ಉಮೇಶ ಎಚ್.ಜಿ ಅವರಿಗೆ ಪಿ.ಹೆಚ್.ಡಿ ಪದವಿ

ಉಮೇಶ ಎಚ್.ಜಿ ಅವರಿಗೆ ಪಿ.ಹೆಚ್.ಡಿ ಪದವಿ
ಬೆಂಗಳೂರು:ಮಲ್ಲೇಶ್ವರಂನ ಎಂ.ಎಲ್.ಎ ಅಕಾಡೆಮಿ ಆಫ್ ಲರ್ನಿಂಗ್‌ನ ಸಹಾಯಕ ಪ್ರಾಧ್ಯಾಪಕರಾದ ಉಮೇಶ ಎಚ್.ಜಿ ರವರು ಯೋಗ ಯೂನಿವರ್ಸಿಟಿ ಆಫ್ ದಿ ಅಮೇರಿಕಾಸ್ ವಿಶ್ವವಿದ್ಯಾಲಯದಿಂದ ಪಿ.ಹೆಚ್.ಡಿ ಪದವಿ ಪಡೆದಿದ್ದಾರೆ.
ಡಾ. ಆರ್. ವಾದಿರಾಜು ಅವರ ಮಾರ್ಗದರ್ಶನದಲ್ಲಿ “ಭಾಗವಂತಿಕೆ ಮೇಳದಲ್ಲಿ ಸಾಹಿತ್ಯದ ವೈಶಿಷ್ಟ್ಯ” ಎಂಬ ವಿಷಯದ ಮೇಲೆ ಪ್ರೌಢ ಪ್ರಬಂಧ ಮಂಡಿಸಿದ ಉಮೇಶ ರವರು ಕನ್ನಡ ಜನಪದ ಸಂಸ್ಕೃತಿಯ ಪ್ರಮುಖ ಕಲೆಗಳಲ್ಲೊಂದಾದ ಭಾಗವಂತಿಕೆ ಮೇಳದ ಸಾಹಿತ್ಯದ ಅಂಶಗಳು, ನೈತಿಕ ಮೌಲ್ಯಗಳು ಹಾಗೂ ಭಾವನಾತ್ಮಕ ಚಿತ್ರಣಗಳ ಕುರಿತು ಸವಿಸ್ತಾರವಾದ ಸಂಶೋಧನೆ ನಡೆಸಿದ್ದಾರೆ.
ಸಂಶೋಧನೆಯು ಜನಪದ ಕಲೆಗಳ ಸಾಹಿತ್ಯಮೌಲ್ಯ ಮತ್ತು ಸಾಮಾಜಿಕ ಸಂದೇಶಗಳ ಅರಿವಿಗೆ ಹೊಸ ದಾರಿ ತೆರೆದಿದೆ ಎಂದು ಪ್ರಾಧ್ಯಾಪಕ ವೃಂದವು ಪ್ರಶಂಸಿಸಿದೆ.