ಕೃತಕ ಬುದ್ಧಿಮತ್ತೆಯ ಕುರಿತಾದ ಎರಡು ದಿನದ ಅಂತರಾಷ್ಟ್ರೀಯ ಸಮ್ಮೇಳನ ಕಾರ್ಯಕ್ರಮ ಉದ್ಘಾಟನೆ
ಕೃತಕ ಬುದ್ಧಿಮತ್ತೆಯ ಕುರಿತಾದ ಎರಡು ದಿನದ ಅಂತರಾಷ್ಟ್ರೀಯ ಸಮ್ಮೇಳನ ಕಾರ್ಯಕ್ರಮ ಉದ್ಘಾಟನೆ
ಕಲಬುರಗಿ: ನಗರದ ಸರಕಾರಿ ಮಹಾವಿದ್ಯಾಲಯ ಸ್ವಾಯತ್ತದಲ್ಲಿರುವ ಕಾಲೇಜಿನ ಡಾ.ಬಿ.ಆರ್ ಅಂಬೇಡ್ಕರ್ ಸಭಾಂಗಣದಲ್ಲಿ "ಸುಸ್ಥಿರ ಶೈಕ್ಷಣಿಕ ಗ್ರಂಥಾಲಯಗಳಿಗಾಗಿ ಕೃತಕ ಬುದ್ಧಿಮತ್ತೆಯ ಕುರಿತಾದ ಅಂತರಾಷ್ಟ್ರೀಯ ಸಮ್ಮೇಳನ"ವನ್ನು ಡಿಸೆಂಬರ್ ೨೬ ಮತ್ತು ೨೭ರಂದು ಎರಡು ದಿನಗಳ ಕಾರ್ಯಕ್ರಮವನ್ನು ಗೌರವಾನ್ವಿತ ಹಳೆಯ ವಿದ್ಯಾರ್ಥಿಗಳ ಗೌರವಾರ್ಥವಾಗಿ ಎ. ಐ. ಸಿ.ಸಿ ಅಧ್ಯಕ್ಷರಾದ ಡಾ. ಮಲ್ಲಿಕಾರ್ಜುನ ಖರ್ಗೆ ಅವರ ಗೌರವಾರ್ಥವಾಗಿ ಹಾಗೂ ಪಿ.ಎಂ- ಉಷಾ ಯೋಜನೆಯ ಮೃದು- ಘಟಕ ಚಟುವಟಿಕೆಗಳ ಅಡಿಯಲ್ಲಿ ಮತ್ತು ಕರ್ನಾಟಕ ರಾಜ್ಯ ಗ್ರಂಥಪಾಲಕರ ವಿವಿಧ ಸಂಘಗಳ ಸಹಯೋಗದಲ್ಲಿ ಅಂತರಾಷ್ಟ್ರೀಯ ಸಮ್ಮೇಳನವನ್ನು ಹಮ್ಮಿಕೊಳ್ಳಲಾಯಿತು.
ಈ ಸಮ್ಮೇಳವನ್ನು ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಶರಣಪ್ರಕಾಶ್ ಪಾಟೀಲ ಅವರು ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಜಗತ್ತು ತುಂಬಾ ವೇಗವಾಗಿ ಬೆಳೆಯುವುದರಿಂದ ಕೃತಕ ಬುದ್ಧಿಮತ್ತೆಯ ಅವಶ್ಯಕತೆ ಇದೆ. ಗ್ರಂಥಾಲಯದಿAದ ಜ್ಞಾನದ ಅರಿವು ಹೆಚ್ಚಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ದಕ್ಷಿಣ ಮತಕ್ಷೇತ್ರದ ಶಾಸಕರಾದ ಅಲ್ಲಮಪ್ರಭು ಪಾಟೀಲ ಅವರು ಮಾತನಾಡುತ್ತಾ ಇಂದಿನ ವಿದ್ಯಾರ್ಥಿಗಳಿಗೆ ಗ್ರಂಥಾಲಯದ ಅವಶ್ಯಕತೆ ಇದೆ. ವಿದ್ಯಾರ್ಥಿಗಳು ಓದಿನಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಬೀದರ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಬಿ. ಎಸ್. ಬಿರಾದರ ಅವರು ಮಾತನಾಡಿ, ಇಂದಿನ ಡಿಜಿಟಲ್ ಯುಗದಲ್ಲಿ ಗ್ರಂಥಾಲಯಗಳ ಕಾರ್ಯವಿಧಾನವನ್ನು ಸುಧಾರಿಸಲುಂ.I ಮಹತ್ವದ ಪಾತ್ರವಹಿಸುತ್ತದೆ ಎಂದರು. ಗುಲ್ಬರ್ಗ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ. ರಮೇಶ ಲಂಡನಕರ್ ಹಾಗೂ ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರಾದ ಪ್ರೊ. ಗೊಳ್ಳೆ ಶಿವಶರಣ ಅವರು ಗ್ರಂಥಾಲಯದ ಮಹತ್ವವನ್ನು ಕುರಿತು ಮಾತನಾಡಿದರು.
