ಕಮಲಾಪುರ||ಶರಣ ಸಾಹಿತ್ಯ ಸಂಸ್ಕಾರ ಕಲಿಸುವ ಮುನ್ನುಡಿ -ಡಾ. ಶರಣಬಸಪ್ಪ ವಡ್ಡನಕೇರಿ
ಶರಣ ಸಾಹಿತ್ಯ ಸಂಸ್ಕಾರ ಕಲಿಸುವ ಮುನ್ನುಡಿ -ಡಾ. ಶರಣಬಸಪ್ಪ ವಡ್ಡನಕೇರಿ
ಕಮಲಾಪುರ: ಸಮಾಜದಲ್ಲಿ ಸಂಸ್ಕಾರ ಕಲಿಸುವ ಮುನ್ನುಡಿಯಾಗಿ ಶರಣ ಸಾಹಿತ್ಯ ಸಮಾಜಕ್ಕೆ ಕೊಡುಗೆ ನೀಡುತ್ತಿದೆ ಎಂದು ಲೇಖಕ ಡಾ. ಶರಣಬಸಪ್ಪ ವಡ್ಡನಕೇರಿ ಹೇಳಿದರು.
ಕಮಲಾಪುರ ತಾಲೂಕಿನ ಕುರಿಕೋಟ ಗ್ರಾಮದ ಶ್ರೀ ಶಿವಲಿಂಗೇಶ್ವರ ವೀರಕ್ತ ಮಠದಲ್ಲಿ ಪ್ರತಿ ತಿಂಗಳು 3ನೇ ಭಾನುವಾರ ನಡೆಯುವ "ಅನುಭಾವ ಸಂಗಮ "12ನೇ ಮಾಲಿಕೆ ಉದ್ಘಾಟಿಸಿ ಮಾತನಾಡಿದರು.
ಸಮಾಜದಲ್ಲಿ ನಡೆಯುವ ಅಪರಾಧ ಮನೋಭಾವ ಹೋಗಲಾಡಿಸಲು ಶರಣ ಚಿಂತನೆ ಇಂದಿನ ಕಾಲಕ್ಕೆ ಬಹಳ ಅವಶ್ಯಕತೆ ಇದೆ ಎಂದರು.
ಶಿಕ್ಷಕ ಸಾಹಿತಿಗಳು ಆದ ಶ್ರೀ ನಾಗೇಂದ್ರಪ್ಪ ಮಾಡ್ಯಾಳ್ ಬಸವ ತತ್ವ ಕುರಿತು ಮಾತನಾಡಿದರು
ಮುಖ್ಯ ಅತಿಥಿಗಳಾಗಿ ಶ್ರೀ ಬಸವರಾಜ ಮರಬದ ಶರಣ ಚಿಂತಕರು, ಶ್ರೀ ಬಾಬುರಾವ ಪಾಟೀಲ ಚಿತಕೋಟಿ, ವೇದಿಕೆ ಮೇಲೆ ಇದ್ದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಮ. ನೀ. ಪ್ರ. ಸ್ವ. ಡಾ. ಸಿದ್ದಲಿಂಗ ಮಹಾಸ್ವಾಮಿಗಳು ವಹಿಸಿದ್ದರು.
ಗ್ರಾಮದ ಪ್ರಮುಖರಾದ ರಮೇಶ್ ಸಾಹು, ಶಿವಲಿಂಗಯ್ಯ ಮಠಪತಿ, ಬಸವರಾಜ್ ಕಲ್ಯಾಣ, ಶಿವಲಿಂಗಪ್ಪ ಬಸವಣ್ಣ ಶಾಂತಲಿಂಗ ಚೀಲಶೆಟ್ಟಿ, ಅಜಿತ್ ಮಠಪತಿ ದೇಶಮುಖ ಬಸವಣ್ಣ ,ಅಣವೀರ ಜ್ಯಾತಿ ಸ್ವಾಗತಿಸಿದರು, ಬಸವರಾಜ ಗೌಡನೂರ್ ನಿರೂಪಿಸಿದರು, ಅಂಬರಾಯ ಮಡ್ಡೆ ವಂದಿಸಿದರು.