ರಕ್ತದಾನವೂ ಜಗತ್ತಿನ ಸರ್ವ ಶ್ರೇಷ್ಠದಾನ: ಶ್ರೀರಂಗ ಪರಿಹಾರ

ರಕ್ತದಾನವೂ ಜಗತ್ತಿನ ಸರ್ವ ಶ್ರೇಷ್ಠದಾನ: ಶ್ರೀರಂಗ ಪರಿಹಾರ

ರಕ್ತದಾನವೂ ಜಗತ್ತಿನ ಸರ್ವ ಶ್ರೇಷ್ಠದಾನ: ಶ್ರೀರಂಗ ಪರಿಹಾರ

ಕಮಲನಗರ:ರಕ್ತದಾನವೂ ಜಗತ್ತಿನ ಸರ್ವ ಶ್ರೇಷ್ಠದಾನ, ಇನ್ನೊಬ್ಬರ ಜೀವವನ್ನು ಉಳಿಸುವ ಮಹಾಕಾರ್ಯ ರಕ್ತದಾನವಾಗಿದೆ ಎಂದು ತಾ.ಪಂ ಮಾಜಿ ಅಧ್ಯಕ್ಷರಾದ ಶ್ರೀರಂಗ ಪರಿಹಾರ ಹೇಳಿದರು.

ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರವಿವಾರ ಜಗದ್ಗುರು ಶ್ರೀಮದ ರಾಮಾನಂದಚಾರ್ಯ ನರೇಂದ್ರಚಾರ್ಯಜಿ ರಾಮಾನಂದಚಾರ್ಯ ದಕ್ಷಿಣಪೀಠ ,ನಾಣಿಜಧಾಮ ವತಿಯಿಂದ ಆಯೋಜನೆ ಮಾಡಿದ ರಕ್ತದಾನ ಶಿಬಿರವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.

ರಕ್ತದಾನ ಜೀವನದಾನ ಮಹಾಕುಂಭ 2026 ಎಂಬ ಧ್ಯೇಯವಾಕ್ಯದಡಿಯಲ್ಲಿ ರಕ್ತದಾನ ಶಿಬಿರವನ್ನು ನರೇಂದ್ರಚಾರ್ಯಜಿ ಮಹಾರಾಜ ಹೆಸರಿನಲ್ಲಿ ಲಕ್ಷಾಂತರ ಜನ ರಕ್ತದಾನಿ ಮಾಡಿ ಸಮಾಜಕ್ಕೆ ಬೆಲೆ ಕಟ್ಟಲಾರದ ಉಡುಗೊರೆ ಕೂಡುತ್ತಿದ್ದಾರೆ ಎಂದು ಹೇಳಿದರು.

ಮಹಾದೇವ ಮಡಿವಾಳ ಮಾತನಾಡಿ,ಮತ್ತೊಂದು ಜೀವವನ್ನು ಉಳಿಸಲು ಕೇವಲ ರಕ್ತದಾನದಿಂದ ಮಾತ್ರ ಸಾಧ್ಯವಿದ್ದು, ರಕ್ತ ತಪಾಸಣೆ ಮಾಡಿಸಿದ ಆರೋಗ್ಯವಂತ ಯುವಕರು, ತುರ್ತಾಗಿ ರಕ್ತದ ಅವಶ್ಯಕತೆಯಿರುವ ಸಂದರ್ಭದಲ್ಲಿ ರಕ್ತದಾನಕ್ಕೆ ಮುಂದಾಗಬೇಕು ಎಂದರು. 

ಗ್ರಾಮ ಪಂಚಾಯಿತಿ ಅಧ್ಯಕ್ಷರರಾದ ಸುಶೀಲಾ ಮಹೇಶ್ ಸಜ್ಜನ ದಂಪತಿಗಳು ನರೇಂದ್ರಚಾರ್ಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಕಾರ್ಯಕ್ರಮ ಮುಖ್ಯ ಅತಿಥಿ ಲಿಂಗಾನಂದ ಮಹಾಜನ ಮತ್ತು ಶ್ರೀರಂಗ ರಕ್ತದಾನ ಶಿಬಿರವನ್ನು ರಿಬ್ಬಿನ್ ಕಟ್ ಮಾಡುವುದರೊಂದಿಗೆ ಉದ್ಘಾಟನೆ ಮಾಡಿದರು. ರವಿವಾರ ನಡೆದ ರಕ್ತದಾನ ಶಿಬಿರದಲ್ಲಿ ಸುಮಾರು 65 ಕ್ಕೂ ಜನ ಸ್ವಯಂ ಪೇರಿತವಾಗಿ ರಕ್ತದಾನವನ್ನು ಮಾಡಿದರು.

