ಸಿದ್ದಲಿಂಗೇಶ್ವರ ಪ್ರಕಾಶನ ವಾರ್ಷಿಕೋತ್ಸವ ,105ದು ಕೃತಿ ಲೋಕಾರ್ಪಣೆ

ಸಿದ್ದಲಿಂಗೇಶ್ವರ ಪ್ರಕಾಶನ ವಾರ್ಷಿಕೋತ್ಸವ ,105ದು ಕೃತಿ ಲೋಕಾರ್ಪಣೆ

ಶ್ರೀ ಸಿದ್ದಲಿಂಗೇಶ್ವರ ಪ್ರಕಾಶನದ 105 ಕೃತಿಗಳ ಲೋಕಾರ್ಪಣೆ ಮತ್ತು 49ನೇ ಪ್ರಕಾಶನ ವಾರ್ಷಿಕೋತ್ಸವ ಸಮಾರಂಭ 10 ರಂದು 

ಕಲಬುರಗಿ : ಸಿದ್ದಲಿಂಗೇಶ್ವರ ಪ್ರಕಾಶನ ವಾರ್ಷಿಕೋತ್ಸವ ,105ದು ಕೃತಿ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ ಎಂದು ಸಂಸ್ಥೆ ಅಧ್ಯಕ್ಷ ಬಸವರಾಜ ಕೊನೇಕ ಹೇಳಿದರು.

ನಗರದ ಸಿದ್ದಲಿಂಗೇಶ್ವರ ಪುಸ್ತಕ ಮಹಲನಲ್ಲಿ ಪತ್ರಿಕೆ ಗೋಷ್ಠಿ ನಡೆಸಿದವರು,10.01.2026 ರಂದು ಶನಿವಾರ ಬೆಳಗ್ಗೆ 10.30 ಗಂಟೆಗೆ ಚೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಹೇಳಿದರು.

ಕಾರ್ಯಕ್ರಮಕ್ಕೆ ಮುತ್ಯಾನ ಬಬಲಾದ ಪೂಜ್ಯಶ್ರೀ ಡಾ.ಮ.ನಿ.ಪ್ರ.ಗುರುಪಾದಲಿಂಗ ಶಿವಯೋಗಿಗಳ ಸಾನಿಧ್ಯ ವಹಿಸುವರು ,ಉದ್ಘಾಟನೆಯನ್ನು ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಶಶಿಕಾಂತ ಉಡಿಕೇರಿಯವರು ನೆರವೇರಿಸಲಿದ್ದಾರೆ.ಪುಸ್ತಕಗಳ ಲೋಕಾರ್ಪಣೆಯನ್ನು ರಾಯಚೂರಿನ ಆದಿಕವಿ ಮಹರ್ಷಿ ಶ್ರೀ ವಾಲ್ಮೀಕಿ ವಿಶ್ವವಿದ್ಯಾಲಯ ಕುಲಪತಿಗಳು ಮತ್ತು ವಿದ್ವಾಂಸರಾದ ಪ್ರೊ. ಶಿವಾನಂದ ಕೆಳಗಿನಮನಿಯವರು ಲೋಕಾರ್ಪಣೆ ಮಾಡಲಿದ್ದಾರೆ.ಮುಖ್ಯ ಅತಿಥಿಗಳಾಗಿ ಪ್ರಖ್ಯಾತ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ. ಸಿ.ಆರ್.ಚಂದ್ರಶೇಖರ್ ಆಗಮಿಸುವರು. ಗೌರವ ಉಪಸ್ಥಿತಿಯನ್ನು ಅಖಿಲ ಭಾರತ 11ನೇ ದಲಿತ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ. ಜಯದೇವಿ ದೇವಿ ಗಾಯಕವಾಡ ಅವರು ಮತ್ತು ಪ್ರಾಸ್ತಾವಿಕ ನುಡಿಯನ್ನು ಹಿರಿಯ ಸಾಹಿತಿ ಮತ್ತು ಸಲಹಾ ಸಮಿತಿಯ ಸದಸ್ಯರಾದ ಪ್ರೊ. ಶಿವರಾಜ ಪಾಟೀಲ ಅವರು ನುಡಿಯಲಿದ್ದಾರೆ. ಅಧ್ಯಕ್ಷತೆಯನ್ನು ಪ್ರಕಾಶನ ಸಂಸ್ಥೆಯ ಸಂಸ್ಥಾಪಕರಾದ ಡಾ. ಬಸವರಾಜಜಿ.ಕೊನೇಕ ಅವರು ವಹಿಸಲಿದ್ದಾರೆ. ಇದೇ ವೇಳೆಗೆ ಸಲಹಾ ಸಮಿತಿ ಸದಸ್ಯರನ್ನು,ಲೇಖಕರನ್ನು, ಸಂಪಾದಕರನ್ನು ಸನ್ಮಾನಿಸಲಾಗುವುದು ಎಂದು ಪ್ರಕಾಶಕರಾದ ಡಾ.ಬಸವರಾಜ ಜಿ.ಕೊನೇಕ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

