ಅರಿವಿನ ಬೆಳಕು

ಅರಿವಿನ ಬೆಳಕಿನಲ್ಲಿ ..
ಡಾ. ಗವಿಸಿದ್ದಪ್ಪ ಎಚ್. ಪಾಟೀಲ
ನಮ್ಮ ನಡುವಿನ ಹಿರಿಯ ಸಂಶೋÀಧಕರಾದ ಡಾ. ಗವಿಸಿದ್ದಪ್ಪ ಎಚ್. ಪಾಟೀಲರವರು ಹಲವಾರು ಸಾಹಿತ್ಯ ಪ್ರಕಾರಗಳಲ್ಲಿ ತಮ್ಮದೇ ಆದ ಹಿರಿಯ ಸಾಧನೆ ಮಾಡಿದವರು. ವಚನ ಸಾಹಿತ್ಯವೂ ಅವರ ಪ್ರೀತಿಯ ಕ್ಷೇತ್ರವೇ. ಅವರೇ ಹೇಳಿಕೊಂಡAತೆ ಅವರು ವಚನ ಸಾಹಿತ್ಯದೊಂದಿಗಿನ ಅನುಸಂಧಾನ ೧೯೯೮ ರಿಂದಲೇ ಅರಂಭವಾಗಿದೆ. ಈಗಾಗಲೆ ವಚನದ ಸಾಹಿತ್ಯ ದ ಜೊತೆಗಿನ ತಮ್ಮ ಅನುಸಂಧಾನವನ್ನು ಎರಡು ಲೇಖನ ಸಂಕಲನಗಳ ಮೂಲ;ಕ ಅವರು ಅಭಿವ್ಯಕ್ತಿಸಿದ್ದಾರೆ. ‘ವಚನ ಸಿರಿ’, ‘ಶಿವದಾಸ ಚಿಂತನೆ’ ಎಂಬ ಎರಡು ಲೇಖನ ಸಂಕಲನಗಳು ಡಾ ಗವಿಸಿದ್ದಪ್ಪನವರಿಂದ ಪ್ರಕಟಿಸಲ್ಪಟ್ಟಿವೆ. ಒಟ್ಟಾರೆಯಾಗಿ ಅವರು ವಚನ ಸಾಹಿತ್ಯದ ಬಗೆಗೆ ಮಾಡಿದ ಅಧ್ಯಯನ ಮುಂದುವರಿಕೆಯಾಗಿ ಈ ಮೂರನೆಯ ಸಂಕಲನ ‘ಅರಿವಿನ ಬೆಳಕಿನಲಿ’್ಲ ಮೂಡಿ ಬಂದಿದೆ. ಅವರೇ ಹೇಳಿಕೊಂಡಿರುವ ಒಂದು ಮಾತು ನಮಗೆ ಈ ಪುಸ್ತಕದ ಹಿಂದಿನ ಉದ್ದೇಶವನ್ನು ಸ್ಪಷ್ಟ ಮಾಡುತ್ತದೆ. ತಮ್ಮ ನುಡಿಯಲ್ಲಿ ಡಾ ಗವಿಸಿದ್ದಪ್ಪನವರು “ಶರಣರ ,ಕುರಿತು ನಾÀನು ಹೆಚ್ಚು ಮಾತನಾಡಿದಂತೆ ನನ್ನೊಳಗಿನ ಅರಿವಿನ ಬೆಳಕು ವಿಸ್ತರಿಸುತ್ತ ಹೋಯಿತು. ಅದರ ಫಲವೇ ‘ಅರಿವಿನ ಬೆಳಕು’ ಎಂಬ ಕೃತಿ ಹೊರ ಬಂದಿದೆ” ಎಂಬ ಮಾತುಗಳು ಮುಖ್ಯ ಎನಿಸುತ್ತವೆ.
ವಚನಕಾರರೊಂದಿಗಿನ ಅನುಸಂಧಾನ ನಮ್ಮೊಳಗಿನ ಅರಿವನ್ನು ತಾನಾಗಿಯೆ ವಿಸ್ತರಿಸುತ್ತ ಹೋಗುತ್ತದೆ ಅದರೊಂದಿಗೆ ಅರಿವು ನಮ್ಮಲ್ಲಿಯೂ ಮೂಡಿ ನಾವೇ ಬೆಳಕಾÀಗುತ್ತೇವೆ ಎನ್ನುವ ಅರ್ಥ ಅವರ ಮಾತಿನಲ್ಲಿದೆ ಮತ್ತು ಅದು ಸತ್ಯವೂ ಆಗಿದೆ.
