ಪಿಯು ವಿದ್ಯಾರ್ಥಿಗಳಿಗೆ ಸ್ವಾಗತ, ಪ್ರತಿಭಾ ಪುರಸ್ಕಾರ 3ರಂದು
ಪಿಯು ವಿದ್ಯಾರ್ಥಿಗಳಿಗೆ ಸ್ವಾಗತ, ಪ್ರತಿಭಾ ಪುರಸ್ಕಾರ 3ರಂದು
ಜೇವರ್ಗಿ : ಪಟ್ಟಣದ ಬಸವೇಶ್ವರ ವೃತ್ತದ ಸಮೀಪವಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ, ವಿದ್ಯಾರ್ಥಿ ಸಂಘ ಉದ್ಘಾಟನೆ, ಸಾಂಸ್ಕೃತಿಕ, ಎನ್.ಎಸ್.ಎಸ್ ಚಟುವಟಿಕೆಗಳಿಗೆ ಚಾಲನೆ, ಪ್ರತಿಭಾ ಪುರಸ್ಕಾರ, ಕಾಲೇಜಿನಲ್ಲಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಸಿಬ್ಬಂದಿಗೆ ಬೀಳ್ಕೊಡುಗೆ ಹಾಗೂ ನೂತನವಾಗಿ ಸೇವೆಗೆ ಹಾಜರಾದ ಸಿಬ್ಬಂದಿಗೆ ಸ್ವಾಗತ ಸಮಾರಂಭವನ್ನು ಇದೇ ದಿ.3ರ ಮಂಗಳವಾರ ಹಮ್ಮಿಕೊಳ್ಳಲಾಗಿದೆ ಎಂದು ಕಾಲೇಜಿನ ಉಪನ್ಯಾಸಕ, ಸಾಂಸ್ಕೃತಿಕ ಸಂಘದ ಕಾರ್ಯದರ್ಶಿ ಹಾಗೂ ಎನ್.ಎಸ್ ಎಸ್ ಅಧಿಕಾರಿ ಎಚ್.ಬಿ.ಪಾಟೀಲ ಹೇಳಿದ್ದಾರೆ.
3 ಸೆಪ್ಟೆಂಬರ್ 24 ರಂದು ಬೆ.10.30 ಗಂಟೆಗೆ ಕಾಲೇಜಿನ ಸಭಾಂಗಣದಲ್ಲಿ ಜರುಗಲಿರುವ ಸಮಾರಂಭವನ್ನು ಡಿಡಿಪಿಯು ಶಿವಶರಣಪ್ಪ ಮೂಳೆಗಾಂವ ಅವರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಿಬಿಸಿ ಉಪಾಧ್ಯಕ್ಷ ರವೀಂದ್ರಕುಮಾರ ವೈ.ಕೋಳಕೂರ, ನಿವೃತ್ತ ಪ್ರಾಚಾರ್ಯ ಹಾಗೂ ನ್ಯಾಯವಾದಿ ಮೊಹಮ್ಮದ ಅಲ್ಲಾಉದ್ದೀನ ಸಾಗರ, ಎನ್.ಎಸ್.ಎಸ್ ಕಲಬುರಗಿ ವಿಭಾಗೀಯ ಅಧಿಕಾರಿ ಡಾ.ಚಂದ್ರಶೇಖರ ದೊಡ್ಡಮನಿ, ಕಲಬುರಗಿಯ ಗುರುಜಿ ಡಿಗ್ರಿ ಕಾಲೇಜಿನ ಮುಖ್ಯಸ್ಥ ಕಲ್ಯಾಣಕುಮಾರ ಶೀಲವಂತ ಆಗಮಿಸಿಲಿದ್ದಾರೆ. ಸಹ ಪ್ರಾಧ್ಯಾಪಕ ಡಾ.ಶರಣಪ್ಪ ಸೈದಾಪೂರ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಕಾಲೇಜಿನ ಪ್ರಾಚಾರ್ಯ ರವೀಂದ್ರಕುಮಾರ ಸಿ. ಬಟಗೇರಿ ಅಧ್ಯಕ್ಷತೆ ಹಾಗೂ ಉಪನ್ಯಾಸಕ, ಸಾಂಸ್ಕೃತಿಕ ಸಂಘದ ಕಾರ್ಯದರ್ಶಿ, ಎನ್.ಎಸ್.ಎಸ್ ಅಧಿಕಾರಿ ಎಚ್.ಬಿ.ಪಾಟೀಲ ಗೌರವ ಉಪಸ್ಥಿತಿ ವಹಿಸಲಿದ್ದಾರೆ. ಕಾಲೇಜಿನಲ್ಲಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಜೀವಶಾಸ್ತ್ರ ಉಪನ್ಯಾಸಕರಾದ ಶರಣಮ್ಮ ಭಾವಿಕಟ್ಟಿ, ಗ್ರಂಥಪಾಲಕರಾದ ಪ್ರಕಾಶ ಪಾಟೀಲ, ಪ್ರ.ದ.ಸ ನೇಸರ ಎಂ. ಬೀಳಗಿಮಠ, ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಉಮಾದೇವಿ ಮಾಲಿಪಾಟೀಲ, ಸುನಂದಾ, ಕವಿತಾ ಕಮಲಾಪೂರಕರ್ ಅವರಿಗೆ ಬೀಳ್ಕೊಡುಗೆ ಮತ್ತು ನೂತನ ಉಪನ್ಯಾಸಕರಾಗಿ ಕಾಲೇಜಿನ ಸೇವೆಗೆ ಹಾಜರಾದ ದುಂಡಪ್ಪ ಯರಗೋಳ, ಕೀರ್ತಿ ಬುಜುರಕೆ, ಸುವರ್ಣಲತಾ ಭಂಡಾರಿ, ಗ್ರಂಥಪಾಲಕರಾದ ಲಿಂಗರಾಜ ಹಿರೇಗೌಡ ಅವರಿಗೆ ಸ್ವಾಗತ ಜರುಗಲಿದೆ. ಕಳೆದ ಸಾಲಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳೊಂದಿಗೆ ಉತ್ತೀರ್ಣರಾದ
ಸಿದ್ದೇಶ(ಕಲಾ), ಭಾಗೇಶ(ವಾಣಿಜ್ಯ) ಮತ್ತು ಉಷಾ(ವಿಜ್ಞಾನ) ಅವರಿಗೆ ಪ್ರತಿಭಾ ಪುರಸ್ಕಾರ ನೆರವೇರಲಿದೆ ಎಂದು ಅವರು ತಿಳಿಸಿದ್ದಾರೆ.