ಶರಣಬಸವ ವಿವಿ ಕುಲಸಚಿವ ಲಕ್ಷ್ಮೀ ಪಾಟೀಲ ಮಾಕಾ ದಂಪತಿಗಳಿಗೆ ಛಪ್ಪರಬಂದಿಯಿಂದ ಗೌರವ ಸಮ್ಮಾನ
ಶರಣಬಸವ ವಿವಿ ಕುಲಸಚಿವ ಲಕ್ಷ್ಮೀ ಪಾಟೀಲ ಮಾಕಾ ದಂಪತಿಗಳಿಗೆ ಛಪ್ಪರಬಂದಿಯಿಂದ ಗೌರವ ಸಮ್ಮಾನ
ಕಲಬುರಗಿ: ಕರ್ನಾಟಕ ರಾಜ್ಯ ಲೋಕೋಪಯೋಗಿ ನೌಕರರ ಸಂಘ, ಬೆಂಗಳೂರು ಜಿಲ್ಲಾ ಘಟಕ ಕಲಬುರಗಿ ವತಿಯಿಂದ ಶರಣಬಸವ ವಿಶ್ವವಿದ್ಯಾಲಯದ ಕುಲಸಚಿವರಾಗಿ ಅಧಿಕಾರ ಸ್ವೀಕರಿಸಿದ ಶ್ರೀಮತಿ ಡಾ. ಲಕ್ಷ್ಮಿ ಪಾಟೀಲ ಮಾಕ ಹಾಗೂ ಡಾಕ್ಟರೇಟ್ ಪದವಿ ಪಡೆದ ಡಾ. ಕಿರಣ ರವಿಕುಮಾರ ಮಾಕ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ಸಂಘದ ಜಿಲ್ಲಾಧ್ಯಕ್ಷ ಶರಣರಾಜ ಛಪ್ಪರಬಂದಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಡಾ. ಲಕ್ಷ್ಮಿ ಕಿರಣ ಮಾಕ ಅವರ ಆಡಳಿತ ಅನುಭವ ಮತ್ತು ಶೈಕ್ಷಣಿಕ ಕ್ಷೇತ್ರದ ಸೇವೆಯನ್ನು ಪ್ರಶಂಸಿಸಿದರು. ಡಾ. ಕಿರಣ ರವಿಕುಮಾರ ಮಾಕ ಅವರ ಶೈಕ್ಷಣಿಕ ಸಾಧನೆ ಯುವ ಪೀಳಿಗೆಗೆ ಪ್ರೇರಣೆಯಾಗಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಸಂಘದ ಹಿರಿಯ ಉಪಾಧ್ಯಕ್ಷ ಭೀಮಣ್ಣ ನಾಯಕ್, ಉಪಾಧ್ಯಕ್ಷರಾದ ಮಲ್ಲಿಕಾರ್ಜುನ ಸಂಗೊಳ್ಳಗಿ, ಉಜ್ಜರ್ ಅಹಮದಖಾನ, ಕಮಲಾಕರ್ ಆನೆಗುಂದಿ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಕಟ್ಟಿಮನಿ, ಖಜಾಂಚಿ ಉಮಾಕಾಂತ ಹಿರೋಳ್ಳಿ, ಕಾರ್ಯದರ್ಶಿ ಕಿಟೆಂದ್ರ, ಸಹ ಕಾರ್ಯದರ್ಶಿಗಳಾದ ಶಶಿನಾಥ ಸೊನೆ, ಖಾಸಿಂ ಅಲಿ, ಸಂಘಟನಾ ಕಾರ್ಯದರ್ಶಿಗಳಾದ ಅಕ್ಟರ್ ಪಾಶಾ, ಅಶೋಕ ಸಜ್ಜನ, ಕ್ರೀಡಾ ಕಾರ್ಯದರ್ಶಿ ರಾಮಕಿಶನಾ ಸಿಂಗ್, ಸಂಘದ ಸಲಹೆಗಾರರಾದ ಶರಣಗೌಡ ಪಾಟೀಲ್, ಮಂಜುನಾಥ್ ಧೂಳೆ, ಕಾರ್ಯಕಾರಿ ಸದಸ್ಯರಾದ ನಾಗೇಂದ್ರಪ್ಪ, ರಾಜಕುಮಾರ್, ಪಾಂಡುರಗ ಕುಲಕರ್ಣಿ, ಕಾರ್ತಿಕ್, ಪ್ರಭು ರಾಥೋಡ್, ಶ್ರೀಮತಿ ಅಕ್ಷತಾ ಜಂ ಶೆಟ್ಟಿ, ಮಹಮ್ಮದ್ ಮಜಾರ, ಸೈಯದ್ ಬಾಸು ಹಾಗೂ ಶ್ರೀ ಉದಯ್ ಕುಮಾರ್ ಮಾಕ, ಶ್ರೀ ಮಲ್ಲಿಕಾರ್ಜುನ ಅಧಿಕಾರಿ ಸೇರಿದಂತೆ ಸಂಘದ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಹಾಜರಿದ್ದರು.
