ದೀಪಾ ಭಾಸ್ತಿಗೆ "ಸ್ವಾತಂತ್ರ್ಯದ ಅಮೃತ ಹೆಜ್ಜೆಗಳು" ಕೃತಿ ಕೊಡುಗೆ
ದೀಪಾ ಭಾಸ್ತಿಗೆ "ಸ್ವಾತಂತ್ರ್ಯದ ಅಮೃತ ಹೆಜ್ಜೆಗಳು" ಕೃತಿ ಕೊಡುಗೆ
ಕಲಬುರಗಿ : ಬೂಕರ್ ಪ್ರಶಸ್ತಿ ಪಡೆದ ಖ್ಯಾತ ಅನುವಾದಕಿ ದೀಪಾ ಭಾಸ್ತಿ ಅವರಿಗೆ ಕಲಬುರಗಿ ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಮುಖ್ಯಸ್ಥರಾದ ಡಾ. ಸದಾನಂದ ಪೆರ್ಲ ಕೃತಿ ನೀಡಿ ಗೌರವಿಸಿದರು.
ಕಲಬುರಗಿಯ ಸಿದ್ದಲಿಂಗೇಶ್ವರ ಬುಕ್ ಡಿಪೋದಲ್ಲಿ ಏರ್ಪಡಿಸಿದ ಸಾಹಿತಿಗಳ ಸಮ್ಮಿಲನ ಕಾರ್ಯಕ್ರಮದಲ್ಲಿ ಡಾ.ಪೆರ್ಲ ಅವರ ಸಂಪಾದಿತ "ಸ್ವಾತಂತ್ರ್ಯದ ಅಮೃತ ಹೆಜ್ಜೆಗಳು"ಕೃತಿ ನೀಡಿ ಗೌರವಿಸಿದರು.
ಹವ್ಯಾಸಿ ಪತ್ರಿಕೋದ್ಯಮಿ ಹಾಗೂ ಬರಹಗಾರರಾಗಿರುವ ದೀಪಾ ಭಾಸ್ತಿ ಅವರು ಅನುವಾದ ಕ್ಷೇತ್ರಕ್ಕೆ ಹೆಚ್ಚಿನ ಕೊಡುಗೆ ನೀಡಿ ಕನ್ನಡ ಸಾಹಿತ್ಯ ಲೋಕಕ್ಕೆ ಇನ್ನಷ್ಟು ಕೀರ್ತಿ ತರಲಿ ಎಂದು ಶುಭ ಹಾರೈಸಿದರು., ಈ ಸಂದರ್ಭದಲ್ಲಿ ಬಸವರಾಜ್ ಕೊನೇಕ್, ಎಚ್ ಟಿ ಪೋತೆ, ಡಾ ಚಿ ಸಿ ನಿಂಗಣ್ಣ, ಸಂಧ್ಯಾ ಹೊನಗುಂಟಿಕರ್ ಡಾ. ಮೀನಾಕ್ಷಿ ಬಾಳಿ ಮತ್ತಿತರರಿದ್ದರು
