ಗಣೇಶ ನಗರ ಉದ್ಯಾನವನದಲ್ಲಿ ಬೋರವೆಲ್ ಚಾಲನೆ
ಗಣೇಶ ನಗರ ಉದ್ಯಾನವನದಲ್ಲಿ ಬೋರವೆಲ್ ಚಾಲನೆ
ಕಲಬುರಗಿ: ನಗರದ ವಾರ್ಡ್ ನಂ.55ರ ವ್ಯಾಪ್ತಿಗೆ ಬರುವ ಶ್ರೀ ಗಣೇಶ ನಗರದಲ್ಲಿರುವ ಉದ್ಯಾನವನದಲ್ಲಿ ಮಹಾನಗರ ಪಾಲಿಕೆಯ ಅನುದಾನದಲ್ಲಿ ನಿರ್ಮಿಸಲಾದ ಬೋರವೆಲ್ (ಕೋಳವೆ ಬಾವಿ)ಯನ್ನು ಮಹಾನಗರ ಪಾಲಿಕೆ ಸದಸ್ಯೆ ಅರ್ಚನಾ ಬಸವರಾಜ ಪಾಟೀಲ ಬಿರಾಳ ಅವರು ಇಂದು ಉದ್ಘಾಟಿಸಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬಡಾವಣೆಯ ನಾಗರಿಕರಿಗೆ ನೀರಿನ ಮೂಲಭೂತ ಸೌಲಭ್ಯ ಕಲ್ಪಿಸುವುದು ನಮ್ಮ ಪ್ರಮುಖ ಆದ್ಯತೆಯಾಗಿದ್ದು, ಉದ್ಯಾನವನ ಹಾಗೂ ಸುತ್ತಮುತ್ತಲ ನಿವಾಸಿಗಳಿಗೆ ಈ ಬೋರವೆಲ್ ಉಪಯುಕ್ತವಾಗಲಿದೆ ಎಂದರು. ಮುಂದಿನ ದಿನಗಳಲ್ಲಿ ಇನ್ನೂ ಅಗತ್ಯವಿರುವ ಅಭಿವೃದ್ಧಿ ಕಾರ್ಯಗಳಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಆನಂದ್ ತೀರ್ಥ ನವಲಿ, ಚಂದ್ರಶೇಖರಯ್ಯ ಸ್ವಾಮಿ, ಅಮರನಾಥ್ ಕುಲ್ಕರ್ಣಿ, ವಿನಯ್ ಕುಲಕರ್ಣಿ, ಸಂತೋಷ್ ಮುನ್ನಳ್ಳಿ, ಬಸವರಾಜ ಪಾಟೀಲ ಬಿರಾಳ, ಶಿವಕುಮಾರ್ ಹಿರೇಮಠ, ಗೋವರ್ಧನ ರೆಡ್ಡಿ, ಶ್ರೀಕಾಂತ್ ಅಗ್ನಲ್, ಜಯತೀರ್ಥ ಶರ್ಮಾ, ಟೀಕರಾವ್ ಚವಾಣ್, ಮಹೇಶ್ ಸುಳೇಗಾನ್, ಭೀಮಣ್ಣ ಮಿರ್ಜಿ, ಪಲ್ಲೇದ ಸೇರಿದಂತೆ ಬಡಾವಣೆಯ ಮುಖಂಡರು, ಮಹಿಳೆಯರು ಹಾಗೂ ಮಕ್ಕಳು ಹಾಜರಿದ್ದರು.
ಸ್ಥಳೀಯ ನಿವಾಸಿಗಳು ಬೋರವೆಲ್ ನಿರ್ಮಾಣದಿಂದ ನೀರಿನ ಸಮಸ್ಯೆ ನಿವಾರಣೆಯಾಗಲಿದೆ ಎಂದು ಸಂತಸ ವ್ಯಕ್ತಪಡಿಸಿದರು.