ಕಾಲೇಜಿನ ಗ್ರಂಥಾಲಯಗಳ ಬಗ್ಗೆ ಪ್ರೊ.ವಿ.ಟಿ ಕಾಂಬಳೆ ಅವರು ಮತ್ತು ಡಾ. ಸುರೇಶ ಜಂಗೆ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ವಿಶೇಷ ಅತಿಥಿಗಳಾಗಿ ಆಗಮಿಸಿದ ಲಕ್ನೋದ ಬಾಬಾಸಾಹೇಬ ಭೀಮರಾವ ಅಂಬೇಡ್ಕರ್ ಕೇಂದ್ರೀಯ ವಿಶ್ವವಿದ್ಯಾಲಯದ ಡೀನ್‌ರಾದ ಪ್ರೊ.ಎಂ.ಪಿ ಸಿಂಗವರು ಕೃತಕ ಬುದ್ಧಿಮತ್ತೆಯ ಉಪಯೋಗ ಹಾಗೂ ಅನಾನುಕೂಲತೆಗಳ ಕುರಿತು ತಿಳಿಸಿದರು. ಕೃತಕ ಬುದ್ಧಿಮತ್ತೆಯೊಂದಿಗೆ ಗ್ರಂಥಾಲಯಗಳನ್ನು ನವೀಕರಿಸಬೇಕು ಎಂದರು. ಅತಿಥಿಗಳಾಗಿ ಆಗಮಿಸಿದ ಡಾ. ರಘುನಂದನ ಮತ್ತು ಮಹಮದ್ ಚಿಸ್ತಿ ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಡಾ. ಸವಿತಾ ತಿವಾರಿ ಅವರು ಗ್ರಂಥಾಲಯಗಳನ್ನು ಕುರಿತು ಮಾತನಾಡಿದರು. ಕಾರ್ಯಕ್ರಮದ ಸಂಘಟನಾ ಕಾರ್ಯದರ್ಶಿ ಡಾ. ವಿಜಯಕುಮಾರ. ಬಿ ಗೋಪಾಳೆ ಅವರು ಹಾಗೂ ಸಂಘಟನೆಯ ಸಹ ಕಾರ್ಯದರ್ಶಿ ಡಾ. ರಬಿಯಾ ಇಫತ್ ಅವರು ಕಾರ್ಯನಿರ್ವಹಿಸಿದರು. ಈ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಕಾಲೇಜು ಗ್ರಂಥಪಾಲಕ ಸಂಘದ ಅಧ್ಯಕ್ಷರಾದ ಡಾ. ಎಂ ಕೃಷ್ಣಪ್ಪ, ಡಾ. ಮಲ್ಲೇಶಪ್ಪ ಕುಂಬಾರ, ಡಾ. ವಿಜಯಕುಮಾರ ಸಾಲಿಮನಿ, ಡಾ. ರಾಜಕುಮಾರ್ ಸಲಗರ, ಡಾ. ದವಲಪ್ಪ ಬಿ.ಹೆಚ್, ಡಾ. ಟಿ.ವಿ ಅಡಿವೇಶ, ಡಾ. ರವೀಂದ್ರ ಭಂಡಾರಿ, ಡಾ. ಶ್ರೀಮಂತ ಹೋಳ್ಕರ್, ಡಾ. ವಿಶ್ವನಾಥ ಬೆಣ್ಣೂರ, ಡಾ. ಬಲಭೀಮ ಸಾಂಗ್ಲಿ, ಪ್ರೋ. ಮಂಜುನಾಥ, ಡಾ. ನಾಗಪ್ಪ ಗೋಗಿ ಹಾಗೂ ಕಾಲೇಜಿನ ಸಿಬ್ಬಂದಿತೇರ ವರ್ಗದವರಾದ ಕಾಲೇಜಿನ ವ್ಯವಸ್ಥಾಪಕರಾದ ಅಜಯಸಿಂಗ್ ತಿವಾರಿ, ವಿಜಯಲಕ್ಷ್ಮಿ.ಬಿ, ಶಿವಾನಂದ ಸ್ವಾಮಿ ಅವರು ಉಪಸ್ಥಿತರಿದ್ದರು. ನಾಡಗೀತೆಯನ್ನು ಡಾ. ಶಾಮಲಾ ಸ್ವಾಮಿ ಮತ್ತು ಸಂಗಡಿಗರಿAದ ಹಾಡಿದರು. ಡಾ. ಅನುಸೂಯಾ ಗಾಯಕವಾಡ್ ಅವರು ಪ್ರಾರ್ಥಿಸಿದರು. ಡಾ. ರಾಜಕುಮಾರ ಸಲಗರ ಅವರು ಸ್ವಾಗತಿಸಿದರು. ಡಾ. ರಬಿಯಾ ಇಫತ್ ಅವರು ಪ್ರಾಸ್ತವಿಕವಾಗಿ ಮಾತನಾಡಿದರು. ಡಾ. ಅರುಣಕುಮಾರ ಸಲಗರ ಅವರು ಅತಿಥಿಗಳ ಪರಿಚಯ ಮಾಡಿದರು. ಡಾ. ಬಲಭೀಮ ಸಾಂಗ್ಲಿ ಅವರು ವಂದಿಸಿದರು. ಈ ಅಂತರಾಷ್ಟ್ರೀಯ ಸಮ್ಮೇಳನದ ಕಾರ್ಯಕ್ರಮವನ್ನು ಡಾ. ಮಹಮ್ಮದ ಯುನಿಸ್ ಹಾಗೂ ಡಾ.ಭಾಗ್ಯಲಕ್ಷ್ಮಿ ಅವರು ಅಚ್ಚುಕಟ್ಟಾಗಿ ನಿರೂಪಿಸಿದರು. ಈ ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲಾ ಪ್ರಾಧ್ಯಾಪಕರು ಹಾಗೂಎನ್. ಎಸ್. ಎಸ್, ಎನ್. ಸಿ.ಸಿ ಹಾಗೂ ಸ್ಕೌಟ್ ಗೈಡ್ಸ್ ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಹಾಗೂ ವಿವಿಧ ಕಾಲೇಜಿನಿಂದ ಆಗಮಿಸಿದ ಎಲ್ಲಾ ಗ್ರಂಥಪಾಲಕರು ಮತ್ತು ಸಿಬ್ಬಂದಿತೇರ ವರ್ಗದವರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು.
