ಸುಗಮ ಸಂಚಾರಕ್ಕೆ ಸಹಕರಿಸುವಂತೆ ಪಿ.ಐ ಪರಶುರಾಮ ಮನವಿ

ಸುಗಮ ಸಂಚಾರಕ್ಕೆ ಸಹಕರಿಸುವಂತೆ ಪಿ.ಐ ಪರಶುರಾಮ ಮನವಿ

ಸುಗಮ ಸಂಚಾರಕ್ಕೆ ಸಹಕರಿಸುವಂತೆ ಪಿ.ಐ ಪರಶುರಾಮ ಮನವಿ 

ನಾಗರಾಜ್ ದಂಡಾವತಿ ವರದಿ ಶಹಾಬಾದ : -ಸಾರ್ವಜನಿಕರು ಹಾಗೂ ವಾಹನ ಸವಾರರು ನಗರದಲ್ಲಿ ಸಂಚಾರಿ ನಿಯಮಗಳನ್ನು ಪಾಲಿಸುವ ಮೂಲಕ ಸುಗಮ ಸಂಚಾರಕ್ಕೆ ಸಹಕರಿಸುವಂತೆ ನಗರ ಪೊಲೀಸ ಠಾಣೆಯ ಪಿಐ ಪರಶುರಾಮ ವನಂಜಕರ ಹೇಳಿದರು.

ನಗರದ ಗಂಜ ರಸ್ತೆ ಮತ್ತು ಶ್ರೀರಾಮ ಚೌಕ, ಮಜೀದ್ ಚೌಕ್, ನೆಹರು ವೃತ್ತ, ರೈಲ್ವೆ ಸ್ಟೇಷನ್ ಸರ್ಕಲ್ ಸೇರಿದಂತೆ ವಿವಿಧ ಕಡೆ ವಾಹನಗಳ ನಿಲುಗಡೆ ಮತ್ತು ಸಂಚಾರಿ ನಿಯಮಗಳನ್ನು ಪಾಲಿಸುವಂತೆ ತಿಳಿಸಿದರು. 

ಸಾರ್ವಜನಿಕರು ಹಾಗೂ ವಾಹನ ಚಾಲಕರು ಸಂಚಾರಿ ನಿಯಮಗಳನ್ನು ಪಾಲಿಸುವುದರಿಂದ ಅಪಘಾತಗಳನ್ನು ತಡೆಯಬಹುದಾಗಿದೆ ಎಂದು ತಿಳಿಸಿದರು. 

ದ್ವಿಚಕ್ರ ವಾಹನ ಸವಾರರು ತಮ್ಮ ವಾಹನಗಳನ್ನು ನಿಲ್ಲಿಸಲು ನಗರದ ಪ್ರತಿಯೊಂದು ರಸ್ತೆಯಲ್ಲೂ ದ್ವಿಚಕ್ರ ವಾಹನ ನಿಲುಗಡೆಗೆ ಸ್ಥಳಾವಕಾಶವನ್ನು ಕಲ್ಪಿಸಲಾಗಿದೆ, ಇದೇ ರೀತಿಯಲ್ಲಿ ಆಟೋಗಳಿಗೆ ಪ್ರತ್ತೇಕ ನಿಲ್ದಾಣದ ಗಳನ್ನು ಗುರಪತಿಸಲಾಗುವದು, ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದಲ್ಲಿ ಮೊದಲು ವಾರ್ನಿಂಗ ನಂತರ ದಂಡ ಹಾಗೆ ವಾಹನಗಳ ಮುಟ್ಟುಗೋಲು ಎಂದು ಎಚ್ಚರಿಕೆ ನೀಡಿದರು. 

ಅಕ್ರಮಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ವಿಶೇಷವಾಗಿ ಪೊಲೀಸ್ ಗಸ್ತುಗಳನ್ನು ಹಾಕಲಾಗಿದೆ, ಗ್ರಾಮೀಣ ಭಾಗಗಳಲ್ಲೂ ಮುಖ್ಯ ರಸ್ತೆಗಳಲ್ಲಿ ಸಿ.ಸಿ. ಕ್ಯಾಮರಾಗಳನ್ನು ಅಳವಡಿಸಲಾಗುವುದು ಎಂದು ಅವರು ತಿಳಿಸಿದರು.