ಸಮರ್ಪಕವಾಗಿ ಬೆಳೆ ಪರಿಹಾರ ವಿತರಿಸಲು - ರಾಜು ಬಾಣತಿಹಾಳ ಆಗ್ರಹ.
ಸಮರ್ಪಕವಾಗಿ ಬೆಳೆ ಪರಿಹಾರ ವಿತರಿಸಲು - ರಾಜು ಬಾಣತಿಹಾಳ ಆಗ್ರಹ.
ಶಹಪುರ : ತಾಲೂಕಿನ ಗ್ರಾಮೀಣ ಭಾಗದ ಕೆಲವೊಂದು ರೈತರಿಗೆ ಇನ್ನೂ ಬೆಳೆಯ ನಷ್ಟದ ಪರಿಹಾರ ಬಂದಿಲ್ಲ,ಬೆಳೆ ಪರಿಹಾರ ವಿತರಣೆಯಲ್ಲಿ ತುಂಬಾ ವಿಳಂಬವಾಗುತ್ತಿದ್ದು,ಕೂಡಲೇ ಸಮರ್ಪಕವಾಗಿ ಬೆಳೆ ಪರಿಹಾರ ವಿತರಿಸಬೇಕೆಂದು ಯುವ ಮುಖಂಡ ರಾಜು ಬಾಣತಿಹಾಳ ಆಗ್ರಹಿಸಿದ್ದಾರೆ.
ರಾಜ್ಯ ಸರ್ಕಾರ,ಜಿಲ್ಲಾಡಳಿತ ಮತ್ತು ಕೃಷಿ ಇಲಾಖೆ ಬೆಳೆ ನಷ್ಟ ಪರಿಹಾರವನ್ನು ವಿತರಣಾ ಪ್ರಕ್ರಿಯೆಗಳಲ್ಲಿ ಕಂಡು ಬಂದಿರುವ ತಾಂತ್ರಿಕ ನ್ಯೂನತೆಗಳನ್ನು ಬಗೆಹರಿಸಿ ಕೂಡಲೇ ಸುಗಮಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಸದ್ಯಕ್ಕೆ ಘೋಷಣೆ ಮಾಡಿದ ಪರಿಹಾರದ ಮೊತ್ತ ಬೆಳೆ ನಷ್ಟಕ್ಕೆ ಹೋಲಿಕೆ ಮಾಡಿದರೆ,ತುಂಬಾ ಕಡಿಮೆ ಇದೆ,ಇದರಿಂದ ರೈತರಿಗೆ ತೊಂದರೆಯಾಗುತ್ತಿದ್ದು ಕೂಡಲೇ ಬೆಳೆ ನಷ್ಟದ ಪರಿಹಾರ ಹೆಚ್ಚಿಸಬೇಕೆಂದು ಸರ್ಕಾರಕ್ಕೆ ಸಲಹೆ ನೀಡಿದರು.
