ಅಗ್ನಿ ಅವಘಡದಲ್ಲಿ ಹಾನಿಯಾದ ಅಂಗಡಿಗಳಿಗೆ ಶಾಸಕ ಪ್ರಭು ಚವ್ಹಾಣ ಭೇಟಿ ನೊಂದ ಅಂಗಡಿ ಮಾಲೀಕರಿಗೆ ಧೈರ್ಯ ತುಂಬಿದ ಶಾಸಕರು

ಅಗ್ನಿ ಅವಘಡದಲ್ಲಿ ಹಾನಿಯಾದ ಅಂಗಡಿಗಳಿಗೆ ಶಾಸಕ ಪ್ರಭು ಚವ್ಹಾಣ ಭೇಟಿ   ನೊಂದ ಅಂಗಡಿ ಮಾಲೀಕರಿಗೆ ಧೈರ್ಯ ತುಂಬಿದ ಶಾಸಕರು

 ಅಗ್ನಿ ಅವಘಡದಲ್ಲಿ ಹಾನಿಯಾದ ಅಂಗಡಿಗಳಿಗೆ ಶಾಸಕ ಪ್ರಭು ಚವ್ಹಾಣ ಭೇಟಿ

 ನೊಂದ ಅಂಗಡಿ ಮಾಲೀಕರಿಗೆ ಧೈರ್ಯ ತುಂಬಿದ ಶಾಸಕರು 

ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ಔರಾದ(ಬಿ) ಪಟ್ಟಣದಲ್ಲಿ ಅಗ್ನಿ ಅವಘಡದಿಂದ ಹಾನಿಗೊಳಗಾದ ಅಂಗಡಿಗಳಿಗೆ ಜ.11ರಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಮಳಿಗೆ ಮಾಲೀಕರಿಗೆ ಧೈರ್ಯ ತುಂಬಿದರಲ್ಲದೇ ವೈಯಕ್ತಿಕ ಧನಸಹಾಯ ಮಾಡಿದರು.

ಬೆಂಕಿಗೆ ಆಹುತಿಯಾದ ಭಾಂಡೆ ಅಂಗಡಿಗಳು, ಫರ್ನೀಚರ್ ಅಂಗಡಿ, ಚಪ್ಪಲಿ ಅಂಗಡಿ, ಕಿರಾಣಾ ಸ್ಟೋರ್, ತರಕಾರಿ ಮಳಿಗೆ ಸೇರಿದಂತೆ ಎಲ್ಲ ಅಂಗಡಿಗಳಿಗೆ ಖುದ್ದಾಗಿ ವೀಕ್ಷಿಸಿ ಹಾನಿ ಪ್ರಮಾಣವನ್ನು ತಿಳಿದುಕೊಂಡರು. ನಸುಕಿನ ವೇಳೆ ಅಂಗಡಿಗಳಿಗೆ ಬೆಂಕಿ ತಗುಲಿದೆ. ನಂತರ ಒಂದೊAದಾಗಿ ಎಲ್ಲ ಮಳಿಗೆಗೆ ಬೆಂಕಿ ಆವರಿಸಿಕೊಂಡು 11 ಅಂಗಡಿಗಳು ಸುಟ್ಟು ಹೋಗಿವೆ. ಆ ಸಂದರ್ಭದಲ್ಲಿ ಒಂದೇ ಅಗ್ನಿಶಾಮಕ ವಾಹನ ಬಂದಿದೆ. ಅದರಲ್ಲಿ ಅರ್ಧ ಟ್ಯಾಂಕ್ ಮಾತ್ರ ನೀರಿತ್ತು. ಇದರಿಂದಾಗಿ ಸಮಯಕ್ಕೆ ಬೆಂಕಿ ನಂದಿಸಲು ಸಾಧ್ಯವಾಗಿಲ್ಲ ಎಂದು ನೊಂದ ಅಂಗಡಿಗಳ ಮಾಲೀಕರು ಶಾಸಕರೆದುರು ತಮ್ಮ ನೋವುಗಳನ್ನು ತೋಡಿಕೊಂಡರು. ಅಗ್ನಿ ಅವಘಡದ ಬಗ್ಗೆ ತಹಸೀಲ್ದಾರರು ಶಾಸಕರಿಗೆ ಮಾಹಿತಿ ನೀಡಿದರು.