:"ನಮ್ಮ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಯೋಜನೆ ಮಾಡಿದ, ರಕ್ತದಾನ

ಕಾರ್ಯಕ್ರಮದಲ್ಲಿ ನಮ್ಮ ನಿರೀಕ್ಷೆ ಮೀರಿ ರಕ್ತದಾನಿಗಳು ಮುಂದೆ ಬಂದು ರಕ್ತದಾನಿ ಮಾಡಿ ಮತ್ತೊಂದು ಜೀವ ಉಳಿಸಲು ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು."

- ಶ್ರೀಮಂತ ಮಡಿವಾಳ, ವೈದ್ಯಧಿಕಾರಿಗಳು, ಸಮುದಾಯ ಆಸ್ಪತ್ರೆ ಕಮಲನಗರ.

 :"ಕಳೆದ ವರ್ಷವು ಸಹ ಪೂಜ್ಯರ ಮಾರ್ಗದರ್ಶನದಲ್ಲಿ ಕೇವಲ 15 ದಿನಗಳಲ್ಲಿ ದಾಖಲೆಯ ಪ್ರಮಾಣದಲ್ಲಿ 136372 ಯುನಿಟ್ ಗಳ ರಕ್ತವು ದಾನಿಗಳಿಂದ ಸಂಗ್ರಹವಾಗಿದ್ದು ,ಅದು ಬಡವರಿಗೆ ಉಪಯೋಗಕ್ಕೆ ಬರಲಿ ಎನ್ನುವ ಕಾರಣದಿಂದ ಸರಕಾರಿ ಆಸ್ಪತ್ರೆಗಳಿಗೆ ನೀಡಲಾಗುವುದು."

- ಧನರಾಜ ಬೋರಕರ,   ಅಧ್ಯಕ್ಷರು ಔರಾದ (ಬಿ).

 ಈ ಸಂದರ್ಭದಲ್ಲಿ ಬೀದರ ಜಿಲ್ಲೆಯ ಮೇಲ್ವಿಚಾರಕರಾದ ವಿಠಲ ಮೂಳೆ, ಜಿಲ್ಲಾ ಅಧ್ಯಕ್ಷರಾದ ಶ್ರೀಪಾದ ಕಪ್ಪಿಕೇರಿ, ಜಿಲ್ಲಾ ಸಚಿವರಾದ ಸಂಜೀವಕುಮಾರ ಟೆಕೊಳೆ,ಮಹಿಳಾ ಅಧ್ಯಕ್ಷರಾದ ಕೋಮಲ ಹಾವಗೊಂಡ,ಚಾಂಡೇಶ್ವರ ಸೇವಾ ಕೇಂದ್ರ ಅಧ್ಯಕ್ಷರಾದ ಮಲ್ಲಮ್ಮಾ,ವ್ಯವಸ್ಥಾಪಕರಾದ ರವಿಶಂಕರ ಪಟ್ನೆ,ರಕ್ತದಾನದ ಶಿಬಿರದ ಆಪರೇಟರಗಳಾಗಿ ಸೇವೆ ಸಲ್ಲಿಸಿದ ಆರತಿ ಜಾಧವ, ಐಶ್ವರ್ಯ ಕಾಳೆ,ಮಹಾದೇವ ಮಡಿವಾಳ,ಔರಾದ ತಾಲೂಕಿನ ಸೇವಕರಾದ ಬಾಬುರಾವ ಗೌಳಿ,ಸಂಗಪ್ಪಾ ಉಪ್ಪೆ,ಸಂಜು ಪವಾರ,ಪಿಂಟು ರಾಮಪೂರ, ಯುವ ಪತ್ರಕರ್ತ ಪರಮೇಶ ರಾಂಪುರೆ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.