ಎನ್ ಪಿ ಎಸ್ ಪದವಿಪೂರ್ವ ಕಾಲೇಜಿನ ಪ್ರವೇಶಕ್ಕಾಗಿ ಉಚಿತ ಪ್ರವೇಶ ಪರೀಕ್ಷೆ

ಎನ್ ಪಿ ಎಸ್ ಪದವಿಪೂರ್ವ ಕಾಲೇಜಿನ ಪ್ರವೇಶಕ್ಕಾಗಿ ಉಚಿತ ಪ್ರವೇಶ ಪರೀಕ್ಷೆ

ಎನ್ ಪಿ ಎಸ್ ಪದವಿಪೂರ್ವ ಕಾಲೇಜಿನ ಪ್ರವೇಶಕ್ಕಾಗಿ ಉಚಿತ ಪ್ರವೇಶ ಪರೀಕ್ಷೆ

ಕಲಬುರ್ಗಿ: ದಿನಾಂಕ 28/12/2025ರಂದು ಕಲಬುರ್ಗಿ ಪ್ರತಿಷ್ಠಿತ ಕಾಲೇಜ ನ್ಯಾಷನಲ್ ಪಬ್ಲಿಕ್ ವಿಜ್ಞಾನ ಪಿಯು ಕಾಲೇಜು ಹಾಗೂ ಹಂಚಿನ ಮನಿ ಕಾಲೇಜು, ಧಾರವಾಡ ಇವರ ಸಹ ಯೋಗದೊಂದಿಗೆ ಕಲಬುರ್ಗಿ ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿ ಉಚಿತ ಪ್ರವೇಶ ಪರೀಕ್ಷೆಯನ್ನು ಹಮ್ಮಿಕೊಳ್ಳಲಾಗಿದೆ.

     ಕಲ್ಬುರ್ಗಿಯ 2018 -19 ನೇ ಯ ಸಾಲಿನಲ್ಲಿ ನ್ಯಾಷನಲ್ ಪಬ್ಲಿಕ್ ಶಾಲೆಯನ್ನು ಆರಂಭಿಸುವುದರ ಜೊತೆಗೆ 2022 ರಲ್ಲಿ ನ್ಯಾಷನಲ್ ಪಬ್ಲಿಕ್ ವಿಜ್ಞಾನ ಪಿಯು ಕಾಲೇಜನ್ನು ಧಾರವಾಡದ ಪ್ರತಿಷ್ಠಿತ ಸಂಸ್ಥೆಗಳೊಂದಾದ ಹಂಚಿನಮನಿ ಕಾಲೇಜಿನ ಸಹಯೋಗದೊಂದಿಗೆ ಪ್ರಾರಂಭಿಸಲಾಯಿತು.

   1994 ರಲ್ಲಿ ಧಾರವಾಡದಲ್ಲಿ ಸ್ಥಾಪಿಸಲಾದ ಹಂಚಿನಮನಿ ಪಿಯು ವಿಜ್ಞಾನ ಕಾಲೇಜು 30 ವರ್ಷಗಳಿಂದ ಗುಣಮಟ್ಟದ ಶಿಕ್ಷಣ ವನ್ನು ನೀಡುತ್ತಾ ಬರುತ್ತಿದೆ. ಇಲ್ಲಿ ನುರಿತ,ತರಬೇತಿ ಪಡೆದ,ಪರಿಣಿತಿ ಹೊಂದಿದ ಪ್ರಾಧ್ಯಾಪಕರನ್ನೇ ಎನ್‌ಪಿಎಸ್ ಪಿಯು ಕಾಲೇಜಿನಲ್ಲಿ ನೇಮಕ ಮಾಡಿಕೊಂಡು ಅವರಿಂದಲೇ ಬೋಧನೆಯನ್ನು ಮಾಡಿಸಲಾಗುತ್ತಿದೆ.

