ರಾಜ್ಯದ ಮತದಾರರಿಗೆ ಸೂರು ಕಲ್ಪಿಸಲು ಮುಂದಾಗದ ಸರಕಾರ, ಕೇರಳ ರಾಜ್ಯಕ್ಕೆ ನೀಡಲು ಮುಂದಾಗಿರುವುದು ಸರಕಾರದ ನಿರ್ಧಾರ ನ್ಯಾಯ ಸಮ್ಮತವೇ? ನಿರ್ದೇಶಕ ಗೌತಮ್ ಪಾಟೀಲ್
ರಾಜ್ಯದ ಮತದಾರರಿಗೆ ಸೂರು ಕಲ್ಪಿಸಲು ಮುಂದಾಗದ ಸರಕಾರ,
ಕೇರಳ ರಾಜ್ಯಕ್ಕೆ ನೀಡಲು ಮುಂದಾಗಿರುವುದು ಸರಕಾರದ ನಿರ್ಧಾರ ನ್ಯಾಯ ಸಮ್ಮತವೇ? ನಿರ್ದೇಶಕ ಗೌತಮ್ ಪಾಟೀಲ್
ಚಿಂಚೋಳಿ :ಕಲ್ಬುರ್ಗಿ,ಬೀದರ್,ಯಾದಗಿರ್, ರಾಯಚೂರ್, ಕೊಪ್ಪಳ, ಬಳ್ಳಾರಿ ಮತ್ತು ವಿಜಯಪುರ ಜಿಲ್ಲೆಗಳ ಗ್ರಾಮೀಣ ಭಾಗದ ಸಾವಿರಾರು ಕಾರ್ಮಿಕ ಕುಟುಂಬಗಳು ಉದ್ಯೋಗಕ್ಕಾಗಿ ರಾಜಧಾನಿ ಬೆಂಗಳೂರಿಗೆ ವಲಸೆ ಬರುತ್ತಿರುವ ಕಾರ್ಮಿಕರಿಗೆ ಆಶ್ರಯ ಪಡೆದುಕೊಳಲು ಸೂರು ಸಿಗದೇ ರಸ್ತೆಯ ಫುತ್ಪಾಟ್ ಲವರ್ ಕೆಳಗೆ ಜೀವನ ನಡೆಸುತ್ತಿದ್ದಾರೆ. ಸರಕಾರ ಇಂತಹ ಕೂಲಿ ಕಾರ್ಮಿಕರಿಗೆ ಮನೆ ಕಲ್ಪಿಸದೇ ಹೊರ ರಾಜ್ಯದ ಕೇರಳ ರಾಜ್ಯಕ್ಕೆ ಆದ್ಯತೆ ನೀಡಿ ಮನೆಗಳು ಕಲ್ಪಿಸಲು ಮುಂದಾಗಿರುವುದು ಸರಕಾರದ ನಿರ್ಣಯ ನ್ಯಾಯ ಸಮ್ಮತವೇ? ಎಂದು ಕಲಬುರಗಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಗೌತಮ್ ವೈಜಿನಾಥ ಪಾಟೀಲ್ ಪ್ರಶಿಸಿದ್ದಾರೆ.
