇಷ ಗೌರವ ಸನ್ಮಾನ ಮಾಡಲಾಗುವುದು.ಜಯನಗರ ಶಿವಮಂದಿರ ಅಭಿವೃದ್ಧಿ ಟ್ರಸ್ಟ್ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದ ಅವರು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಕಾರ್ಯಕ್ರಮಕ್ಕೆ ಆಗಮಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.