ಪುಸ್ತಕ ಓದುವ ಸಂಸ್ಕೃತಿ ಬೆಳೆಸಿಕೊಳ್ಳಿ

ಪುಸ್ತಕ ಓದುವ ಸಂಸ್ಕೃತಿ ಬೆಳೆಸಿಕೊಳ್ಳಿ

ಪುಸ್ತಕ ಓದುವ ಸಂಸ್ಕೃತಿ ಬೆಳೆಸಿಕೊಳ್ಳಿ

ಶಹಪುರ : ಪ್ರತಿಯೊಬ್ಬರೂ ಆಸಕ್ತಿಯಿಂದ ಪುಸ್ತಕ ಓದುವ ಸಂಸ್ಕೃತಿ ಬೆಳೆಸಿಕೊಂಡಾಗ ಮಾತ್ರ ಹೆಚ್ಚಿನ ಜ್ಞಾನಾರ್ಜನೆಯನ್ನು ಪಡೆಯಲು ಸಾಧ್ಯ ಎಂದು ಗ್ರಾಮದ ಹಿರಿಯ ಮುಖಂಡರಾದ ನಿಂಗಣ್ಣ ಮುದ್ದಾ ಹೇಳಿದರು.

ತಾಲೂಕಿನ ಸಗರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಗ್ರಂಥಾಲಯದಲ್ಲಿ ಗ್ರಂಥಾಲಯ ಸಪ್ತಹಾ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು, ಯುವ ಸಮೂಹ ಹೆಚ್ಚು ಓದಿನ ಕಡೆಗೆ ಆಸಕ್ತಿ ಹೊಂದುವ ಹಿತ ದೃಷ್ಟಿಯಿಂದ ರಾಜ್ಯ ಸರ್ಕಾರ ನವೆಂಬರ್ 14 ರಿಂದ 20 ರವರೆಗೆ ಗ್ರಂಥಾಲಯ ಸಪ್ತಾಹ ದಿನಾಚರಣೆ ಆಚರಿಸಲಾಗುತ್ತಿದೆ ಎಂದು ನುಡಿದರು.

ಸಾಹಿತಿ ಪತ್ರಕರ್ತ ಬಸವರಾಜ ಶಿಣ್ಣೂರ ಮಾತನಾಡಿ ಗ್ರಂಥಾಲಯಗಳು ಜೀವಂತ ದೇವಾಲಯಗಳಿದ್ದಂತೆ,ಅಲ್ಲಿರುವ ನಾಡಿನ ಹಿರಿಯ ಸಾಹಿತಿಗಳ, ದಾರ್ಶನಿಕರ,ಶರಣರ,ಪುಸ್ತಕಗಳನ್ನು ಓದುವುದರ ಜೊತೆಗೆ ನೈತಿಕ ಹಾಗೂ ಮಾನವೀಯ ಮೌಲ್ಯಗಳ ಅಳವಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಅಕ್ಕಮಹಾದೇವಿ ಮಠದ ಮಾತೋಶ್ರೀ ಶರಣಮ್ಮ ತಾಯಿ, ನಿವೃತ್ತ ಶಿಕ್ಷಕ ವೀರಭದ್ರಯ್ಯ,ಗ್ರಂಥಾಲಯ ಮೇಲ್ವಿಚಾರಕ ವಿಶ್ವರಾಧ್ಯ ದೇಸಾಯಿ ಮಠ,ಚಂದಣ್ಣ ಚಡಗುಂಡ,ಗ್ರಾಮ ಪಂಚಾಯಿತಿ ಅಧ್ಯಕ್ಷ ಗಿರೀಶ್ ಸಿದ್ರಾ, ಗಣೇಶ್ ಜಾಯಿ ಸೇರಿದಂತೆ ವಿವಿಧ ಶಾಲೆಯ ವಿದ್ಯಾರ್ಥಿಗಳು ಹಾಜರಿದ್ದರು.