ಶಿಕ್ಷಕರ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು, ಅಭ್ಯರ್ಥಿಗಳು ಅಧಿಕಾರ ಸ್ವೀಕಾರ
ಶಿಕ್ಷಕರ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು, ಅಭ್ಯರ್ಥಿಗಳು ಅಧಿಕಾರ ಸ್ವೀಕಾರ
ಕಲಬುರಗಿ: ಇತ್ತಿಚೇಗೆ ರೋಟರಿ ಕ್ಲಬ್‌ನಲ್ಲಿ ನಡೆದ ಶಿಕ್ಷಕರ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಅಭೂತಪೂರ್ವವಾಗಿ ಗೆಲುವು ಸಾಧಿಸಿ ಅಧಿಕಾರ ಸ್ವೀಕರಿಸಿದರು.
ಜನವರಿ 19 ರಂದು ನಡೆದ ಆಡಳಿತ ಮಂಡಳಿ ಚುನಾವಣೆಯಲ್ಲಿ ಸಾಮಾನ್ಯ ಮಹಿಳಾ ಹಿಂದುಳಿದ ವರ್ಗ ಮತ್ತು ಪರಿಸ್ಥಿತಿ ಜಾತಿ ಹಾಗೂ ಪರಿಶಿಷ್ಟ ಪಂಗಡದ ಮೀಸಲಿಸಿದ ಸುಸ್ಥಾನಗಳಿಗೆ ಚುನಾವಣೆಯನ್ನು ನಡೆಯಿತು.
ಈ ಚುನಾವಣೆಯಲ್ಲಿ ಕಲ್ಬುರ್ಗಿ ತಾಲೂಕಿನ ಶಿಕ್ಷಕರ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆಗೆ ಸ್ಪರ್ಧಿಸಿ 15 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಶಿಕ್ಷಕರ ಪತ್ತಿನ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ ಪರಮೇಶ್ವರ ಓಕುಳಿ ಹಾಗೂ ಉಪಾಧ್ಯಕ್ಷರಾಗಿ ಕೃಷ್ಟಪ್ಪ ನಾಯಕ್ ಅವರು ಅವಿರುದ್ಧವಾಗಿ ಆಯ್ಕೆಯಾಗಿದ್ದಾರೆ ನಂತರ ಅಧಿಕಾರ ಸ್ವೀಕರಿಸಿದರು.
ಅಭ್ಯರ್ಥಿಗಳಾದ ಪರಮೇಶ್ವರ ಬಿ ದೇಸಾಯಿ, ಪ್ರಭುಲಿಂಗ ಪಿ ಮುಲಗೆ, ಅಶೋಕ್ ಸೊನ್ನ,ಉಸ್ಮಾನ್ ಭಾಷಾ ಹುಸೇನ್‌ಸಾಬ್, ಈಶ್ವರ್ ಗೌಡ ಪಾಟೀಲ್, ಮೈನಾಧಿನ್ ದಫಿದಾರ್, ಭಾನು ಕುಮಾರ್ ಗಿರೆಗೋಳ, ಮಹಾನಂದ ಪಿ ಹುಲಿ, ನಂದಿನಿ ಸುರೇಂದ್ರ, ರವೀಂದ್ರ ಜಿ ಸಿರಕನಹಳ್ಳಿ, ಮಯೂರಿ ವಿರುಪಾಕ್ಷಿ, ಚಂದ್ರಕಾಂತ್, ಸಾಯಿಬಣ್ಣ ಬಾಗನ್ ಇವರು ಅಧಿಕಾರ ಸ್ವೀಕರಿಸಿದರು.