ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ಸಂಶೋಧನಾ ವಿಧಾನ, ವ್ಯಕ್ತಿತ್ವ ವಿಕಸನ ಮತ್ತು ಸಂವಹನ ಕೌಶಲ್ಯ ಕುರಿತು ಒಂದು ದಿನದ ಕಾರ್ಯಾಗಾರ
ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ಸಂಶೋಧನಾ ವಿಧಾನ, ವ್ಯಕ್ತಿತ್ವ ವಿಕಸನ ಮತ್ತು ಸಂವಹನ ಕೌಶಲ್ಯ ಕುರಿತು ಒಂದು ದಿನದ ಕಾರ್ಯಾಗಾರ
ಕಲಬುರಗಿ: ಸರಕಾರಿ ಮಹಾವಿದ್ಯಾಲಯ (ಸ್ವಾಯತ್ತ) ಕಲಬುರಗಿಯಲ್ಲಿ ಕಾಲೇಜಿನ ಐ.ಕ್ಯೂ.ಎ.ಸಿ ಪ್ಲೇಸ್ಮಂಟ್ ಸೆಲ್, ಸಾಂಸ್ಕೃತಿಕ ಸಮಿತಿ ಸಂಯೋಜನೆಯಿಂದ ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ಸಂಶೋಧನಾ ವಿಧಾನ, ವ್ಯಕ್ತಿತ್ವ ವಿಕಸನ ಮತ್ತು ಸಂವಹನ ಕೌಶಲ್ಯ ಕುರಿತು ಒಂದು ದಿನದ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಾಗಾರವನ್ನು ಕಲಬುರಗಿ ಮಹಾನಗರ ಪಾಲಿಕೆಯ ಪೂಜ್ಯ ಮಹಾಪೌರರಾದ ಯಲ್ಲಪ್ಪ ನಾಯ್ಕೋಡಿ ಯವರು ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಾಗಾರವನ್ನು ಉದ್ಘಾಟಿಸಿ, ಭಾರತ ದೇಶಕ್ಕೆ ಯುವಕರ ಕೊಡುಗೆ ಅಗತ್ಯವಾಗಿದೆ ಪ್ರತಿಯೊಬ್ಬರು ಶ್ರಮಿಸಬೇಕು ಎಂದು ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಗುಲಬರ್ಗಾ ವಿಶ್ವವಿದ್ಯಾಲಯದ ಇಂಗ್ಲೀಷ್ ಪ್ರಾಧ್ಯಾಪಕರಾದ ಡಾ.ರಮೇಶ ರಾಠೋಡ, ಅವರು ವಿದ್ಯಾರ್ಥಿಗಳಿಗೆ ಭಾಷೆಯ ಬಗ್ಗೆ ಗೌರವ ಇರಬೇಕೆಂದರು. ಕನ್ನಡ ಭಾಷೆಯು ಪ್ರಾಚೀನವಾದದು, ಇದರಿಂದ ಭಾಷೆಯ ಅವಲೋಕನವನ್ನು ತಿಳಿದುಕೊಳ್ಳಬೇಕೆಂದರು, ಇನ್ನೋರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕಲಬುರಗಿಯ ಪ್ರಾದೇಶಿಕ ಕಛೇರಿಯ ಜಂಟಿ-ನಿರ್ದೇಶಕರಾದ, ಪ್ರೊ.ಶಿವಶರಣ.ಬಿ.ಗೊಳ್ಳೆ ಯವರು ವಿದ್ಯಾರ್ಥಿಗಳಿಗೆ ಸಂಶೋಧನ ವಿಧಾನ ಮತ್ತು ವ್ಯಕ್ತಿತ್ವ ವಿಕಸನ ಮತ್ತು ಸಂವಹನದ ಕುರಿತು ಪ್ರತಿಯೊಬ್ಬರು ತಿಳಿದುಕೊಳ್ಳಬೇಕೆಂದರು.. ಕಾಲೇಜಿನ ಪ್ರಾಂಶುಪಾಲರಾದ, ಡಾ.ಸವಿತಾ ತಿವಾರಿ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಗೌರವ ಅಥಿತಿಗಳಾಗಿ, ಡಾ.ವಿಜಯಕುಮಾರ ಸಾಲಿಮನಿ, ಡಾ.ರಾಜಕುಮಾರ ಸಲಗರ, ಡಾ.ಟಿ.ವಿ. ಅಡಿವೇಶ, ಡಾ.ಮಲ್ಲೇಶಪ್ಪ ಕುಂಬಾರ, ಡಾ.ಬಲಭೀಮ ಸಾಂಗ್ಲಿ, ಡಾ.ಶಾರದಾದೇವಿ ಜಾಧವ, ಡಾ.ವಿಜಯಲಕ್ಷಿö್ಮ ಬಿರಾದಾರ, ಡಾ.ರೋಲೆಕರ್ ನಾರಾಯಣ ಡಾ.ವಿಜಯಲಕ್ಷಿö್ಮ ಪಾಟೀಲ, ಡಾ.ಪ್ರಶಾಂತಕುಮಾರ, ಡಾ.ರಾಜಶೇಖರ ಮಡಿವಾಳ, ಡಾ.ಮಹಾಂತೇಶ ಸ್ವಾಮಿ, ಡಾ.ಅರುಣಕುಮಾರ ಸಲಗರ, ಡಾ.ರಾಬಿಯಾ ಇಫ್ಫತ್, ಡಾ.ಸುರೇಶ ಮಾಳೆಗಾಂವ, ಡಾ.ರಾಮಕೃಷ್ಣ, ಡಾ.ದೌಲಪ್ಪ, ಡಾ.ಚಿವುಕುಲ ಶ್ರೀಕಾಂತ, ಡಾ.ಚಂದ್ರಕಾAತ ಜಮಾದಾರ, ಡಾ.ಶಿವಲಿಂಗಪ್ಪ ಪಾಟೀಲ, ಡಾ.ರೆಹಮಾನ ಮಹ್ಮದ ಸಾಬ, ಡಾ.ನಾಗಪ್ಪ ಗೋಗಿ, ಡಾ.ಶಾಮಲಾ ಸ್ವಾಮಿ, ಉಪಸ್ಥಿತರಿದ್ದರು. ಇದಲ್ಲದೇ ಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ, ಡಾ.ಚಾಂದಬಾಷ್ ಎಂ, ಡಾ.ಗಣಪತಿ ಬಿ. ಸಿನ್ನೂರ, ಡಾ.ಪದ್ಮಾವತಿ ಧನ್ನಿಯವರು ವಿಷಯ ಮಂಡಿಸಿದರು.
ವಿದ್ಯಾರ್ಥಿನಿ ಶುಭ ಪ್ರಾರ್ಥಿಸಿದರು, ಡಾ.ರಾಜಕುಮಾರ ಸಲಗರ ಸ್ವಾಗತಿಸಿದರು, ಡಾ.ಮಲ್ಲೇಸಪ್ಪಾ ಕುಂಬಾರ ಪ್ರಾಸ್ತಾವಿಕವಾಗಿ ಮಾತನಾಡಿದರು, ಡಾ.ಬಲಭೀಮ ಸಾಂಗ್ಲಿ ನಿರೂಪಿಸಿದರು. ಕಾಲೇಜಿನ ಎಲ್ಲಾ ಬೋಧಕ/ಬೋಧಕೇತರ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು. ಹಾಗೂ ಎಲ್ಲಾ ಸಮಿತಿಯ ಸಂಚಾಲಕರು ಭಾಗವಹಿಸಿದ್ದರು.