ಮರ್ಯಾದೆ ಹತ್ಯೆ ಖಂಡಿಸಿ : ಕಠಿಣ ಕಾಯ್ದೆಗಾಗಿ ಬೃಹತ ಪ್ರತಿಭಟನೆ

ಮರ್ಯಾದೆ ಹತ್ಯೆ ಖಂಡಿಸಿ : ಕಠಿಣ ಕಾಯ್ದೆಗಾಗಿ ಬೃಹತ ಪ್ರತಿಭಟನೆ

ಮರ್ಯಾದೆ ಹತ್ಯೆ ಖಂಡಿಸಿ : ಕಠಿಣ ಕಾಯ್ದೆಗಾಗಿ ಬೃಹತ ಪ್ರತಿಭಟನೆ :..

ನಾಗರಾಜ್ ದಂಡಾವತಿ ವರದಿ

ಶಹಾಬಾದ : - ಅಂತರ ಜಾತಿ ವಿವಾಹವಾದ ಗರ್ಭಿಣಿಯನ್ನು ಕೊಂದು ಜಾತಿ ಪ್ರತಿಷ್ಠೆಯ ಕ್ರೌರ್ಯವನ್ನು ಖಂಡಿಸಿ ಎಲ್ಲಾ ಆರೋಪಿಗಳನ್ನು ಬಂದಿಸಿ ಕಠಿಣ ಶಿಕ್ಷೆಗೆ ಒಳಪಡಿಸಿ ಎಂದು ದಸಂಸ ರಾಜ್ಯ ಸಂ ಸಂಚಾಲಕ ಮರಿಯಪ್ಪ ಹಳ್ಳಿ ಆಗ್ರಹಿಸಿದರು.

ಅವರು ದಲಿತ ಮಾದಿಗ ಸಮಾಜದ ವತಿಯಿಂದ ಮರ್ಯಾದೆ ಹತ್ಯೆ ತಡೆ ಕಾಯ್ದೆ ಜಾರಿಗೆ ತರಲು ಒತ್ತಾಯಿಸಿ ನೆಹರು ವೃತ್ತದಲ್ಲಿ ನಡೆದ ರಸ್ತೆ ತಡೆ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.

ಹುಬ್ಬಳ್ಳಿಯಲ್ಲಿ ಅತ್ಯಂತ ಅಮಾನವೀಯವಾದ ಕ್ರೂರ ಪ್ರಕರಣವೊಂದು ನಡೆದಿದೆ, ಹೆತ್ತ ತಂದೆಯೆ ತನ್ನ ಮಗಳನ್ನೆ ಕೊಚ್ಚಿ ಕೊಲೆಮಾಡಿದ ಆಘಾತಕಾರಿ ಘಟನೆ ನಡೆದಿರುವದು ದು:ಖಕರ ಸಂಗತಿಯಾಗಿದೆ ಎಂದರು.  

ನಾಗರಿಕ ಸಮಾಜವು ತಲೆತೆಗ್ಗಿಸುವ ಇಂತಹ ಪ್ರಕರಣಗಳು ದಿನಗಳೆದಂತೆ, ಹೆಚ್ಚುತ್ತಿವೆ, ರಾಜ್ಯದ ಅನೇಕ ಪ್ರದೇಶಗಳಲ್ಲಿ ಇಂತಹ ಕೊಲೆಗಳು, ದಾಳಿಗಳು, ಜಾತಿಯ ಅಹಂಕಾರದಿಂದ ಪ್ರತಿಷ್ಠೆಯಿಂದ ಕೂಡಿವೆ, ಇದರಲ್ಲಿ ಮನುವಾದಿ ಷಡ್ಯಂತ್ರವು ಇದರಲ್ಲಿ ಒಳಗೊಂಡಿದೆ ಎಂದು ಅನುಮಾನ ವ್ಯಕ್ತ ಪಡಿಸಿದರು.