‘ಅರಿವಿನ ಬೆಳಕಿನಲ್ಲಿ’ ಇದು ಹದಿನೈದು ಭಿನ್ನವಾದ ವಚನ ಸಾಹಿತ್ಯ ಕುರಿÀತ ಲೇಖನಗಳ ಕೃತಿ . ಇದರಲ್ಲಿ ಮುರು ಬಗೆಯ ಲೆಖನಗಳನ್ನು ಕಾಣುತ್ತೇವೆ.
೧ ನಿರ್ದಿಷ್ಟ ಶರಣರನ್ನು ಕುರಿತ ಚಿಂತನಾಪ್ರಧಾನ ಲೇಖನಗಳು
೧ ಬಸವಣ್ಣ
ಬಸವಣ್ಣ ಕಾಯಕ ಮತ್ತು ದಾಸೋಹ
ಮೂಢನಂಬಿಕೆಯ ವಿರುದ್ದ ದನಿ ಎತ್ತಿದ ಬಸವಣ್ಣ
ಬಸವಣ್ಣ ಮತ್ತು ಜಾತಿ ಸಂವೇದನೆ
೨ ಜೇಡರ ದಾಸಿಮಯ್ಯ
ದಾಸಿಮಯ್ಯನ ವಚನಗಳಲ್ಲಿ ಜಾತಿ ಕಲ್ಪನೆ
ಭಕ್ತಿ ಮತ್ತು ಭಕ್ತ :ಜೇಡರ ದಾಸಿಮಯ್ಯನ ವಿಚಾರಗಳು
೩ ಚೆನ್ನಬಸವಣ್ಣ
ಚೆನ್ನಬಸವಣ್ಣನ ಜಾತಿ ಕಲ್ಪನೆ
೪ ಮೋಳಿಗೆಯ ಮಾರಯ್ಯ
ಮೋಳಿಗೆಯ ಮಾರಯ್ಯನ ವಚನಗಳಲ್ಲಿ ಗುರು
೫ ಅಂಬಿಗರ ಚೌಡಯ್ಯ
ಅಂಬಿಗರ ಚೌಡಯ್ಯನ ವಚನಗಳಲ್ಲಿ ಆಡುನುಡಿ
ಅಂಬಿಗರ ಚೌಡಯ್ಯನ ವಚನಗಳಲ್ಲಿ ಸಾಮಾಜಿಕ ಚಿಂತನೆ
ವೈಚಾರಿಕ ಚಿಂತಕ ಅಂಬಿಗರ ಚೌಡಯ್ಯ
೬ ಅಲಕ್ಷಿತ ವಚನಕಾರ ವೀರಗೊಲ್ಲಾಳ
೭ ಶÀರಣ ಏಕಾಂತ ರಾಮಯ್ಯ
೮ ಉರಿಲಿಂಗಪೆದ್ದಿ –ಕಾಳವ್ವೆ
೨ ಶರಣರ ವಚನ ಸಾಹಿತ್ಯ ಕುರಿತ ತಾತ್ವಿಕ ಆಲೋಚನೆಗಳು
ಶರಣರ ಚಿಂತನೆಗಳಲ್ಲಿ ಮೂಢನಂಬಿಕೆ
ವಚನ ಸಾಹಿತ್ಯದಲ್ಲಿ ಮಹಿಳಾ ಸಂವೇದನೆ
೩ ತೌಲನಿಕ ಚಿಂತನೆ
ಬುದ್ದ ಮತ್ತು ಬಸವ ಚಿಂತಕರು
ಹೀಗೆ ಅಧ್ಯಯನದ ಅನುಕೂಲಕ್ಕಾಗಿ ಇಲ್ಲಿನ ಲೇಖನಗಳನ್ನು ಮೂರು ಭಾಗವಾಗಿ ವಿಂಗಡಿಸಿಕೊಳ್ಳಬಹುದು.
