ಕನ್ನಡ ಆತ್ಮಗೌರವದ ಪ್ರತೀಕ:ಡಾ.ತಳವಾರ

ಕನ್ನಡ ಆತ್ಮಗೌರವದ ಪ್ರತೀಕ:ಡಾ.ತಳವಾರ

ಕನ್ನಡ ಆತ್ಮಗೌರವದ ಪ್ರತೀಕ:ಡಾ.ತಳವಾರ

ಕಲಬುರಗಿ :ಕನ್ನಡ ಭಾಷೆ ನಮ್ಮ ರಾಜ್ಯದ ನಮ್ಮೆಲ್ಲರ ಆತ್ಮಗೌರವದ ಹೆಮ್ಮೆಯ ಪ್ರತೀಕ. ಕನ್ನಡ ಎಂಬುದು ಕೇವಲ ಭಾಷೆಯಲ್ಲ; ಅದೊಂದು ಸಂಸ್ಕೃತಿ. ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ನಡುವೆ ಅವಿನಾಭಾವ ಸಂಬಂಧವಿದೆ ಎಂದು ಡಾ.ಎನ್. ಎಂ.ತಳವಾರ ತಿಳಿಸಿದರು.

ಸಿದ್ದಲಿಂಗೇಶ್ವರ ಪ್ರಕಾಶನ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಹಲವಾರು ಭಾಷೆಗಳನ್ನು ಮಾತನಾಡುವವರು ಇದ್ದಾರೆ. ಆದರೆ, ಬೇರೆ ಭಾಷೆಯವರಿಗಿರುವ ಭಾಷಾಭಿಮಾನ ಕನ್ನಡಿಗರಲ್ಲಿ ಇಲ್ಲ. ಭಾಷೆಯ ಕುರಿತು ಮೊದಲು ಪ್ರೀತಿ, ಅಭಿಮಾನ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ವಿಕಾಸ ಅಕಾಡೆಮಿಯ ಬಸವರಾಜ ಪಾಟೀಲ ಸೇಡಂ ಅವರು ಮಾತನಾಡಿ ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳ ಸಮೃದ್ಧ ಪರಂಪರೆ ಇದೆ. ಜಗತ್ತಿನ ಲ್ಲಿರುವ ಸುಮಾರು ಆರು ಸಾವಿರ ಭಾಷೆಗಳಲ್ಲಿ ಕನ್ನಡ ವಿಶಿಷ್ಟವಾದ ಭಾಷೆ. ಕನ್ನಡ ನಾಡಿನಲ್ಲಿ ಪರಭಾಷಿಗರ ಸಂಖ್ಯೆ ಹೆಚ್ಚುತ್ತಿದ್ದು, ಕನ್ನಡ ಮಾತನಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಪ್ರಕಾಶಕ ಡಾ.ಬಸವರಾಜ ಕೊನೇಕ ಮಾತನಾಡಿ ಇಂಗ್ಲೀಷ್ ಭಾಷೆಯ ವ್ಯಾಮೋಹ ಹೆಚ್ಚಾಗಿರುತ್ತಿರುವುದು ಸರಿಯಲ್ಲ. ಇದರ ಹುಚ್ಚು ಬಿಡಬೇಕು, ಕನ್ನಡ ಪದ ಸಂಪತ್ತಿನೆಡೆಗೆ ಆಕರ್ಷಿತವಾದರೆ ಅದರ ಒಳ ಅರಿವು ತಿಳಿದರೆ ಕನ್ನಡ ಪದ ಸಂಪತ್ತಿನ ಘನತೆ ತಿಳಿಯುತ್ತದೆ ಆ ನಿಟ್ಟಿನಲ್ಲಿ ನಮ್ಮ ಪ್ರಕಾಶನ ಸಂಸ್ಥೆ ಕಳೆದ ನಲ್ವತೆಂಟು ವರ್ಷಗಳಿಂದ ಕನ್ನಡ ಪುಸ್ತಕ ಪ್ರಕಟಿಸುವುದರ ಮೂಲಕ ಕನ್ನಡ ಸೇವೆ ಮಾಡುತ್ತಿರುವುದಕ್ಕೆ ತಮ್ಮೆಲ್ಲರ ಸಹಕಾರದಿಂದ ಸಾಧ್ಯವಾಯಿತು ಎಂದರು.

ಸಲಹಾ ಸಮಿತಿಯ ಡಾ. ಗವಿಸಿದ್ದಪ್ಪ ಪಾಟೀಲ,ಪ್ರೊ.ಶಿವರಾಜ ಪಾಟೀಲ, ಡಾ.ಮೀನಾಕ್ಷಿ ಬಾಳಿ,ಡಾ.ಜಯದೇವಿ ಗಾಯಕವಾಡ,ಡಾ. ಚಿ.ಸಿ ನಿಂಗಣ್ಣ, ಡಾ. ಶರಣಬಸಪ್ಪ ವಡ್ಡನಕೇರಿ,ಡಾ.ಕಾವ್ಯಶ್ರೀ ಮಹಾಗಾಂವಕರ, ಸoಗಮನಾಥ ರೇವತಗಾoವ್,ಡಾ.ಶಾಂತಪ್ಪ ಡಂಬಳ,ಗಂಗಾಧರ ದೇಸಾಯಿ, ಬಸವರಾಜ ಪಾಟೀಲ ರಾಜನಾಳ,ಸಿ.ಎಸ್.ಮಾಲಿಪಾಟೀಲ ಡಾ.ಸಿದ್ದಪ್ಪ ಹೊಸಮನಿ, ಡಾ.ಶ್ರೀಶೈಲ ನಾಗರಾಳ,ಸಿದ್ದಲಿಂಗ ಕೊನೇಕ್,ಶರಣು ಕೊನೇಕ,ಡಾ.ರಾಜಕುಮಾರ ಮಾಳಗೆ ಸೇರಿದಂತೆ ಹಲವರು ಉಪಸ್ಥಿತರಿದ್ದರು