ಛತ್ರಪತಿ ಶಿವಾಜಿ ಮಹಾರಾಜರ ಆಡಳಿತ ಪ್ರಪಂಚಕ್ಕೆ ಮಾದರಿ - ಶಿವರಾಜ ಪಾಟೀಲ.

ಛತ್ರಪತಿ ಶಿವಾಜಿ ಮಹಾರಾಜರ ಆಡಳಿತ ಪ್ರಪಂಚಕ್ಕೆ ಮಾದರಿ - ಶಿವರಾಜ ಪಾಟೀಲ.

ಕರ್ನಾಟಕ ವಿಕಾಸ ರಂಗ, ಕಲಬುರಗಿ ಜಿಲ್ಲಾ ಘಟಕ ಉದ್ಘಾಟನೆ.

ಛತ್ರಪತಿ ಶಿವಾಜಿ ಮಹಾರಾಜರ ಆಡಳಿತ ಪ್ರಪಂಚಕ್ಕೆ ಮಾದರಿ -

ಶಿವರಾಜ ಪಾಟೀಲ.

ನಗರದ ಕಲಾ ಮಂಡಲದಲ್ಲಿ ಕರ್ನಾಟಕ ವಿಕಾಸ ರಂಗ ಬೆಂಗಳೂರು, ಕಲಬುರಗಿ ಜಿಲ್ಲಾ ಘಟಕ ಉದ್ಘಾಟನೆ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಕೃತಿ ಲೋಕಾರ್ಪಣೆ ಸಮಾರಂಬವನ್ನು ಏರ್ಪಡಿಸಲಾಯಿತು, ಕಾರ್ಯಕ್ರಮವನ್ನು ಪುಸ್ತ ಕೋದ್ಯಮಿ ಬಸವರಾಜ ಕೊನೇಕ್ ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟನೆ ಮಾಡಿ ಮಾತನಾಡುತ್ತ ವ. ಚ. ಚೆನ್ನೆಗೌಡರ ನೇತೃತ್ವದಲ್ಲಿ ಕರ್ನಾಟಕ ರಂಗ ವಿಕಾಸ ನಾಡು -ನುಡಿಗೋಸ್ಕರವಾಗಿ ಅತ್ಯಂತ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತ ಬರಲೆಂದು ಶುಭಹಾರೈಸಿ ನಮ್ಮ ಸಹಕಾರ ಸದಾ ಇರುತ್ತದೆಂದು ತಿಳಿಸಿದರು. ಡಾ. ಚಿ. ಸಿ.ರಚಿಸಿದ ಛತ್ರಪತಿ ಶಿವಾಜಿ ಮಹಾರಾಜರ ಕೃತಿ ಲೋಕಾರ್ಪಣೆಯನ್ನು ಹಿಂದುಳಿದ ವರ್ಗಗಳ ಮುಖಂಡರಾದ ಶರಣಪ್ಪ ತಳವಾರ ಅವರು ನಡೆಸಿಕೊಟ್ಟರು ಅವರು ಮಾತನಾಡುತ್ತ ಶಿವಾಜಿ ಮಹಾರಾಜ ಆಡಳಿತವು ದೇಶಕ್ಕೆ ಸದಾ ಆದರ್ಶ್ ಎಂದು ತಿಳಿಸಿದರು. ಕೃತಿ ಕುರಿತು ಮಾತನಾಡಿದ ಸಾಹಿತಿ ಫ್ರೋ. ಶಿವರಾಜ ಪಾಟೀಲರು ಶಿವಾಜಿಮರಾಜರು ವೀರ, ಶೂ ರರಾಗಿದ್ದರು, ಚತುರ ಚಾಣ ಕ್ಷರಾಗಿದ್ದರು. ಅಫಘಾನ ಮುಸ್ಲಿಂ ದೊರಗಳ ಕಪಿಮುಷ್ಟಿಯಲ್ಲಿದ್ದ ಹಿಂದೂಸ್ತಾನದಲ್ಲಿ ಹಿಂದೂ -ಮರಾಠ ಸಾಮ್ರಾಜ್ಯ, ಸ್ವರಾಜ್ಯ ಸ್ಥಾಪಿಸಿ ಪ್ರಜಾಪ್ರಭುತ್ವ ಮಾದರಿಯಲ್ಲಿ ಆಡಳಿತ ನಡೆಸಿದ ಕೀರ್ತಿ ಶಿವಾಜಿಮಹಾರಾಜರಿಗೆ ಸಲ್ಲುತ್ತದೆ. ಕೊಲೆ, ಸುಲಿಗೆ ಮಹಿಳೆಯರ ಅತ್ಯಾಚಾರದಂತ ಘಟನೆಗಳು ಮಹಾರಾಜರ ಮೇಲೆ ಗಾಡವಾದ ಪ್ರಭಾವಭಿರುತ್ತವೆ, ಅದಕ್ಕಾಗಿ ಮಹಿಳೆಯರ, ಮುಗ್ದರ, ದೇಶರಕ್ಷಣೆಗೆ ಕಟ್ಟಿಬದ್ದಾರಾಗಿ ನಿರಂತರ ಹೋರಾಟ ಮಾಡುತ್ತಾರೆ.