ಧನಶೆಟ್ಟಿ ಸಕ್ರಿ ನಿಧನ
ಧನಶೆಟ್ಟಿ ಸಕ್ರಿ ನಿಧನ
ಸೇಡಂ: ನಗರದ ನಿವಾಸಿ, ಹಿರಿಯ ಸಾಹಿತಿ ಹಾಗೂ ಲೇಖಕರಾದ ಧನಶೆಟ್ಟಿ ಸಕ್ರಿ (84) ಅವರು ಬುಧವಾರ ಬೆಳಿಗ್ಗೆ 10 ಗಂಟೆಗೆ ನಿಧನರಾಗಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಗುರುತನ್ನು ಮೂಡಿಸಿಕೊಂಡಿದ್ದ ಅವರು ಅನೇಕ ಲೇಖನಗಳು ಮತ್ತು ಕೃತಿಗಳ ಮೂಲಕ ಓದುಗರ ಮನ ಗೆದ್ದಿದ್ದರು.
ಮೃತರು ಪತ್ನಿ, ಐದು ಮಂದಿ ಪುತ್ರರು, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧುಬಳಗ ಹಾಗೂ ಅಭಿಮಾನಿಗಳನ್ನು ಅಗಲಿದ್ದಾರೆ. ಅವರ ನಿಧನಕ್ಕೆ ಸಾಹಿತ್ಯ ವಲಯದಲ್ಲಿ ಹಾಗೂ ಸ್ಥಳೀಯ ಸಮಾಜದಲ್ಲಿ ಸಂತಾಪ ವ್ಯಕ್ತವಾಗಿದೆ.
ಮೃತರ ಅಂತ್ಯಸಂಸ್ಕಾರ ಗುರುವಾರ ಮಧ್ಯಾಹ್ನ 12:15 ಗಂಟೆಗೆ ತಮ್ಮ ಸ್ವಂತ ಹೊಲದಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿದ್ದಾರೆ.