         ಕಳೆದ 49 ವರ್ಷಗಳಿಂದ ನಿರಂತರವಾದ ಶ್ರೀ ಸಿದ್ದಲಿಂಗೇಶ್ವರ ಬುಕ್ರಿಪುರ ಮತ್ತು ಪ್ರಕಾಶನ ಸಂಸ್ಥೆ ತನ್ನದೇ ಆದ ಇತಿಹಾಸವನ್ನು ನಿರ್ಮಿಸಿಕೊಂಡು ಬರುತ್ತಿದೆ. ಈ ವರ್ಷವೂ ಸಹಿತ 25 ಜನಪ್ರಿಯ ಮಾಲೆಗಳು ಮತ್ತು 10 ಸಾಹಿತ್ಯ ಕೃತಿಗಳು,ಉಳಿದ 70 ಪಠ್ಯಪುಸ್ತಕಗಳು ಲೋಕಾರ್ಪಣೆಗೊಳ್ಳಲಿದೆ.ಆಕರ್ಷಿಸುವ ಮುಖಪುಟ, ಮೌಲಿಕ ವಸ್ತು, ವಿಷಯ ಹೊಂದಿದ,,ಕಡಿಮೆ ಬೆಲೆಯಲ್ಲಿಮುದ್ರಿಸಲಾಗಿದೆ. 

                     ಪ್ರಕಾಶನ ಸಂಸ್ಥೆ 12-12-1977 ರಲ್ಲಿ ಪ್ರಾರಂಭವಾಗಿದ್ದು ಒಂದು ಸಣ್ಣ ಗೂಡಂಗಡಿಯಿಂದ. ನಂತರ ಗುಲ್ಬರ್ಗಾ ವಿಶ್ವವಿದ್ಯಾಲಯದ ಪಠ್ಠಕ್ಕೆ ಅನುಗುಣವಾದ ಪಠ್ಯಪುಸ್ತಕಗಳನ್ನು ಪ್ರಕಟಿಸಿ,ಈ ಪ್ರದೇಶದ ವಿದ್ಯಾರ್ಥಿಗಳಿಗೆ, ಉಪನ್ಯಾಸಕರಿಗೆ ನೆರವಾದ ಎಂಬ. ಪ್ರತಿಭಾವಂತ ಉಪನ್ಯಾಸಕರ ಪತ್ತೆ ಹಚ್ಚಿ ಬರೆಯಲು ಪ್ರೋತ್ಸಾಹ ನೀಡಿದ್ದರಿಂದ ಲೇಖಕರಾಗಲು ಸಾಧ್ಯವಾಗಿದೆ.ಇಂದು ನಮ್ಮ ಪ್ರಾಧ್ಯಾಪಕರು, ಉಪನ್ಯಾಸಕರು ಬರೆದ ಪಠ್ಯಗಳು ಎಲ್ಲಾ ವಿಶ್ವವಿದ್ಯಾಲಯ ಮತ್ತು ಎಲ್ಲಾ ಜಿಲ್ಲೆ ಗಳಲ್ಲಿ ಮಾರಾಟವಾಗುತ್ತಿವೆ ಎಂದರು 

       ಸಾಹಿತ್ಯ ಕೃತಿಗಳನ್ನು ಪ್ರಕಟಣೆ ಮಾಡುತ್ತಾ ಬಂದು, 25 ವರ್ಷದ ಬೆಳ್ಳಿ ಹಬ್ಬದ ಸಂದರ್ಭದಲ್ಲಿ ಬೆಳ್ಳಿ ಸಿದ್ದ ಮಾಲಿಕೆಯನ್ನು ಪ್ರೊ‌ ಭಾಲಚಂದ್ರ ಜಯಶೆಟ್ಟಿ ಮತ್ತು ಡಾ. ಗವಿಸಿದ್ದಪ್ಪ ಪಾಟೀಲ ಅವರ ನೇತೃತ್ವದಲ್ಲಿ ಕಲ್ಯಾಣ ಕರ್ನಾಟಕದ 25 ಸಾಹಿತಿಕ ಮೌಲಿಕ ಕೃತಿಗಳನ್ನು ಪ್ರಕಟಿಸಲಾಯಿತು. ಅಲ್ಲಿಂದ ಪ್ರಾರಂಭವಾದ ಸಾಹಿತ್ಯದಲ್ಲಿ ಕೃತಿಗಳ ಪ್ರಕಟಣೆ ತನ್ನ ಇತಿಹಾಸದ ದಾಖಲೆಯನ್ನು ಮುರಿಯುತ್ತಾ ನಡೆದುಕೊಂಡು ಬಂದಿದೆ.