ಪ್ರಕಟಣೆ ನೀಡಿರುವ ಅವರು, ರಾಜ್ಯದ ಬಡ ಕುಟುಂಬಗಳು ಕಟ್ಟಡ ಕಾರ್ಮಿಕರಾಗಿ, ಗೃಹ ಸಹಾಯಕರಾಗಿ, ಭದ್ರತಾ ಸಿಬ್ಬಂದಿಗಳಾಗಿ, ಚಾಲಕರಾಗಿ ಮತ್ತು ಅಸಂಘಟಿತ ದಿನಗೂಲಿ ಕೂಲಿ ಕಾರ್ಮಿಕರಾಗಿ ಉದ್ಯೋಗ ಹರಿಸಿ ಬೆಂಗಳೂರಿಗೆ ವಲಸೆ ಬರುತ್ತಿದ್ದಾರೆ. ಆದರೆ ಆಶ್ರಯ ಪಡೆಯಲು ಸೂರು ಇಲ್ಲದೆ ಫುಟ್ಪಾತ್ ಲೋವರ್ ಕೆಳಗೆ ಅಸುರಕ್ಷತೆ ಪರಿಸ್ಥಿತಿಯಲ್ಲಿ ರಾತ್ರಿ ದಿನಗಳು ಕಳಿಯುತ್ತಿರುವ ಜನರ ಸುರಕ್ಷತೆ ನೋಡದ ಸರಕಾರ. ಕೇರಳ ರಾಜ್ಯದ ಜನರಿಗೆ ಮನೆ ಸೂರು ಕಲ್ಪಿಸುವ ಯೋಜನೆ ಹಾಕಿಕೊಳ್ಳಲು ಮುಂದಾಗಿರುವ ಸರ್ಕಾರದ ಕ್ರಮ ಖಂಡನೀಯ. ರಾಜ್ಯದ ಮತದಾರ ರು ಬೀದಿಯಲ್ಲಿ ಮಲಗುವಾಗ ಹೊರರಾಜ್ಯದ ಜನರಿಗೆ ಆದ್ಯತೆ ಮನೆಗಳು ನೀಡುವುದು ನ್ಯಾಯ ಸಮ್ಮತವೇ? ಸಮಗ್ರ ಸಮೀಕ್ಷೆ ನಡೆಸಿ ಬೆಂಗಳೂರಿನಲ್ಲಿ ದುಡಿಯುತ್ತಿರುವ ಕಲ್ಯಾಣ ಕರ್ನಾಟಕ ಭಾಗದ ವಸತಿರಹಿತ ಬಡ ಜನರಿಗೆ ಮೀಸಲಾತಿಯಡಿ ವಿಶೇಷ ಮನೆಗಳು ಘೋಷಿಸಬೇಕು. ಇನ್ನೂ ಮಾಜಿ ಸಚಿವ ವೈಜಿನಾ ಪಾಟೀಲ್ ಅವರ ಹೋರಾಟದ ಫಲವಾಗಿ ಬಂದ 371 ಜೆ ಕಲಂ ಅಡಿ ರಾಜ್ಯ ಮೀಸಲಾತಿಯಲ್ಲಿ ಸರಕಾರಿ ಉದ್ಯೋಗದಲ್ಲಿ ಶೇ. 8 ರಷ್ಟು ಮೀಸಲಾತಿ ಕಲ್ಪಿಸುವ ಸಮರ್ಪಕ ಮತ್ತು ಪಾರದರ್ಶಕವಾಗಿ ಅನುಷ್ಠಾನಕ್ಕೆ ತಂದು ಜಾರಿ ಮಾಡಲು ಕ್ರಮಕೈಗೊಳ್ಳಬೇಕು.
ರೈತರ ತೊಗರಿ ಬೆಳೆಗೆ ಕನಿಷ್ಠ 2 ಸಾವಿರ ರೂಪಾಯಿ ಸಹಾಯಧನ ಸೇರಿಸಿ ರಾಜ್ಯ ಸರಕಾರ ಖರೀದಿಸಬೇಕು. ಕಲ್ಬುರ್ಗಿ ಮತ್ತು ಯಾದಗಿರ್ ಡಿಸಿಸಿ ಬ್ಯಾಂಕ್ ತೀವ್ರ ಸಂಕಷ್ಟದ ಸ್ಥಿತಿಯಲ್ಲಿದದ್ದು, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ವತಿಯಿಂದ ಠೇವಣಿ ರೂಪದಲ್ಲಿ 500 ಕೋಟಿ ಜಮಾ ಇಡಬೇಕು ಎಂದು ಗೌತಮ್ ಪಾಟೀಲ್ ಸರಕಾರಕ್ಕೆ ಆಗ್ರಹಿಸಿದ್ದಾರೆ.
