ಬೀದಿ ನಾಯಿ ಕಚ್ಚಿ ಗಾಯಾಳಾದ ದೀಪಾಲಿ ಕುಟುಂಬಕ್ಕೆ ಸರ್ಕಾರದಿಂದ ೫ ಲಕ್ಷ ಪರಿಹಾರಕ್ಕೆ : ನಿಂಬಾಳಕರ್ ಆಗ್ರಹ
ಕಲಬುರಗಿ: ಶಾಹಾಬಾದ ತಾಲೂಕಿನ ಶರಣ ನಗರದಲ್ಲಿ ದೀಪಾಲಿ ತಂದೆ ನಾಗರಾಜ ಎಂಬ ಹುಡುಗಿ ಶಾಲೆಯಿಂದ ಮನೆಗೆ ಬರುವಾಗ ಬೀದಿ ನಾಯಿ ಕಚ್ಚಿ ಕಲಬುರಗಿಯ ಬಸವೇಶ್ವರ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಹಾಗಾಗಿ ಕ್ರಾಂತಿವೀರ ಬೆಳವಡಿ ವಡ್ಡರ್ ಎಲ್ಲಣ್ಣ ಸೇನೆ ಸಂಸ್ಥಾಪಕ ಅಧ್ಯಕ್ಷ ಜಿ. ಶಿವಶಂಕರ್ ಇವರ ನೇತೃತ್ವದಲ್ಲಿ ಸ್ಥಳಕ್ಕೆ ಭೇಟಿ ನೀಡಿ ಸಹಾಯಧನ ನೀಡಲಾಯಿತು.
ಅಹಿಂದ ನಾಯಕರಾದ ಸೂರ್ಯಕಾಂತ್ ನಿಂಬಾಳಕರ್ ಮಾತನಾಡಿ ಆಗಿರ್ತಕ್ಕಂತ ಸಮಸ್ಯೆಯನ್ನು ಆದಷ್ಟು ಬೇಗ ಜಿಲ್ಲಾಡಳಿತ ಆ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿರುವುದರಿಂದ ಸಂಬAಧಪಟ್ಟ ನಗರ ಸಭೆ ಅಧಿಕಾರಿಗಳಿಗೆ ಸೆರೆ ಹಿಡಿಯಲ್ಲು ಬೀದಿ ನಾಯಿಗಳನ್ನು ಸ್ಥಳಾಂತರ ಮಾಡಲು ಸೂಚನೆ ನೀಡಬೇಕು ಹಾಗೂ ಈ ಕುಟುಂಬಕ್ಕೆ ೫ ಲಕ್ಷ ಪರಿಹಾರ ಹಾಗೂ ಆಸ್ಪತ್ರೆಯ ಖರ್ಚು ವೆಚ್ಚವನ್ನು ಸರ್ಕಾರ ಭರಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಭೂವಿ ಸಮಾದ ಜಿಲ್ಲಾಧ್ಯಕ್ಷ ಗುಂಡಪ್ಪ ಸಾಳಂಕೆ, ಜಿಲ್ಲಾ ಕಾರ್ಯಧ್ಯಕ್ಷ ರಾಮಯ್ಯ ಪೂಜಾರಿ, ನೌಕರರ ಸಂಘದ ಮಾಜಿ ಅಧ್ಯಕ್ಷ ಸಿದ್ದರಾಮ್ ದಂಡಗುಲಕರ್, ಕಾಳಗಿ ತಾಲೂಕ ಅಧ್ಯಕ್ಷ ಲಕ್ಷö್ಮಣ ಕೊಡ್ಲಿ, ಜಿಲ್ಲಾ ಪ್ರ,ಕಾ ನಾಗೇಶ ಕುಶಾಳಕರ, ಸಮಾಜದ ಮುಖಂಡರಾದ ಸುರೇಶ್ ಕುಶಾಲಕರ, ಕೃಷ್ಣ ಕುಶಾಳಕರ ಸೇರಿದಂತೆ ಇತರರು ಇದ್ದರು.