ನಿವೃತ್ತ ಅಧಿಕಾರಿ, ಮಾದಿಗ ಸಮಾಜದ ಮಾಜಿ ಅಧ್ಯಕ್ಷ ಡಿ.ಡಿ ಓಣಿ ಮಾತನಾಡಿ, ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪುರ ಗ್ರಾಮದಲ್ಲಿ ಈ ಪ್ರಕರಣವು ಘಟಿಸಿದೆ, ಕೊಲೆ ಮಾಡಿದ ತಂದೆ ಪ್ರಕಾಶ ಗೌಡ ಈ ಕ್ರೌರ್ಯದ ರೂವಾರಿ ಮತ್ತು ಹತ್ಯಾರಿಯಾಗಿದ್ದಾನೆ, ಪ್ರೀತಿಸಿ ಮದುವೆಯಾಗಿದ್ದ ಮತ್ತು ಈಗ ಹೆತ್ತವರಿಂದಲೇ ಕೊಲೆಯಾಗಿರುವ ಮಾನ್ಯ ಮತ್ತು ಅವಳ ಬಾಳ ಸಂಗಾತಿ ವಿವೇಕಾನಂದ ನಿಗೆ ಜೀವ ಬೆದರಿಕೆಯ ಕಾರಣದಿಂದ ಧಾರವಾಡ ತಾಲೂಕಿನ ಶಿವಳ್ಳಿಯಲ್ಲಿ ವಾಸವಾಗಿದ್ದರು, ಮೇಲ್ಟಾತಿಯ ಮಾನ್ಯಳ ಹೆತ್ತವರಿಂದ ಇಂತಾಹದೊಂದು ದಾಳಿ ನಿರೀಕ್ಷಿಸಿದ್ದ ಕುಟುಂಬವು ಮನೆಯ ಮುಂದೆ ಸಿ.ಸಿ. ಕ್ಯಾಮರಾ ಆಳವಳಿಸಿದ್ದರಂತೆ ತಂದೆಯು ಕೊಡಲಿ ಹಿಡಿದು ಬರುವುದು ಕ್ಯಾಮರಾದಲ್ಲಿ ದಾಖಲಾಗಿದೆ, ಮಾನ್ಯಳ ತಂದೆ ಮತ್ತು ಸಂಬಂಧಪಟ್ಟ ಇನ್ನಿತರ ಆರೋಪಿಗಳನ್ನು ಬಂದಿಸಲಾಗಿದೆ ಆದರೆ ಹತ್ಯೆಗೆ ಕುಮ್ಮಕ್ಕು ನೀಡಿದ ಎಲ್ಲಾ ಆರೋಪಿಗಳನ್ನು ಕಾಣದ ಕೈಗಳಿಂದ ಬಂದಿಸಿಲ್ಲ, ಕೊಡಲೇ ಆರೋಪಿಗಳು ಎಷ್ಟೆ ಬಲಶಾಲಿಗಳಾದರು ಎಲ್ಲರನ್ನು ಬಂದಿಸಬೇಕು ಎಂದು ಆಗ್ರಹಿಸದರು. 