ಈ ವೇಳೆ ಶಾಸಕರು ಜಿಲ್ಲಾಧಿಕಾರಿಯನ್ನು ದೂರವಾಣಿ ಮುಖಾಂತರ ಸಂಪರ್ಕಿಸಿ, ಔರಾದನಲ್ಲಿ ಸಂಭವಿಸಿರುವ ಅಗ್ನಿ ಅವಘಡದಲ್ಲಿ 11 ಅಂಗಡಿಗಳು ಸುಟ್ಟು ಭಸ್ಮವಾಗಿವೆ. ಕುರ್ಚಿ, ಸೋಫಾ, ಭಾಂಡೆ, ಚಪ್ಪಲಿ, ತರಕಾರಿ ಅಂಗಡಿಗಳು ಸುಟ್ಟು ಹೋಗಿವೆ. ಅವುಗಳಲ್ಲಿ ಅಪಾರ ಪ್ರಮಾಣದ ಸಾಮಾನುಗಳಿದ್ದವು. ಅಂಗಡಿಯಲ್ಲಿ ತುಂಬಿದ್ದ ಎಲ್ಲ ಸಾಮಾನುಗಳು ಬೆಂಕಿಗಾಹುತಿಯಾಗಿವೆ. ಅಂಗಡಿ ಮಾಲೀಕರು ಸಾಕಷ್ಟು ನೋವಿನಲ್ಲಿದ್ದಾರೆ. ಅವರಿಗೆ ಸರ್ಕಾರದಿಂದ ಹೆಚ್ಚಿನ ನೆರವು ಕಲ್ಪಿಸಲು ನಾನು ಪ್ರಯತ್ನ ವಹಿಸುತ್ತಿದ್ದೇನೆ. ತಾವು ಕೂಡ ತಮ್ಮ ಹಂತದಲ್ಲಿ ಆಗುವ ಎಲ್ಲ ರೀತಿಯ ಸಹಾಯ ಸಹಕಾರ ನೀಡಬೇಕೆಂದು ತಿಳಿಸಿದರು. ಅಲ್ಲದೇ ಬೀದರ್‌ನಿಂದ ಆಂಬ್ಯುಲೆನ್ಸ್ ಬಂದಿದೆ. ಆದರೆ ಔರಾದ ಅಗ್ನಿಶಾಮಕ ವಾಹನಗಳು ಸಮಯಕ್ಕೆ ಬಂದಿಲ್ಲ. ಅಗ್ನಿಶಾಮಕ ಅಧಿಕಾರಿಗಳು ಸರಿಯಾಗಿ ಸ್ಪಂದಿಸಿಲ್ಲವೆಂದು ಜನತೆ ಹೇಳುತ್ತಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ಸಂಬಂಧಪಟ್ಟ ಅಧಿಕಾರಿಯ ವಿರುದ್ಧ ಕ್ರಮ ಜರುಗಿಸಬೇಕೆಂದು ಹೇಳಿದರು.

ತಹಸೀಲ್ದಾರರು, ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿ ನೊಂದ ವ್ಯಾಪಾರಿಗಳಿಗೆ ನೆರವಾಗುವ ರೀತಿಯಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ಸರ್ಕಾರದಿಂದ ಹೆಚ್ಚಿನ ಪರಿಹಾರ ಕಲ್ಪಿಸಲು ನೆರವಾಗಬೇಕು ಎಂದು ನಿರ್ದೇಶನ ನೀಡಿದರು. ಜೆಸ್ಕಾಂ ಅಧಿಕಾರಿಗಳು ಪಟ್ಟಣದಲ್ಲಿ ಸಂಚರಿಸಿ ವಿದ್ಯುತ್ ಕಂಬಗಳು ಮತ್ತು ತಂತಿಗಳನ್ನು ಗಮನಿಸಬೇಕು. ವಿದ್ಯುತ್ ಅವಘಡಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ವಹಿಸಬೇಕು ಎಂದು ಸೂಚಿಸಿದರು.

