ನಾರಿ ಶಕ್ತಿ ಪ್ರಶಸ್ತಿಗೆ ಜಮುನಾ ಗುತ್ತೇದಾರ್, ವನಿತಾ ಗುತ್ತೇದಾರ್ ಆಯ್ಕೆ
ನಾರಿ ಶಕ್ತಿ ಪ್ರಶಸ್ತಿಗೆ ಜಮುನಾ ಗುತ್ತೇದಾರ್, ವನಿತಾ ಗುತ್ತೇದಾರ್ ಆಯ್ಕೆ
ಕಲಬುರಗಿ : ಕರ್ನಾಟಕ ಆರ್ಯ ಈಡಿಗ ಮಹಿಳಾ ಸಂಘದ ನಾರಿ ಶಕ್ತಿ ಪ್ರಶಸ್ತಿಗೆ ಸಮಾಜ ಸೇವಕರಾದ ಕಲಬುರಗಿ ಜಿಲ್ಲಾ ಈಡಿಗ ಸಮುದಾಯದ ಶ್ರೀಮತಿ ಜಮುನಾ ಅಶೋಕ್ ಗುತ್ತೇದಾರ್ ಮತ್ತು ಶ್ರೀಮತಿ ವನಿತಾ ಚಂದ್ರಕಾಂತ್ ಗುತ್ತೇದಾರ್ ಅವರನ್ನು ಆಯ್ಕೆ ಮಾಡಲಾಗಿದೆ.
ಕರ್ನಾಟಕ ಆರ್ಯ ಈಡಿಗ ಸಂಘವು ಜನವರಿ 4ರಂದು ( ಭಾನುವಾರ ) ಬೆಂಗಳೂರಿನ ನಿಮ್ಹಾನ್ಸ್ ಸಭಾಂಗಣದಲ್ಲಿ ಏರ್ಪಡಿಸಿದ ನಾರಿ ಶಕ್ತಿ ರಾಷ್ಟ್ರೀಯ ಸಮಾವೇಶದಲ್ಲಿ ಗಣ್ಯರ ಸಮ್ಮುಖದಲ್ಲಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ.
ಶ್ರೀಮತಿ ಜಮುನಾ ಗುತ್ತೇದಾರ್ ಸ್ಟೇಷನ್ ಗಾಣಗಾಪುರದಲ್ಲಿ 150ಕ್ಕೂ ಹೆಚ್ಚು ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದು ಆರೋಗ್ಯ ರಂಗದಲ್ಲಿ ಮತ್ತು ಕೃಷಿಕರಾಗಿಯೂ, ಮಹಿಳಾ ಸಬಲೀಕರಣ ಕ್ಷೇತ್ರದಲ್ಲೂ ಗುರುತಿಸಿಕೊಂಡಿದ್ದಾರೆ. ಸ್ವತಃ ಗಾಯಕಿ ಆಗಿರುವ ಇವರು ಗ್ರಾಮೀಣ ಪ್ರದೇಶದಲ್ಲಿ ಸಾಮಾಜಿಕ ಸೇವೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾರೆ. ಇವರ ಸೇವೆಯನ್ನು ಪರಿಗಣಿಸಿ ನಾರಿ ಶಕ್ತಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಶ್ರೀಮತಿ ವನಿತಾ ಚಂದ್ರಕಾಂತ ಗುತ್ತೇದಾರ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತೆಯಾಗಿ, ಸಂಗಮೇಶ್ವರ ಮಹಿಳಾ ಮಂಡಲದ ಕಾರ್ಯದರ್ಶಿಯಾಗಿ ಮತ್ತು ಕಾಮಧೇನು ಆರ್ಯ ಈಡಿಗ ಮಹಿಳಾ ಸಂಘದ ಪದಾಧಿಕಾರಿಯಾಗಿ,
ಅನೇಕ ಸಂಘ,ಸಂಘಟನೆಗಳಲ್ಲಿ ಸಕ್ರಿಯರಾಗಿ ಸಮಾಜದ ಹಾಗೂ ಸಮುದಾಯದ ಸೇವೆಯಲ್ಲಿ ತೊಡಗಿಸಿಕೊಂಡು
ಮಹಿಳೆಯರಿಗೆ ಯುವಜನತೆಗೂ ಪೂರ್ತಿಯಾಗಿದ್ದು ಇವರ ಸೇವೆಯನ್ನು ಗಮನಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಅಭಿನಂದನೆ
ಈಡಿಗ ಸಮುದಾಯದ ಇಬ್ಬರು ಸಮಾಜ ಸೇವಾ ಕಾರ್ಯಕರ್ತರಾದ ಜಮುನಾ ಅಶೋಕ್ ಗುತ್ತೇದಾರ್ ಮತ್ತು ವನಿತಾ ಚಂದ್ರಕಾಂತ ಗುತ್ತೇದಾರ್ ಅವರನ್ನು ಕರ್ನಾಟಕ ರಾಜ್ಯ ಈಡಿಗ ಮಹಿಳಾ ಸಂಘವು ನಾರಿ ಶಕ್ತಿ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಸಮುದಾಯಕ್ಕೆ ಸಿಕ್ಕ ದೊಡ್ಡ ಗೌರವ ಎಂದು ಕಲಬುರಗಿಯ ಬ್ರಹ್ಮಶ್ರೀ ನಾರಾಯಣ ಗುರು ಟ್ರಸ್ಟ್ ಅಭಿನಂದನೆ ಸಲ್ಲಿಸಿದೆ.