ನಗರ ಸಭೆ ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷ ಶರಣು ಪಗಲಾಪುರ ಮಾತನಾಡಿ, ಕರ್ನಾಟಕ ಸರಕಾರ ಬಸವಣ್ಣ ನವರನ್ನು ಸಾಂಸ್ಕೃತಿಕ ನಾಯಕನೆಂದು ಘೋಷಣೆ ಮಾಡಿದೆ ಜಾತಿ ವ್ಯವಸ್ಥೆಯನ್ನು ಧಿಕ್ಕರಿಸಿ ಸಮಾನತೆಯ ನಾಡ ಕಟ್ಟಲು ಶರಣರು ತಮ್ಮ ಬದುಕನ್ನೆ ಮುಡುಪಾಗಿಸಿಟ್ಟಿದ್ದರು, ಹರಳಯ್ಯ ಮದುವರಸರ ಮಕ್ಕಳು ತಾರತಮ್ಯದ ಜಾತಿಯನ್ನು ದಿಕ್ಕರಿಸಿ ಮದುವೆಯಾಗಿದ್ದು ಚರಿತ್ರೆಯಲ್ಲಿ ದಾಖಲಾಗಿದೆ, ತಮ್ಮ ಮಕ್ಕಳ ಮದುವೆಯನ್ನು ಮಾಡಿದ ಹರಳಯ್ಯಾ ಮಧುವರಸ ದಂಪತಿಗಳ ಕಣ್ಣು ಕಿತ್ತಿ ಆನೆ ಕಾಲಿಗೆ ಕಟ್ಟಿ ಎಳಸಿದ್ದು ಅಂದಿನ ಪುರೋಹಿತಶಾಹಿ ವರ್ಣ ವ್ಯವಸ್ಥೆ ಈಗಲೂ ಅದೇ ಶಕ್ತಿಗಳು ಜೇವಂತವಾಗಿದ್ದರಿಂದಲೇ ಮರ್ಯಾದೆ ಹೆಸರಿನ ಹತ್ಯೆಗಳು ಜೀವಂತವಾಗಿದೆ ಇದನ್ನು ಸಾಂಸ್ಕೃತಿಕ ಅಪರಾಧವೆಂದೇ ಪರಿಗಣಿಸಿಬೇಕಾಗುತ್ತದೆ. 

ಆದ್ದರಿಂದ ಬಸವಣ್ಣ ಕನಸು ಕಂಡ ಸಮಾನತೆಯ ಸಮಾಜ ಕಟ್ಟುವುದಕ್ಕಾಗಿ ಕಾನೂನು ರೂಪಿಸಬೇಕಾಗಿದ್ದು ಸರಕಾರದ ಹೊಣೆಗಾರಿಕೆಯಾಗಿದೆ ಎಂದರು.

ತಾಲ್ಲೂತ ತಹಸೀಲ್ದಾರರಾದ ನೀಲಪ್ರಭಾ ಬಬಲಾದ ರವರ ಮುಖಾಂತರ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.

ರಸ್ತೆ ತಡೆ ಪ್ರತಿಭಟನೆಯಲ್ಲಿ ಶಿವರಾಜ ಕೋರೆ, ಯಲ್ಲಾಲಿಂಗ ಹೈಯಾಳಕರ, ಶ್ರೀಧರ ಕೊಲ್ಲೂರ, ಮಲ್ಲೇಶಿ ಸೈದಾಪುರ, ಮನೋಹರ ಮೇತ್ರಿ, ನಾಗಪ್ಪ ರಾಯಚೂರ, ರವಿ ಬೆಳಮಗಿ, ನಾಗರಾಜ ಮುದ್ನಾಳ, ಶರಣರಾಜ ಗೊಬ್ಬುರ, ಶ್ರೀಕಾಂತ ದುಮ್ಮನಸೂರ, ಅನಿಲ ಮೈನಾಳಕರ, ಮಹೇಶ ಹರ್ಲಕಟ್ಟಿ, ಹನುಮೇಶ ಕುಲಕರ್ಣಿ, ರಾಜೇಶ ಯನಗುಂಟಿಕರ, ಮಲ್ಲಿಕಾರ್ಜನ ಕಟ್ಟಿ, ಮೋಹನ ಹಳ್ಳಿ, ಬಸವರಾಜ ಮಯೂರ, ಸತೀಶ ಕೋಬಾಳ, ಶಿವಶಾಲ ಪಟ್ಟಣ, ವಸಂತ ಕಾಂಬಳೆ, ಡಾ.ಅಹ್ಮದ ಪಟೇಲ, ಮಹ್ಮದ ಮಸ್ತಾನ ಸೇರಿದಂತೆ ನೂರಾರು ಜನ ಭಾಗವಹಿಸಿದ್ದರು.