 *ಅಗ್ನಿಶಾಮಕ ಅಧಿಕಾರಿಗೆ ತರಾಟೆಗೆ:* ಅಗ್ನಿಶಾಮಕ ದಳದ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಸ್ಪಂದಿಸಿದ್ದರೆ ಅನಾಹುತ ಪ್ರಮಾಣವನ್ನು ತಗ್ಗಿಸಬಹುದಾಗಿತ್ತು. ಆದರೆ ಔರಾದ ಅಗ್ನಿಶಾಮಕ ಠಾಣೆಯ ಅಧಿಕಾರಿಗಳು ನಿಷ್ಕಾಳಜಿ ವಹಿಸಿದ್ದಾರೆ. ಇದು ತುರ್ತು ಇಲಾಖೆಯಾಗಿರುವುದರಿಂದ ದಿನದ 24 ಗಂಟೆಯೂ ಸಜ್ಜಾಗಿರಬೇಕು. ಆದರೆ ಬೆಂಕಿ ನಂದಿಸಲು ಬಂದ ವಾಹನದಲ್ಲಿ ನೀರು ಕಡಿಮೆಯಿರಲು ಕಾರಣವೇನು ? ಅಂಗಡಿಗಳು ಸತತ ಮೂರು ಗಂಟೆ ಉರಿದಿವೆ ಎನ್ನಲಾಗುತ್ತಿದೆ. ಅಷ್ಟು ಸಮಯದ ವರೆಗೆ ಏನು ಮಾಡಿದ್ದೀರಿ ? ಇಲ್ಲಿನ ಅಧಿಕಾರಿಗಳು ಕೆಲಸದ ಬದಲಿಗೆ ದಿನಗಳೆಯಲು ಹೆಚ್ಚಿನ ಆದ್ಯತೆ ನೀಡುತ್ತಿರುವಂತೆ ಕಾಣಿಸುತ್ತಿದೆ ಎಂದು ತೀವ್ರ ತರಾಟೆಗೆ ತೆಗೆದುಕೊಂಡರು. ಜಿಲ್ಲಾ ಅಗ್ನಿಶಾಮಕ ಅಧಿಕಾರಿಯನ್ನು ದೂರವಾಣಿ ಮುಖಾಂತರ ಸಂಪರ್ಕಿಸಿ, ತಮ್ಮ ಇಲಾಖೆಯ ನಿಷ್ಕಾಳಜಿಯಿಂದಾಗಿ ಹಾನಿ ಪ್ರಮಾಣ ಹೆಚ್ಚಾಗಿದೆ. 11 ಜನ ಅಂಗಡಿಗಳು ಸುಟ್ಟುಹೋಗಿವೆ. ಬಹಳಷ್ಟು ನಷ್ಟವಾಗಿದೆ ಎಂದು ಹೇಳಿದರು.

ನಂತರ ಮಾತನಾಡಿ, ಅಗ್ನಿ ಅವಘಡ ನಡೆದಿರುವುದು ತೀವ್ರ ಆಘಾತ ಉಂಟು ಮಾಡಿದೆ. ನನ್ನಿಂದ ಸಾಧ್ಯವಿರುವ ಎಲ್ಲ ರೀತಿಯ ಸಹಕಾರ ನೀಡುತ್ತೇನೆ. ತುರ್ತಾಗಿ ಪತ್ರ ಬರೆದು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಆರ್ಥಿಕ ನೆರವು ಕಲ್ಪಿಸಲು ಪ್ರಯತ್ನಿಸುತ್ತೇನೆ. ನಾನು ನಿಮ್ಮ ಜೊತೆಗೆ ಇದ್ದೇನೆ. ವೈಯಕ್ತಿಕವಾಗಿ ಮತ್ತು ಸರ್ಕಾರದಿಂದ ಅಗತ್ಯ ನೆರವು ಕಲ್ಪಿಸಲು ಪ್ರಯತ್ನಿಸುತ್ತೇನೆ. ತಾವು ಯಾವುದೇ ಕಾರಣಕ್ಕೂ ಧೈರ್ಯ ಕಳೆದುಕೊಳ್ಳದಿರಿ ಎಂದು ಅಂಗಡಿ ಮಾಲೀಕರು ಮತ್ತವರ ಕುಟುಂಬಸ್ಥರಿಗೆ ಧೈರ್ಯ ತುಂಬಿದರು.

ಈ ಸಂದರ್ಭದಲ್ಲಿ ತಹಸೀಲ್ದಾರರಾದ ಮಹೇಶ ಪಾಟೀಲ, ಜೆಸ್ಕಾಂ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ರವಿ ಕಾರಬಾರಿ, ಮುಖಂಡರಾದ ಧೊಂಡಿಬಾ ನರೋಟೆ, ಶಿವಾಜಿರಾವ ಪಾಟೀಲ ಮುಂಗನಾಳ, ರಾಮಶೆಟ್ಟಿ ಪನ್ನಾಳೆ, ಶಿವರಾಜ ಅಲ್ಮಾಜೆ, ದಯಾನಂದ ಘೂಳೆ, ಕೇರಬಾ ಪವಾರ, ಸಂತೋಷ ಪೋಕಲವಾರ, ಗುಂಡಪ್ಪ ಮುಧಾಳೆ, ರಾಮ ನರೋಟೆ, ವೀರಶೆಟ್ಟಿ ಅಲ್ಮಾಜೆ, ಸಂದೀಪ ಪಾಟೀಲ, ಅಶೋಕ ಶಂಬೆಳ್ಳಿ, ರಮೇಶ ಗೌಡಾ, ಆನಂದ ದ್ಯಾಡೆ ಹಾಗೂ ಮತ್ತಿತರರು ಉಪಸ್ಥಿತರಿದ್ದರು.