ಅರಿಶಿಣ ಸಮಗ್ರ ಬೆಳೆ ನಿರ್ವಹಣೆ ಗೆ ನೂತನ ತಳಿ ಅಗತ್ಯ
ಅರಿಶಿಣ ಸಮಗ್ರ ಬೆಳೆ ನಿರ್ವಹಣೆ ಗೆ ನೂತನ ತಳಿ ಅಗತ್ಯ
ಚಿಂಚೋಳಿ ಭಾಗದಲ್ಲಿ ಅರಸಿನ ಬೆಳೆ ಹೆಚ್ಚಾಗಿ ಬೆಳೆಯಲಾಗುತ್ತಿದೆ. ಬಹುತೇಕ ಸ್ಥಳೀಯ ಚಿಂಚೋಳಿ, ಬೀದರ್ ಲೋಕಲ್ ತಳಿ ಬೆಳೆಯಲಾಗುತ್ತಿದ್ದೂ ಅಕ್ಟೋಬರ್ ನವಂಬರ್ ಮಾಸದಲ್ಲಿ ಬೀಳುವ ಮಂಜಿನ ಹನಿ ಎಲೆ ಮೇಲೆ ಬಿದ್ದ ನಂತರ ಶಿಲಿಂದ್ರ ಎಲೆ ಚುಕ್ಕೆ ರೋಗ ಕಟಾವು ಹಂತ ಫೆಬ್ರವರಿ ಮಾರ್ಚ್ ವರೆಗೂ ಮುಂದುವರಿಯುತ್ತಿದೆ. ಸಮಗ್ರ ರೋಗ ಹತೋಟಿ ಸಂಶೋಧನೆ ಹಾಗೂ ಕಾಲ ಕಾಲಕ್ಕೆ ಬದಲಾಗುವ ಹವಾಮಾನ ಕ್ಕೆ ತಕ್ಕಂತೆ ಅಧ್ಯಯನ ಅಗತ್ಯ ಎಂದು ಹಸಿರುಗುಂಡಿಗೆ ಹಾಗೂ ಚಿಮ್ಮನ್ ಚೋಡ್ ಅರಸಿನ ಬೆಳೆಗಾರರು ಕೃಷಿ ವಿಜ್ಜಾನಿ ಗಳಿಗೆ ಒತ್ತಾಯಿಸಿದರು. ಕಬ್ಬು ಪ್ರದೇಶ ಹೆಚ್ಚಾಗುತ್ತಿದೆ,ಔಷದಿವುಳ್ಳ ಪ್ರಾಚೀನ ಕಾಲದಿಂದ ಬೆಳೆದು ಕೊಂಡ ಅರಸಿನ ಉಳಿಸಿಕೊಳ್ಳಲು ಕಟಾವು ವೇಳೆ ತೋಟಗಳಲ್ಲಿ ಕೆಲಸ ಮಾಡಲು ಉದ್ಯೋಗ ಖತರಿ ಮೂಲಕ ಕಾರ್ಮಿಕ ಬಳಕೆ ಗೆ ಚಿಂತಿಸಿದಲ್ಲಿ ಈ ಬೆಳೆ ಯನ್ನು ಉಳಿಸಲು ಸಾಧ್ಯ ಎಂದು ರೈತರು ಕೃಷಿ ವಿಜ್ಜನಿಗಳಲ್ಲಿ ಅಳಲು ತೋಡಿಕೊಂಡರು. ಜಿಲ್ಲಾ ಪಂಚಾಯತ್, ಜಿಲ್ಲಾಡಳಿತ,ತೋಟಗಾರಿಕೆ ಇಲಾಖೆ ಹಾಗೂ ಗ್ರಾಮ ಪಂಚಾಯತ್ ಗೆ ಈ ಬಗ್ಗೆ ಮನವರಿಕೆ ಮಾಡಲಾಗುವುದು ಎಂದು ತಿಳಿಸಿದರು. ದೀರ್ಘ ಬೆಳೆ ಅರಸಿನ ಬೆಳೆ ನಿರ್ವಹಣೆ, ಬೋದು ಯೆರುಸುವಿಕೆ, ಸಮಗ್ರ ಕೀಟ ರೋಗ ನಿರ್ವಹಣೆ, ಕಟಾವು, ಸಂಸ್ಕಾರಣೆ, ಶೇಖರಣೆ, ಮಾರುಕಟ್ಟೆ ಮಾಹಿತಿ ಮುಖ್ಯ ಹಂತಗಳ ಅಧ್ಯಯನ ತರಬೇತಿ ಕೈ ಗೊಳ್ಳಲಾಗುವುದು ಎಂದು ಕೃಷಿ ವಿಜ್ಜಾನ ಕೇಂದ್ರ ಸಸ್ಯ ರೋಗ ತಜ್ಜರಾದ ಡಾ. ಜಹೀರ್ ಅಹಮದ್ ಹಾಗೂ ಕೆವಿಕೆ ತೋಟಗಾರಿಕೆ ತಜ್ಜೆ ಡಾ. ಸನ್ಮತಿ ನಾಯಕ್ ಎಟಿಎಸ್ ತಿಳಿಸಿದರು.
ಕ್ಷೇತ್ರ ಭೇಟಿ ವೇಳೆ ರೈತರದ ಶ್ರೀ ರಾಜ ಶೇಖರ್ ನಿಪ್ಪಾಣಿ, ನಾಗಬೂಷನ್ ಕೋರೆ, ಶ್ರೀ ಕಾಂತ್ ರೆಡ್ಡಿ,ಚನ್ನ ಬಸಪ್ಪ, ಗುಂಡಪ್ಪ, ನಾಗ್ ಬಸಪ್ಪ ಉಪಸ್ಥಿತರಿದ್ದರು. ಹಳೆ ಅರಶಿನ ತಳಿ ರೋಗಕ್ಕೆ ತುತ್ತಗುತ್ತಿದೆ ಹಾಗೂ ಇಳುವರಿ ಕಡಿಮೆ ಇರುವದರಿಂದ ತೇರದಾಳ, ಮುಧೋಳ್, ಬನಹಟ್ಟಿ, ಮಹಾಲಿಂಗಾಪುರ್ ಭಾಗದಲ್ಲಿ ಬೆಳೆಯುವ ಹೊಸ ಅರಸಿನ ತಳಿ ಚಿನ್ನ ಸೇಲಂ ಮತ್ತು ಪ್ರಗತಿ ಅರಶಿಣ ತಳಿ ಮಾಹಿತಿ ನೀಡಬೇಕು ಎಂದು ರೈತರು ಕೇಳಿ ಕೊಂಡರು.