ಸಾಹಿತ್ಯ ಕೃತಿ ಗಳು, ಜನಪ್ರಿಯ ಮಾಲಿಕೆ,ತಾಲೂಕು ದರ್ಶನ,ಸಾಹಿತಿ ಮಾಲಿಕೆ,25 ವಾಚಿಕೆಗಳು,ಕನ್ನಡ ಸಾಹಿತ್ಯ ಚರಿತ್ರೆ ಮಾಲಿಕೆಗಳು,ಸಂಸ್ಮರಣ ಗ್ರಂಥ,ಅಭಿನಂದನ ಗ್ರಂಥ ಪ್ರಕಟವಾಗಿವೆ.ಅದರಂತೆ ಸಾಹಿತ್ಯ ಮಾಲಿಕೆಯ ಕಥೆ,ನಾಟಕ,ಪ್ರಬಂಧ, ವಿಮರ್ಶೆ, ಚಿಂತನೆ, ವೈಚಾರಿಕ, ವೈದ್ಯ,ದಲಿತ,ಬಂಡಾಯ,ಮಹಿಳಾ, ವೈಜ್ಞಾನಿಕ, ವಚನ,ಜಾನಪದ, ತತ್ವಪದ, ಸಂಪಾದನೆ ಮೊದಲಾದ ಪ್ರಕಾರದಲ್ಲಿ 3700 ಕ್ಜೂ ಹೆಚ್ಚು ಗ್ರಂಥ ಪ್ರಕಟಿಸಿದೆ ಎಂದು ಹೇಳಿದರು.

    ಇಲ್ಲಿ ಹೊಸ ಲೇಖಕರು, ಎಲ್ಲಾ ಜಾತಿ,ವರ್ಗ,ವರ್ಣದ ವರು,ಲಿಂಗ ತಾರತಮ್ಯತೆ ಇಲ್ಲದ ಪ್ರತಿಭಾವಂತ ಲೇಖಕರು, ಲೇಖಕಿಯರನ್ನು ಹುಡುಕಿ,ಶೋಧಿಸಿ ಹೊರ ತರಲಾಗಿದೆ.

ಮುಕ್ತವಾಗಿ ಬರಹಗಾರರ ಬರಹ ಮೌಲಿಕತೆಗೆ ಆದ್ಯತೆ ನೀಡಲಾಗಿದೆ.ಇದರಿಂದ ರಾಜ್ಯ ಮಟ್ಟದ ಲೇಖಕರು ಆಗಿದ್ದಾರೆ.ಒಂದಿಲ್ಲೊಂದು ಪುಸ್ತಕಗಳಿಗೆ ಪ್ರಶಸ್ತಿ ಪಡೆದಿದ್ದಾರೆ.ಇದೊಂದು ಹೆಮ್ಮೆಯ ಸಂಗತಿ. ಡಾ.ಚಿ.ಸಿ.ನಿಂಗಣ್ಣನವರ ಕನ್ನಡ ಸಾಹಿತ್ಯ ಸಂಸ್ಕೃತಿ ಕೋಶ ಜನ ಮನ್ನಣೆ ಪಡೆದಿದೆ.

        ಡಾ.ಬಸವರಾಜ ಪಾಟೀಲ ಸೇಡಂ ಅವರ ಆಶಯದಂತೆ ಡಾ.ಜಿ.ಎಸ್.ಶಿವರುದ್ರಪ್ಪರ ಪೂರ್ವ ಪಶ್ಚಿಮ, ಕೃತಿಗಳನ್ನು ಹಿಂದಿ- ಇಂಗ್ಲಿಷ್ ಭಾಷೆಗೆ ಅನುವಾದಿಸಿ ಪ್ರಕಟಿಸಲಾಗಿದೆ.ಇದರಿಂದ ರಾಷ್ಟ್ರ - ಅಂತರಾಷ್ಟ್ರೀಯ ಮಟ್ಟಕ್ಕೆ ಹೋಗಬೇಕೆಂಬ ಕನಸು ಇದೆ.

      ಕಲ್ಯಾಣ ಕರ್ನಾಟಕಕ್ಕೆ ಸೀಮಿತವಾದ ಪ್ರಕಾಶನ ಸಂಸ್ಥೆ ಇಂದು ಕರ್ನಾಟಕದ ಎಲ್ಲ ಜಿಲ್ಲೆ,ಗಳಿಗೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ.ಅದರಂತೆ ಕರ್ನಾಟಕ ಆಚೆಗೂ ಭಾರತ ದೇಶಕ್ಕೂ ಇನ್ನೂ ವಿಸ್ತರಿಸುವ ಹಂತದಲ್ಲಿ ಈ ಸಂಸ್ಥೆ ಬೆಳವಣಿಗೆಯಾಗಿರುವುದು ಸಂತಸ ತಂದಿದೆ.

