ಪುರಾಣ ಪ್ರವಚನದಿಂದ ಬದುಕಿಗೆ ನೆಮ್ಮದಿ.-ಮರುಳ ಮಹಾಂತ ಶ್ರೀಗಳು
ಪುರಾಣ ಪ್ರವಚನದಿಂದ ಬದುಕಿಗೆ ನೆಮ್ಮದಿ.-ಮರುಳ ಮಹಾಂತ ಶ್ರೀಗಳು
ಶಹಾಪುರ : ಪುರಾಣ ಪ್ರವಚನಗಳು ಆಲಿಸುವುದರಿಂದ ದೈನಂದಿನ ಬದುಕಿನಲ್ಲಿ ಒತ್ತಡದಿಂದ ಮುಕ್ತಿ ಪಡೆಯುವುದರ ಜೊತೆಗೆ ಧರ್ಮ ಸಂಸ್ಕೃತಿಯ ಬಗ್ಗೆ ಅಪಾರ ಅರಿವು ಮೂಡಿ ಬದುಕಿಗೆ ಸುಖ ಶಾಂತಿ ನೆಮ್ಮದಿ ದೊರಕುತ್ತದೆ ಎಂದು ಒಕ್ಕಲಿಗರ ಹಿರೇಮಠದ ಮರುಳ ಮಹಾಂತ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ತಾಲೂಕಿನ ಸಗರ ಗ್ರಾಮದ ಒಕ್ಕಲಿಗರ ಹಿರೇಮಠದ ಕರಿಬಸವೇಶ್ವರ ಜಾತ್ರೆ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ಶಿಶುನಾಳ ಶರೀಫರ ಪುರಾಣ ಪ್ರವಚನದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ ಪ್ರತಿಯೊಬ್ಬರೂ ಪುರಾಣ ಪ್ರವಚನದಲ್ಲಿ ಭಾಗಿಯಾದರೆ ಧಾರ್ಮಿಕ ಜ್ಞಾನ ಪಡೆಯುವುದರ ಜೊತೆಗೆ ವ್ಯಕ್ತಿತ್ವ ವಿಕಸನ ಗೊಳ್ಳುವುದಕ್ಕೆ ಪೂರಕವಾಗುವುದು ಎಂದು ನುಡಿದರು.
ಶಿಶುನಾಳ ಶರೀಫರ ತತ್ವಪದಗಳು ಧಾರ್ಮಿಕ ಭಾವೈಕ್ಯತೆ ಹಾಗೂ ಸಾಮರಸ್ಯದ ಸಮಾನತೆಗೆ ನಿದರ್ಶನಗಳಾಗಿವೆ,ಇವರ ಜೀವನ,ಧಾರ್ಮಿಕ ಚಿಂತನೆ,ಮತ್ತು ಅವರು ರಚಿಸಿದ ಸಾಹಿತ್ಯದಿಂದ ಜನರ ಮೇಲೆ ಅಪಾರವಾದ ಪ್ರಭಾವ ಬೀರಿದವರಾಗಿದ್ದಾರೆ ಎಂದು ಹೇಳಿದರು.
ಈ ಸಮಾರಂಭದ ವೇದಿಕೆಯ ಮೇಲೆ ಶಹಾಪುರದ ಕುಂಬಾರಗೇರಿ ಹಿರೇಮಠದ ಶ್ರೀ ಸೂಗುರೇಶ್ವರ ಶಿವಾಚಾರ್ಯರು,ಸೋನಪೇಟ್ ಮಹಾರಾಷ್ಟ್ರದ ನಂದಿಕೇಶ್ವರ ಶಿವಾಚಾರ್ಯರು,ವಿಶ್ವರಾಧ್ಯ ದೇಸಾಯಿಮಠ,ಮಾತೋಶ್ರೀ ಶರಣಮ್ಮ ತಾಯಿ,ಪುರಾಣ ಪ್ರವಚನ ಪಟು ಶರಣುಕುಮಾರ್ ಶಾಸ್ತ್ರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