    2022 ರಲ್ಲಿ ಕೇವಲ 241 ವಿದ್ಯಾರ್ಥಿಗಳೊಂದಿಗೆ ಆರಂಭಗೊಂಡ ಕಾಲೇಜು ಪ್ರಸ್ತುತ ವರ್ಷ ವಿದ್ಯಾರ್ಥಿಗಳ ಸಂಖ್ಯೆ 1000 ಕ್ಕೆ ಏರಿದೆ. ಅನುಭವಿ ಪ್ರಾಧ್ಯಾಪಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ನಿರೀಕ್ಷೆಗೂ ಮೀರಿದ ಫಲಿತಾಂಶ ಮೊದಲ ಹಾಗೂ ಎರಡನೇ ಬ್ಯಾಚಿನಲ್ಲಿ ನೂರಕ್ಕೆ ನೂರರಷ್ಟು ಫಲಿತಾಂಶ ತೆಗೆದು ದಾಖಲೆ ನಿರ್ಮಿಸಿದ್ದಾರೆಂದು ಕಾಲೇಜಿನ ಅಧ್ಯಕ್ಷರಾದ ಶಶಿಲ.ಜಿ.ನಮೋಶಿ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

       ಕಲ್ಬುರ್ಗಿ ನ್ಯಾಷನಲ್ ಪಬ್ಲಿಕ್ ಪಿಯು ಕಾಲೇಜಿನ ಭವ್ಯವಾದ ಕಟ್ಟಡ,ಗ್ರಂಥಾಲಯ, ಸುಸಜ್ಜಿತ ತರಗತಿ ಕೋಣೆಗಳು, ಪ್ರಯೋಗಾಲಯ, ಆಟದ ಮೈದಾನ, ಪರಿಣಿತ ಪ್ರಾಧ್ಯಾಪಕರಿಂದ NEET, JEE, KCET, ಭೋದಿಸಲಾಗುತ್ತದೆ.

       ಉಚಿತ ಪ್ರವೇಶ ಪರೀಕ್ಷೆಯಲ್ಲಿ ಯು ವಿದ್ಯಾರ್ಥಿಗಳು ನೂರಕ್ಕೆ ಶೇಕಡ 90 ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದರೆ ಎರಡು ವರ್ಷ ಕಾಲೇಜು ಹಾಸ್ಟೆಲ್ ಫೀಸ್ ಉಚಿತವಾಗಿರುತ್ತದೆ. ಶೇಕಡ 85- 90 ಅಂಕ ಪಡೆದ ವಿದ್ಯಾರ್ಥಿಗಳಿಗೆ ಎರಡು ವರ್ಷ ಕಾಲೇಜು ಪೀಸ್ ಇರುವುದಿಲ್ಲ. ಶೇಕಡಾ 80 - 85 ಅಂಕ ಪಡೆದ ವಿದ್ಯಾರ್ಥಿಗಳಿಗೆ ಎರಡು ವರ್ಷ ಕಾಲೇಜ್ ಪೀಸ್ ನಲ್ಲಿ ಶೇಕಡ 50ರಷ್ಟು ರಿಯಾಯಿತಿ ಇರುತ್ತದೆ. ಶೇಕಡ 75 -80ರಷ್ಟು ಅಂಕ ಪಡೆದ ವಿದ್ಯಾರ್ಥಿಗಳಿಗೆ ಎರಡು ವರ್ಷ ಕಾಲೇಜ ಪೀಸ್ ನಲ್ಲಿ ಶೇಕಡ 25 ರಷ್ಟು ರಿಯಾಯಿತಿ. ಇರುತ್ತದೆ.

    ಈ ರೀತಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕಾಲೇಜಿನಿಂದ ಅನುಕೂಲವಾಗಲೆಂದು ಕಾಲೇಜಿನ ಕಾರ್ಯದರ್ಶಿಗಳಾದ ಸುರೇಶ್ ಕುಮಾರ್ ಬುಲ್ಬುಲೇ ಅವರು ತಿಳಿಸಿರುತ್ತಾರೆ.

* ನಮ್ಮ ಕಾಲೇಜಿನ ಸೌಲಭ್ಯಗಳು:---

* ನುರಿತ ಮತ್ತು ಅನುಭವಿ

 ಉಪನ್ಯಾಸಕ ವೃಂದ.

* ಅಂತರಾಷ್ಟ್ರೀಯ ಮಟ್ಟದ ಅಧ್ಯಯನ ಕೇಂದ್ರ.

