ಬಸವಾದಿ ಶರಣರಂತೆ ಇಂದಿನ ಕವಿಗಳು ಸಹ ಸೌಹಾರ್ದತೆ ಹಾಗೂ ಸಮಾನತೆಯ ಆಶಯ ಹೊಂದಿರಬೇಕು.ಡಾ.ಹೊನ್ಕಲ್.
ಬಸವಾದಿ ಶರಣರಂತೆ ಇಂದಿನ ಕವಿಗಳು ಸಹ ಸೌಹಾರ್ದತೆ ಹಾಗೂ ಸಮಾನತೆಯ ಆಶಯ ಹೊಂದಿರಬೇಕು.ಡಾ.ಹೊನ್ಕಲ್.
ಚಕೋರ ಸಾಹಿತ್ಯ ವಿಚಾರ ವೇದಿಕೆ ಯಾದಗಿರಿ ವತಿಯಿಂದ ಇಂದು ಸುರಪುರ ತಾಲೂಕಿನ ಕೆಂಭಾವಿ ಪಟ್ಟಣದಲ್ಲಿ *ವಚನ ಸಾಹಿತ್ಯದಲ್ಲಿ ಸೌಹಾರ್ದತೆ ಮತ್ತು ಸಮಾನತೆ ಆಶಯಗಳು* ಕುರಿತು ವಿಶೇಷ ಉಪನ್ಯಾಸ ಹಾಗೂ ಕೆಂಭಾವಿ ವಲಯದ ಕವಿಗೋಷ್ಠಿ ಏರ್ಪಡಿಸಲಾಗಿತ್ತು.ಆ ಕಾರ್ಯಕ್ರಮದಲ್ಲಿ ಆಶಯ ನುಡಿ ಆಡಿದ ಲೇಖಕ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರಾದ ಡಾ.ಸಿದ್ಧರಾಮ ಹೊನ್ಕಲ್ ಅವರು ಹನ್ನೆರಡನೇ ಶತಮಾನದ ಬಸವಾದಿ ಶರಣರು ಸೌಹಾರ್ದತೆ ಮತ್ತು ಸಮಾನತೆಯ ಆಶಯ ಹೊಂದಿ ವಚನ ಸಾಹಿತ್ಯ ರಚಿಸಿದಂತೆ ಇಂದಿನ ಎಲ್ಲಾ ಕವಿಗಳು ಸಹ ಅಂತಹ ಆಶಯದಿಂದ ಕಾವ್ಯ ರಚಿಸಬೇಕೆಂದು ಕರೆ ನೀಡಿದರು. ಅವರು ಅಕಾಡೆಮಿಯ ಕಾರ್ಯ ಚಟುವಟಿಕೆಗಳನ್ನು ಪರಿಚಯಿಸಿದರು.
ವಲಯ ಕಸಾಪ ಹಾಗೂ ಸಹೋದರಿ ನಿವೇದಿತಾ ಸಹಕಾರ ಬ್ಯಾಂಕ್ ಈ ಕಾರ್ಯಕ್ರಮಕ್ಕೆ ಸಹಯೋಗ ನೀಡಿತ್ತು. ಕವಿಗೋಷ್ಠಿ ಅಧ್ಯಕ್ಷತೆ ಗಜಲ್ ಲೇಖಕಿ ಶ್ರೀಮತಿ ಪಾರ್ವತಿ ದೇಸಾಯಿ ವಹಿಸಿದ್ದರು.ಶ್ರೀ ಯಂಕನಗೌಡ ಪಾಟೀಲ್ ಉಪನ್ಯಾಸಕರು ವಿಶೇಷ ಉಪನ್ಯಾಸ ನೀಡಿದರು. ನಗರದ ಗಣ್ಯರು, ಸ್ವಾಮೀಜಿಗಳು, ವಿದ್ಯಾರ್ಥಿಗಳು, ಕವಿಗಳು, ಪತ್ರಕರ್ತರು ಭಾಗವಹಿಸಿದ್ದರು. ಮಡಿವಾಳಪ್ಪಗೌಡ ಹೆಗ್ಗಣ ದೊಡ್ಡಿ ಅವರು ಸ್ವಾಗತಿಸಿದರು. ಭಾಗವಹಿಸಿದ ಎಲ್ಲಾ ಕವಿಗಳಿಗೆ ಅಕಾಡೆಮಿಯ ಪ್ರಮಾಣಪತ್ರ ಹಾಗೂ ಕನ್ನಡದ ಶಾಲು ನೀಡಿ ಗೌರವಿಸಲಾಯಿತು.ಇದೇ ಸಂದರ್ಭದಲ್ಲಿ ಆ ವಲಯದ ಅನೇಕ ಸಾಧಕರಿಗೆ ವಲಯ ಕಸಾಪ ಹಾಗೂ ಸಹೋದರಿ ನಿವೇದಿತಾ ಸಹಕಾರಿ ಬ್ಯಾಂಕ್ ವತಿಯಿಂದ ಗೌರವಿಸಿದರು.