ಪಶ್ಚಿಮ ಘಟ್ಟದಲ್ಲಿ ಬೆಳೆದ ಶಿವಾಜಿ ಎಂಬ ಸಿಂಹದ ಗರ್ಜನೆಗೆ ಶತ್ರು ರಾಜರ ಮಟ್ಟನ್ನು ಅಡಗಿಸಿ ರಾಜ್ಯಬಾರ ಮಾಡಿದ್ದು, ಪರಕಿಯರನ್ನು ಈ ದೇಶದಿಂದ ಓಡಿಸಬೇಕೆಂದು ಪಣ ತೊಟ್ಟಮಹಾರಾಜರ ಆಡಳಿತ ಪ್ರಪಂಚಕ್ಕೆ ಮಾದರಿಯಾಗಿದೆ. ಮಹಾರಾಜರು ಮುಸ್ಲಿಂ ದೊರೆಗಳ ವಿರಿದಿಯಾಗಿದ್ದರು ವಿನ ಮುಸ್ಲಿಂಮ್ ಜನರವಿರೋದಿಯಾಗಿರಲಿಲ್ಲ. ಸರ್ವದರ್ಮ ಸಮನ್ವತೆಗೆ ಮಹಾರಾಜರು ಸಾಕ್ಷಿಯಾಗಿದ್ದರು, ಆಗ್ರಾ ಬಂದನದಿಂದ ಪಾರಾದದ್ದು, ಸಿಂಹಘಡ ಕೋಟೆ ವಶ, ಅಫ್ಜಲ್ ಖಾನಾನ ಹತ್ಯೆ ಶಿವಾಜಿ ಮಹಾರಾಜರ ಚಾಣಕ್ಷತನಕ್ಕೆ ಸಾಕ್ಷಿಯಾಗಿವೆ. ಮಹಾರಾಜರ ದೇಶ ಭಕ್ತಿ, ಸ್ವಾಭಿಮಾನ ಭಾರತೀಯರನ್ನು ಸದಾ ಜಾಗ್ರತೆ ಗೊಳಿಸುತ್ತವೆಂದು ತಿಳಿಸಿದರು. ಮುಖ್ಯ ಅತಿಥಿಗಳಾದ ಆರ್. ಬಿ. ಜಾಗದಾಳೆ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಡಾ. ಎಸ್. ಎಸ್. ಗುಬ್ಬಿ ಅವರು ಮಾತನಾಡುತ್ತ ಕರ್ನಾಟಕ ವಿಕಾಸ್ ರಂಗ ಉತ್ತಮವಾಗಿ ಕೆಲಸಮಾಡಲೆಂದು ಹಾರೈಸಿದರು, ಶಿವಾಜಿ ಮಹಾರಾಜರ ಜೀವನಗಾತೆ ರೋಮಾಂಚನದಿಂದಕೂಡಿದೆ ಪ್ರತಿ ಭಾರತಿಯನಿಗೆ ಸ್ಫೂರ್ತಿ ನೀಡುತ್ತದೆಂದು ತಿಳುಸಿದರು. ಆರಂಭದಲ್ಲಿ ವಿಜಯಕುಮಾರ್ ರೋಣದ ಪ್ರಾರ್ಥನೆ ನಡೆಸಿಕೊಟ್ಟರು, ಡಾ. ಚಿ. ಸಿ. ನಿಂಗಣ್ಣ ಪ್ರಸ್ತಾವಿಕವಾಗಿ ಮಾತನಾಡಿ ತಮ್ಮೆಲ್ಲರ ಸಹಕಾರ ಪ್ರೋತ್ಸಾಹ ಅವಶ್ಯಕತೆ ಇದೆ ಎಂದು ತಿಳಿಸಿದರು. ದೇವಿದಾಸ್ ಪವಾರ್ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ವಿಶ್ವನಾಥ್ ಬಕರೆ, ಮೀನಾಕ್ಷಿ ಗುತ್ತೇದಾರ್, ಡಾ. ಅನ್ನಪೂರ್ಣ ಗಂಗಣೆ, ಗೋಪಾಲರೆಡ್ಡಿ, ಬಿ ಎಸ್. ಮಾಲಿಪಾಟೀಲ್, ಡಾ. ಚಂದ್ರಶೇಖರ ದೊಡ್ಡಮನಿ, ವೆಂಕಟೇಶ್ ನೀರಡಗಿ, ಶಿವಶರಣಪ್ಪ ಪೂಜಾರಿ, ಶರಣಗೌಡ ಪಾಟೀಲ ಪಾಳಾ, ಜಗಪ್ಪ ಹೊಸಮನಿ, ವೆಂಕಯ್ಯ್ ಮುದ್ಗಲ್, ಎಸ್ ಭಜಂತ್ರಿ, ಅಂಬಯ್ಯ್ ಗುತ್ತೇದಾರ್, ಸಿ. ಎಸ್. ಆನಂದ, ಪ. ಮಾನುಸಾಗರ್ ಅನೇಕರು ಕಾರ್ಯಕ್ರಮದಲ್ಲಿ ಬಾಗಿಯಾಗಿದ್ದರು, ಡಾ. ಶಂಕರ ಬಾಳಿ ಕಾರ್ಯಕ್ರಮ ನಿರೂಪಿಸಿದರು, ಡಾ ಅನ್ನಪೂರ್ಣ ಗಂಗಣೆ ವಂದಿಸಿದರು

ಕಲ್ಬುರ್ಗಿ ಸುದ್ದಿ ನಾಗರಾಜ್ ದಂಡಾವತಿ