      ಸಂಭ್ರಮದ 2027 ಕ್ಕೆ:- ಪ್ರಕಾಶನ ಸಂಸ್ಥೆ ಮುಂದಿನ ವರ್ಷ ಸಂಸ್ಥಾಪಕ ಅಧ್ಯಕ್ಷನಾದ ನನಗೆ 75 ವರ್ಷ, ಶ್ರೀ ಸಿದ್ಧಲಿಂಗೇಶ್ವರ ಬುಕ್ ಡಿಪೋ ಮತ್ತು ಪ್ರಕಾಶನ ಸಂಸ್ಥೆಗೆ 50 ವರ್ಷ, ಶ್ರೀ ಸಿದ್ದಲಿಂಗೇಶ್ವರ ಪ್ರಕಾಶನಕ್ಕೆ 25 ವರ್ಷ. ಈ ರೀತಿಯ ಒಂದು ವರ್ಷದ ಸಂಭ್ರಮವನ್ನು ನಾವು ಜನವರಿ 2027 ರಿಂದ ಪ್ರಾರಂಭಿಸಿ ಡಿಸೆಂಬರ್ 12- 12-2027 ಕ್ಕೆ ಈ ಸಂಭ್ರಮವನ್ನು ಆಚರಿಸುವಂತೆ ನಮ್ಮ ಸಲಹಾ ಸಮಿತಿಯವರು ಹೇಳಿದ್ದಾರೆ. ಹಾಗೇ ಯೋಜನೆ ರೂಪಿಸಿದ್ದ ನ್ನು ಮುಂದೆ ತಮ್ಮ ಗಮನಕ್ಕೆ ತರಬಯಸುತ್ತೇವೆ.

          ನಮ್ಮ ಶ್ರೀಮತಿ ಬಸಮ್ಮ ಕೊನೇಕ ಹೆಸರಲ್ಲಿ ಬಸವ ಪ್ರಕಾಶನ ಪ್ರಾರಂಭಿಸಿದ್ದೇವು.ಅವರು ಲಿಂಗೈಕರಾದ ಮೇಲೆ ನನ್ನ ಸಣ್ಣ ಮಗ ಶರಣಬಸವ ನೋಡುತ್ತಿದ್ದಾನೆ.ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ದೊಡ್ಡ ಮಗ ಸಿದ್ಧಲಿಂಗ ಕೊನೇಕ ನೋಡುತ್ತಿದ್ದಾರೆ‌.ಹೀಗಾಗಿ ಮೂರು ಸಹೋದರಿ

ಸಂಸ್ಥೆಗಳಾಗಿ ಹೊರಬಂದಿವೆ‌‌.ಇದಕ್ಕೆ ಸಲಹಾ ಸಮತಿ ಸದಸ್ಯರು,ಕುಲಪತಿಗಳು,ಕುಲಸಚಿವರು,ಪ್ರಾಂಶುಪಾಲರು,ಗ್ರಂಥಪಾಲಕರು, ಉಪನ್ಯಾಸಕರು,ಲೇಖಕರು, ಓದುಗರು, ವಿದ್ಯಾರ್ಥಿಗಳು,ಪುಸ್ತಕ ವ್ಯಾಪಾರಿಗಳು ಮತ್ತು ಅಭಿಮಾನಿ ಗಳು,ಪತ್ರಿಕಾ ಮಾಧ್ಯಮ ಹಾಗೂ ಸಮೂಹ ಮಾಧ್ಯಮ ಗಳು ಸಹಕರಿಸಿದ್ಧರಿಂದ ಈ ಮಟ್ಟಿಗೆ ಬೆಳೆಯಲು ಸಾಧ್ಯವಾಯಿತು ಎಂದು ಡಾ.ಬಸವರಾಜ ಕೊನೇಕ ಹಂಚಿಕೊಂಡರು.

     ಪತ್ರಿಕಾ ಗೋಷ್ಠಿಯಲ್ಲಿ ಸಲಹಾ ಸಮಿತಿ ಸದಸ್ಯರಾದ ಡಾ.ಗವಿಸಿದ್ಧಪ್ಪ ಎಚ್‌.ಪಾಟೀಲ, ಪ್ರೊ.ಶಿವರಾಜ ಪಾಟೀಲ,ಡಾ.ಸ್ವಾಮಿರಾವ್ ಕುಲಕರ್ಣಿ, ಡಾ.ಚಿ.ಸಿ.ನಿಂಗಣ್ಣ,ಡಾ.ಶರಣಬಸಪ್ಪ ವಡ್ಡನಕೇರಿ,ಸಿದ್ಧಲಿಂಗ ಕೊನೇಕ, ಶರಣಬಸವ ಕೊನೇಕ ಇದ್ದರು‌