* ವಿಶಾಲ ಸುಸಜ್ಜಿತ ಪ್ರಯೋಗಾಲಯಗಳು, ಪ್ರತ್ಯೇಕವಾದ ಆಧುನಿಕ ಸೌಲಭ್ಯವುಳ್ಳ ಹಾಸ್ಟೆಲ್ ವಸತಿನಿಲಯಗಳು.

* ಎಲ್ಲಾ ಬಡಾವಣೆಗಳಿಂದ ವಿದ್ಯಾರ್ಥಿಗಳನ್ನು ಕರೆತರಲು ಸಾರಿಗೆ ಸೌಲಭ್ಯ.

* ಹಾಸ್ಟೆಲ್ ವಿದ್ಯಾರ್ಥಿನಿಯರಿಗೆ ವೈಯಕ್ತಿಕ ಸಲಹಾ ಕಾರ್ಯಗಾರ.

* ಪಿಯುಸಿ ಪ್ರಥಮ ವರ್ಷದಿಂದಲೇ ಕೆ ಸಿಇಟಿ, ನೀಟ್, ಮತ್ತು ಜೆ ಇಇ ಅಭ್ಯಾಸ ಆರಂಭ.

 ಡಿಸೆಂಬರ್ 28ರಂದು ನಡೆಯುವ ಉಚಿತ ಪ್ರವೇಶ ಪರೀಕ್ಷೆಗಾಗಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಮುಂದಿನ ಭವಿಷ್ಯವನ್ನು ರೂಪಿಸಿಕೊಳ್ಳಲು ಇದೊಂದು ಸದಾಕಾಶವನ್ನು ಕಲಬುರಗಿಯ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದಾದ ಎನ್. ಪಿ.ಎಸ್‌.ನಲ್ಲಿ ಹಮ್ಮಿಕೊಳ್ಳಲಾಗಿದೆ.

          ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕಲಬುರಗಿ, ಬೀದರ, ಯಾದಗಿರ, ಶಾಹ ಪುರ ಜಿಲ್ಲೆಗಳಲ್ಲಿ ಪರೀಕ್ಷೆ ಏಕಕಾಲಕ್ಕೆ ನಡೆಯಲಿದ್ದು, ನಗರದ ವಿವಿಧ ಬಡಾವಣೆಯಿಂದ ಬರುವ ವಿದ್ಯಾರ್ಥಿ ಗಳಿಗಾಗಿಪ್ರತ್ಯೇಕ ಬಸ್ ವ್ಯವಸ್ಥೆ ಮಾಡಿಸಲಾಗಿದೆ. ಹಾಗೂ ಚಿತ್ತಾಪುರ, ಆಳಂದ, ಅಫಜಲಪುರ ಸೇಡಂ, ಗುರುಮಿಟ್ಕಲ್ ಗಳಿಂದ ಬರುವ ವಿದ್ಯಾರ್ಥಿಗಳಿಗೆ ಉಪಹಾರ ದ ವ್ಯವಸ್ಥೆ ಮಾಡಲಾಗಿದೆ.

   ಆಯಾ ಪ್ರಮುಖ ಸ್ಥಳಗಳಲ್ಲಿ ಕಾಲೇಜಿನ ಬಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಅಲ್ಲದೆ ಪ್ರಮುಖ ಶಾಲಾ ಕಾಲೇಜುಗಳ ಮುಂದೆ ಬಸ್ ವ್ಯವಸ್ಥೆ ನೀಡಲಾಗಿದೆ.

 ಹೀಗೆ ನಾನಾ ರೀತಿಯ ವ್ಯವಸ್ಥೆಯನ್ನು ಪ್ರತಿಷ್ಠಿತ ಕಾಲೇ ಜುಗಳಲ್ಲಿ ಒಂದಾದ ಎನ್ ಪಿಎಸ್ ನಿಂದ ಮಾಡಲಾಗುತ್ತದೆಂದು ಶೈಕ್ಷಣಿಕ ಮುಖ್ಯಸ್ಥರಾದ ವಿಶ್ವನಾಥ್ ಗರುಡ್ ಸರ್ ರವರು ತಿಳಿಸಿರುತ್ತಾರೆ.