ಮೊದಲ ಭಾಗದ ಲೇಖÀನಗಳಲ್ಲಿ ಬಸವಣ್ಣನವರ ಕುರಿತಂತೆ ಮೂರು ಲೇಖನಗಳು ವೈಚಾರಿಕ ವಚನಕಾರ ಅಂಬಿಗರ ಚೌಡಯ್ಯನ ಬಗೆಗಿನ ಮೂರು ಲೇಖನಗಳು ಉಳಿದಂತೆ ಮೋಳಿಗೆಯ ಮಾರಯ್ಯ, ಚೆನ್ನಬಸವಣ್ಣ, ಜೇಡರ ದಾಸಿಮಯ್ಯ ಇವರ ವಚನಗಳಲ್ಲಿ ವಿಶಿಷ್ಟಾಂಶಗಳನ್ನು ಚರ್ಚಿಸುವ ಲೇಖನಗಳಿವೆ . ಹಾÀಗೆಯೆ ಅಲಕ್ಷಿತ ವಚನಕಾರ ವೀರಗೊಲ್ಲಾಳನ ಕುರಿತು , ಶರಣ ಏಕಾಂತದ ರಾಮಯ್ಯನ ಕುರಿತು ಎರಡು ಪರಿಚಯಾತ್ಮಕ ಲೇಖನಗಳು ಅಲ್ಲಿವೆ. ಶರಣೆಯರಲ್ಲಿ ಶರಣ ದಂಪತಿಗಳಾದ ಉರಿಲಿಂಗದೇವ ಮತ್ತು ಕಾಳವ್ವೆ ದಂಪತಿಗಳ ಕುರಿತು ಒಂದು ಲೇಖನವಿದೆ. ಎರಡನೆಯ ಪ್ರಕಾರದ ವಚನ ಸಾಹಿತ್ಯದ ತಾತ್ವಿಕತೆಯನ್ನು ಚರ್ಚಿಸುವ ಲೇಖನಗಳಲ್ಲಿ ಒಂದು ಲೇಖನ ಶರಣರು ವಿರೋಧಿಸಿದ ಮೂಢನಂಬಿಕೆಗಳ ಕುರಿತಾಗಿದ್ದರೆ, ಇನ್ನೊಂದು ಲೇಖನ ವಚನಕಾರರಲ್ಲಿ ಮಹಿಳಾ ಸಂವೇದನೆ ಎಂಬ ಅಂಶವನ್ನು ಒಳಗೊಂಡಿದೆ. ಕೊನೆಯ ಮತ್ತು ಮೂರನೆಯ ಪ್ರಕಾರದ ಲೇಖನಗಳಲ್ಲಿ ಬುದ್ಧ ಮತ್ತು ಬಸವಣ್ಣನವರ ಚಿಂತನೆಗಳ ಹೋಲಿಕೆಯನ್ನು ಮಾಡಿದ್ದಾರೆ. ಇದಿಷ್ಟು ಸ್ಥೂಲವಾಗಿ ಈ ಕೃತಿಯ ಪರಿಚಯ. ಹೀಗಾಗಿ ಇದು ಹಲವು ನೆಲೆಗಳಲ್ಲಿ ವಚನ ಸಾಹಿತ್ಯವನ್ನು ನೋಡಬಹುದು ಎಂಬುದಕ್ಕೆ ಸಾಕ್ಷಿಯಾದ ಕೃತಿ ಎಂಬ ಮಾತನ್ನು ಅವರೇ ಹೇಳಿದ್ದುದನ್ನು ಒಪ್ಪಬಹುದು.
ಈ ಸಂಕಲನದ ಮುಖ್ಯ ಭಾಗÀ ಬಸವಣ್ಣವರ ವಿಚಾರಗಳು ಮತ್ತು ಅಂಬಿಗರ ಚೌಡಯ್ಯನ ವಿಚಾರಧಾರೆಗಳು. ಇಬ್ಬರೂ ವಚನಕಾರರ ಕಾಲವನ್ನು ತಮ್ಮ ಆದರ್ಶ ಬದುಕಿನ ಮೂಲಕ ಪ್ರಭಾವಿಸಿದವರು. ಬಸವಣ್ಣನವರಂತೂ ಶರಣರ ಗುಂಪಿಗೆ ನಾಯಕರೇ ಸೈ . ಅವರ ಮಾರ್ಗದರ್ಶನದಲ್ಲಿ ಶರಣರ ಕ್ರಾಂತಿ ನಡೆಯಿತು. ಬಸವಣ್ಣನವರಿಲ್ಲದೇ ವಚನಕಾರರನ್ನು ಗುರುತಿಸಲಾಗದು. ಬಸವಣ್ಣನವರ ವಚನಗಳಲ್ಲಿ ಕಾಯಕ ಮತ್ತು ದಾಸೋಹ, ಜಾತಿ ಸಂವೇದನೆ ಮತ್ತು ಮೂಡನಂಬಿಕೆಗಳ ವಿರೋಧ ಹೀಗೆ ