'ಅಂಕುರ'ದೊಳಗಿದೆ ಮಹತ್ವಪೂರ್ಣ ಸಂದೇಶ

'ಅಂಕುರ'ದೊಳಗಿದೆ ಮಹತ್ವಪೂರ್ಣ ಸಂದೇಶ

'ಅಂಕುರ'ದೊಳಗಿದೆ ಮಹತ್ವಪೂರ್ಣ ಸಂದೇಶ

ಬಿದ್ರಿ ಕಲೆಗೆ ಏಷ್ಯಾ ಖಂಡದ ತವರು ಮನೆ ಎಂಬ ಕಿರ್ತಿ ಪಡೆದದ್ದು ನಮ್ಮ ಧರಿನಾಡ ಸಿರಿ ಬೀದರ ಜಿಲ್ಲೆ. ಕರ್ನಾಟಕದ ಕಿರಿಟವಾದ ನಮ್ಮ ಜಿಲ್ಲೆಯ ಚಿಲ್ಲರ್ಗಿ ಗ್ರಾಮದ ಹುಡುಗ ರಾಜು ಪವಾರ. ರಾಜು ಪವಾರ ಒಬ್ಬ ಭರವಸೆಯ ಕವಿ ಇತನ ಚೊಚ್ಚಲ ಕೃತಿ 'ಅಂಕುರ' ಒಟ್ಟು ೫೦ ವಿಭಿನ್ನ ವಿಭಿನ್ನವಾದ ಕವನಗಳಿಂದ ಕೂಡಿದ ಒಂದು ಸುಂದರವಾದ ಕವನ ಸಂಕಲನವಿದು. ಈ ಕವನ ಸಂಕಲನ ಬಿಡುಗಡೆಗೊಳಿಸಿದಾಗ ರಾಜು ಪವಾರ ಕೇವಲ 9ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿಯಾಗಿದ. ಆಗಲೇ ಆತನಲ್ಲಿ ಮಿತಿ ಮೀರಿದ ಜ್ಞಾನ ಸಂಪಾದನೆಯ ಹಂಬಲವು ಗಣನಿಯವಾಗಿತ್ತು.

ಈ ಕವನ ಸಂಕಲನದಲ್ಲಿ ಏನಿಲ್ಲ; ಎಲ್ಲವು ಇದೆ. ಬುದ್ಧ, ಬಸವ, ಅಂಬೇಡ್ಕರ, ಸ್ವಾಮಿ ವಿವೇಕಾನಂದ, ಸೇವಾಲಾಲ, ಸುಭಾಷಚಂದ್ರ ಬೋಸರ ವಿಚಾರಗಳು ಕವಿ ಕಾವ್ಯಗಳಲ್ಲಿ ಹಿಡಿದಿಟ್ಟಿದ್ದಾರೆ. ಪಂಪ, ರನ್ನ, ಪೊನ್ನ, ಜನ್ನ, ಹರಿಹರ, ರಾಘವಾಂಕ, ಕುಮಾರವ್ಯಾಸ, ಲಕ್ಷ್ಮೀಶ, ಕುವೆಂಪು, ದ ರಾ ಬೇಂದ್ರೆ, ಡಿವಿಜಿ, ಮಧುರಚೆನ್ನ, ಮುಂತಾದ ಮಹನೀಯರು ಕವಿಯ ಕವನಗಳಲ್ಲಿ ಹಾದು ಹೋಗಿದ್ದಾರೆ. ನಾಡು, ನುಡಿ, ನೆಲ, ಜಲ, ಭಾಷಾಭಿಮಾನವೆಲ್ಲವು ಕವಿಯ ಹೃದಯದಲ್ಲಿ ಹೆಮರದಂತೆ ಇರುವುದು ಈ ಕವನ ಸಂಕಲನದಲ್ಲಿ ಎದು ಕಾಣಿಸುತ್ತದೆ. 

ಪುಸ್ತಕ ತಿರುವುತಿದಂತೆ ಮೊದಲು ಕಂಡುಬರುವುದು 'ಬನ್ನಿ ಮಕ್ಕಳೆ ಶಾಲೆಗೆ ಹೋಗೋಣ' ಎನ್ನುವ ಕವನದ ಈ ಸಾಲುಗಳು 

"ಹೊಸ-ಹೊಸ ವಿಷಯಗಳನ್ನು

 ನಾವು ತಿಳಿದು ಕೊಳೋಣ

 ನಾವು ಹಕ್ಕಿಗಳಂತೆ ಹಾರೋಣ

 ಮಾನವಿಯತೆಯಿಂದ ಬಾಳೋಣ

 ನಾವು ಪ್ರೀತಿಯನ್ನು ಹಂಚೋಣ"

ಹೌದು ವಿದ್ಯಾರ್ಥಿ ಯುವಜನತೆ ಹೊಸ ಹೊಸ ವಿಷಯಗಳನ್ನು ತಿಳಿದುಕೊಳ್ಳುತ್ತಾ ಹೋದಂತೆಲ್ಲ, ಅವರಲ್ಲಿ ಒಂದು ಹೊಸ ಚೈತನ್ಯ ಮೂಡುತ್ತದೆ. ಅ ಚೈತನ್ಯವೇ ಜ್ಞಾನದ ಹಸಿವು ಹೆಚ್ಚಾಗಿಸಿ ಅವರನ್ನು ಜ್ಞಾನಿಯನಾಗಿ ಮಾಡುತ್ತದೆ. ಈ ಜ್ಞಾನವೆ ಅವರನ್ನು ಎತ್ತರದ ಸ್ಥಾನಕ್ಕೆ ಕೊಂಡೊಯ್ಯುದು ಹಕ್ಕಿಯಂತೆ ಸ್ವಚ್ಛಂದವಾಗಿ ಹಾರಲು ಕಲಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಮತದ್ವೇಷದಿಂದಾಗಿ ಮಾನವಿಯತೆಯೇ ಮರೆಯಾಗಿ ಸೌಹಾರ್ದತೆಯು ನಸಿಸುತ್ತಿದೆ. ಇದನ್ನೆಲ್ಲಾ ಮನಗಂಡ ರಾಜು ಪವಾರ ಮಾನವಿಯತೆಯಿಂದ ಬಾಳುತ್ತಾ ಪ್ರೀತಿ ಹಂಚೋಣ ಎಂದು ಕೇವಲ ನಾಲ್ಕೇ ಸಾಲುಗಳಲ್ಲಿ ವಿವರಿಸಿರುವುದು ಆತನ ಪಾಂಡಿತ್ಯ ಎತ್ತಿ ತೋರಿಸುತ್ತದೆ.

ಮನು ಮುನಿ ಮಾಡಿದ ಕುತಂತ್ರದಿಂದಾಗಿ ಈ ನೆಲದ ಬಡ ಜನರು ಸುಮಾರು 6774 ಜಾತಿಗಳಾಗಿ ವಡೆದು ಹಂಚಿ ಹೋಗಿದ್ದಾರೆ. ಇಂದಿಗೂ ಅನೇಕ ಕಡೆ ಈ ಜಾತಿಯ ಪೆಂಡ ಭೂತ ಗಬ್ಬೆದ್ದು ಕೊಳೆತು ನಾರುತ್ತಿರುವುದು ಬಹು ದೊಡ್ಡ ದುರಂತವೇ ಸರಿ.! ಈ ಜಾತಿಯತೆಯನ್ನು ಪೋಷಿಸಿಕೊಂಡು ಮಡಿ ಮೈಲಿಗೆ ಎಂದು ಉದ್ದುದ್ದ ಹಾರುತ ಬರುತ್ತಿರುವ ಮನುವಾದಿಗಳಿಗೆ ಕವಿಯು 'ನಾವು ಒಂದೇ' ಎನ್ನುವ ಕವನದಲ್ಲಿ

 "ಆಕಾಶ ಬೇರೆ ಬೇರೆ

 ಭೂಮಿ ಬೇರೆ ಬೇರೆ

 ನಮಗೆ ಇದೇನು (ಇದೆಯೆನ್ನು)

 ಇಲ್ಲವೇ ಒಂದೇ ತಾನೇ..?"

ಎಂದು ತಿಳಿ ಹೇಳುವುದರ ಮೂಲಕ ಪ್ರಶ್ನಿಸುವ ಎದೆಗಾರಿಕೆಯು ತೋರಿದ್ದಾರೆ.

'ಹೀಗೆ ಆಗುತ್ತಿರಲಿಲ್ಲ' ಎನ್ನುವ ಕವನದಲ್ಲಿ ಗತಿಸಿ ಹೋದ ಸಮಯವೂ ಮತ್ತೆ ಬರಲಾರದು ಎಂಬುವುದನ್ನು ಉದಾಹರಣೆಗಳೊಂದಿಗೆ ತಮ್ಮ ಸುತ್ತ ಮುತ್ತಲಿನ ಶ್ರಮಿಕ ಜೀವಿಗಳ ಮನದಾಳದ ಮಾತುಗಳನ್ನೆ ಕವಿಯು ಇಲ್ಲಿ ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ . ನಿಜಕ್ಕೂ ಈ ಕವನ ಬಹು ಕಾಲ ನೆನಪುಳಿಯುವಂತದು.

ಬಡತನ ಎಂಬುದು ಎಷ್ಟೊಂದು ಕ್ರೂರ ತುತ್ತು ಅನ್ನಕ್ಕಾಗಿ ಕೋಟಿ ಕಷ್ಟ ಪಟ್ಟ ನನ್ನವರ ನೋವು ಯಾವ ಅಕ್ಷರದಿಂದ ಬರೆದು ತೋರಿಸಿದರು ಕಡಿಮೆಯೇ. ಕಷ್ಟ ಕಾಲದಲ್ಲಿ ಅನಿವಾರ್ಯವಾಗಿ ಉಳ್ಳವರ ಮುಂದೆ ಕೈ ಚಾಚಿದ ತಪ್ಪಿಗೆ ಜೀವನ ಪೂರ್ತಿ ಜೀತದಾಳಾಗಿ ದುಡಿಯುವಂತ ಅನಿವಾರ್ಯತೆ ನನ್ನವರಿಗೆ ಎದುರಾಯಿತು ಈ ಪದ್ಮನಾಭನ ನಾಡಿನಲ್ಲಿ. ಅಷ್ಟೇ ಅಲ್ಲದೆ ಬಡ್ಡಿಯ ಹಣದಲ್ಲಿ ಮಗ, ಚಕ್ರ ಬಡ್ಡಿಯ ಹಣದಲ್ಲಿ ಮೊಮ್ಮಗ ಹೀಗೆ ವಂಶ ಪಾರಂಪರಿಕವಾಗಿ ಅನಿವಾರ್ಯತೆಯಿಂದ ದುಡಿಯುತ ಬಂದವರು ಈ ನೆಲ ಮೂಲದ ದುಡಿಯುವ ಬಡ ಜನರು. ಇಷ್ಟಕ್ಕೆಲ್ಲ ಕಷ್ಟ ಕಾಲದಲ್ಲಿ ಉಳ್ಳವರ ಮುಂದೆ ಕೈ ಚಾಚಿರುದೆ ಕಾರಣ.

ಇತ್ತೀಚಿನ ದಿನಗಳಲ್ಲಿ ರೈತರು ಬೆಳೆದ ಬೆಳೆಗೆ ಈ ಕಾರ್ಪೋರೇಟ್ ಸರಕಾರ ಸರಿಯಾದ ಮೂಲ ಬೆಂಬಲ ಬೆಲೆ ನೀಡುತ್ತಿಲ್ಲ. ರೈತರು ಬೆಳೆಗಳಿಗೆ ಹಾಕುವ ಬೀಜ ಗೊಬ್ಬರದ ಬೆಲೆಗಳು ಗಗನಕ್ಕೆ ಮುಟ್ಟಿವೆ. ಹೀಗಾಗಿ ರೈತ ತಾನು ಹಾಕಿದ ಬಂಡವಾಳ ಕೈ ಸೇರದೆ ಸಾಲದ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿದ್ದಾನೆ. ಕೊನೆಗೆ ಸಾಲಗಾರರ ಕಾಟಕ್ಕೆ ಹೆದರಿ ನೇಣಿಗೆ ಶರಣಾಗುತ್ತಿರುವ ದಾರುಣ್ಯ ಸನ್ನಿವೇಶಗಳು ಒಂದಲ್ಲ ಒಂದು ಕಡೆ ನಡೆಯುತ್ತಲೇ ಇವೆ. ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಕವಿಯು 'ಸಾಲ ಮಾಡಬೇಡ' ಎನ್ನುವ ಕವನದಲ್ಲಿ ಅದರ ಬಾಧಕಗಳ ಕುರಿತು ಚರ್ಚಿಸಿರುವುದು ಗಮನಾರ್ಹವಾಗಿದೆ.

ಆಸೆ ಮಾಡಬೇಡಿ ಎನ್ನುವ ಕವನದಲ್ಲಿ "ಅತಿ ಆಸೆಯೇ ದುಃಖಕ್ಕೆ ಮೂಲ ಕಾರಣ" ಎಂಬ ಬುದ್ಧರ ವಿಚಾರವು ಕವಿ ಕವನದಲ್ಲಿ ಹಿಡಿದಿಟ್ಟಿದ್ದಾರೆ.

ಕಾಗೆ ಅನಿಷ್ಟ ಬೆಳ್ಳಂಬೆಳಗ್ಗೆ ಅದನ್ನು ನೋಡಿದರೆ ಒಳೆಯದಾಗುವುದಿಲ್ಲ ಎಂದು ಭಯ್ಯ ಪಡುವ ಮೌಢ್ಯದ ಜನಗಳೇನು ನಮ್ಮ ಭಾರತದಲ್ಲಿ ಕಡಿಮೆ ಇಲ್ಲ. ಇದಕ್ಕೆ ಕವಿಯು 'ಕಾಗೆ' ಎನ್ನುವ ಕವನದಲ್ಲಿ

 "ಕಾಗೆಯೆ ಕಾಗೆಯೆ

 ಕರಿಬಣ್ಣದ ಕಾಗೆಯೆ

 ನೀ ಕೋಗಿಲೆ ಯಾಗಲಾರೆ

 ಮಂಜುಳಧ್ವನಿ ತೆಗೆಯಲಾರೆ

 ಅದರೆ ಕಾಗೆಯೆ

 ಕರಿಬಣ್ಣದ ಕಾಗೆಯೆ

 ನಿನ್ನ ಕಾವ್ ಕಾವ್ ವಾಣಿಯಿಂದ

 ಮುಂಜಾವಿನ ಸೋಚನೆ ನೀಡುವೆ

 ಸೂರ್ಯನ

 ದರ್ಶನ ಮಾಡಿಸುವೆ"

ಎನ್ನುತ್ತಾ ಕವಿಯು ಬೆಳಗ್ಗೆ ಬೆಳಗ್ಗೆ ತನ್ನ ಕಾವ್ ಕಾವ್ ವಾಣಿಯಿಂದ ಜನರನ್ನು ಎಚ್ಚರಗೊಳ್ಳಿಸಿ ತಮ್ಮ ಜವಾಬ್ದಾರಿಯತ ಗಮನ ಹರಿಸುವಂತೆ ಮಾಡುವ ಕಾಗೆಗೆ; ಇಂಪಾದ ಧ್ವನಿ ತೆಗೆಯುವ ಕೋಗಿಲೆಗಿಂತಲೂ ಮಹಾತ್ವದ ಸ್ಥಾನ ನೀಡಿ ಮೌಢ್ಯಕ್ಕೆ ಸೆಡ್ಡು ಹೊಡೆದಿರುವುದು ಸಹ ಈ ಕವನ ಸಂಕಲನದಲ್ಲಿ ನಾವು ಕಾಣಬಹುದು.

'ಪ್ರಾರ್ಥನೆ' ಎನ್ನುವ ಕವನದಲ್ಲಿ 

 "ಹಸಿವಾದಾಗ ಅನ್ನವಾಗಿರು

 ಬಾಯರಿಕೆಯಾದಾಗ ನೀರಾಗಿರು

 ಬಿಸಿಲಾದರೆ ನೆರಳಾಗಿರು

 ಓದುವಾಗ ಜ್ಝಾನವಾಗಿರು

 ಹೇಳುವಾಗ ಗುರುವಾಗಿರು

 ನೋಡುವಾಗ ನೇತ್ರವಾಗಿರು

 ಕೇಳುವಾಗ ಕಿವಿಯಾಗಿರು

 ಪ್ರೀತಿಗೆ ಗೆಳೆಯನಾಗಿರು

 ದುಃಖಕ್ಕೆ ಶಮನವಾಗಿರು"

ಎಂದು ಹೇಳುವ ಕವಿಯ ಸಾಲುಗಳು ಮಾನವಿಯತೆಯ ಆತ್ಮಕರಣದಿಂದ ಕೂಡಿವೆ. ಹೀಗೆ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುತ್ತಾ ಕವಿಯು ತುಂಬಾ ಎತ್ತರದ ಸ್ಥಾನಕ್ಕೆ ಹೋಗುವನು.

ಇನ್ನು 'ಅಂಕುರ' ಮತ್ತು 'ನನ್ನ ಕವನ' ಎಂಬ ಕವನಗಳಂತು ತುಂಬ ಅದ್ಭುತವಾಗಿ ಮೂಡಿ ಬಂದಿವೆ. ಅಷ್ಟೇ ಅಲ್ಲದೆ ಈ ಕವನ ಸಂಕಲನದಲ್ಲಿ ಕಥಾನಕ ಕವನಗಳು ಸಹ ತಲೆ ಎತ್ತಿ ನಿಂತಿವೆ. ಜೊತೆಗೆ ಮಕ್ಕಳನ್ನು ರಂಜಿಸುವ ಶಿಶು ಕವನಗಳು ಸಹ ಕವಿಯು ಈ ಸಂಕಲನದೊಳಗೆ ಮೂಡಿಸಿದ್ದಾರೆ.

ಬಾಲಕನಾಗಿದ್ದಾಗಲೇ ರಾಜು ಪವಾರ ಇಷ್ಟೊಂದು ಉತ್ತಮವಾದ ಕೃತಿ ರಚಿಸಿರುವುದು ಮೆಚ್ಚುವಂತದ್ದು . ಈ ಕವನ ಸಂಕಲನದಲ್ಲಿ ಇನ್ನೂ ತುಂಬಾ ವಿಚಾರಗಳು ಇವೆ. ಇದನ್ನೊಮ್ಮೆ ಕೊಂಡು ಓದುವುದರ ಮೂಲಕ ಅದರ ಸ್ವಾದ ಸವಿಯುವುದೇ ಉತ್ತಮ.

ಪುಸ್ತಕದ ಬೆಲೆ -₹50 ರೂಪಾಯಿ ಮಾತ್ರ

ಪ್ರತಿಗಳಿಗಾಗಿ ಸಂಪರ್ಕಿಸಿ : 8550034356

 ✍️ ಅಶ್ವಜೀತ ದಂಡಿನ

      ಮಾಳೆಗಾಂವ, ಬೀದರ