ವಿಶ್ವ ಹೃದಯ ದಿನದ ಅಂಗವಾಗಿ ಹರಿದಾಸ ಹೃದಯ ಆಸ್ಪತ್ರೆಯಲ್ಲಿ ಸೆ. 29 ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ

ವಿಶ್ವ ಹೃದಯ ದಿನದ ಅಂಗವಾಗಿ ಹರಿದಾಸ ಹೃದಯ ಆಸ್ಪತ್ರೆಯಲ್ಲಿ ಸೆ. 29 ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ

ವಿಶ್ವ ಹೃದಯ ದಿನದ ಅಂಗವಾಗಿ ಹರಿದಾಸ ಹೃದಯ ಆಸ್ಪತ್ರೆಯಲ್ಲಿ ಸೆ. 29 ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ

ಕಲಬುರಗಿ: ಶ್ಯಾತ ಹೃದಯ ರೋಗ ತಜ್ಞರಾದ ಡಾ. ಅರುಣ್ ಕುಮಾರ್ ಹರಿದಾಸ್ ಅವರ ಹರಿದಾಸ ಹೃದಯ ಆಸ್ಪತ್ರೆಯಲ್ಲಿ ನಾಳೆ ಸೋಮವಾರ (ಸೆ 29ರಂದು) ಮಧ್ಯಾಹ್ನ 12 ಗಂಟೆಯಿಂದ ನಾಲ್ಕು ಗಂಟೆವರೆಗೆ ವಿಶ್ವ ಹೃದಯ ದಿನದ ಅಂಗವಾಗಿ ಉಚಿತ ಹೃದಯ ತಪಾಸಣೆ ವಿಶೇಷ ಶಿಬಿರ ನಡೆಯಲಿದೆ.

  ಕಲಬುರಗಿಯ ಸೂಪರ್ ಮಾರ್ಕೆಟ್ ನ ಜವಳಿ ಕಾಂಪ್ಲೆಕ್ಸ್ ನಲ್ಲಿರುವ ಹರಿದಾಸ ಹೃದಯ ಆಸ್ಪತ್ರೆಯಲ್ಲಿ ಸಾರ್ವಜನಿಕರು ಉಚಿತವಾಗಿ ಹೃದಯ ತಪಾಸಣೆ ಮಾಡಿಕೊಳ್ಳಬಹುದು. ಸ್ವಾಸ್ಥಕೋಶ ತಜ್ಞರಾದ ಡಾ. ಹರ್ಷ ಮೂರ್ತಿ ಮತ್ತು ಹೃದಯ ತಜ್ಞರಾದ ಡಾ. ಅರುಣ್ ಕುಮಾರ್ ಹರಿದಾಸ್ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ. ಹೃದಯ ಹಾಗೂ ಶ್ವಾಸಕೋಶ ಸಂಬಂಧಿ ಸಮಸ್ಯೆಗಳ ಕುರಿತಾಗಿ ಖ್ಯಾತ ವೈದ್ಯರನ್ನು ಭೇಟಿ ಮಾಡಿ ಪರಿಹಾರ ಕಂಡುಕೊಳ್ಳಲು ಈ ಶಿಬಿರ ಅತ್ಯಂತ ಉಪಯುಕ್ತ ಎಂದು ಡಾ. ಅರುಣ್ ಕುಮಾರ್ ಹರಿದಾಸ್ ತಿಳಿಸಿದ್ದಾರೆ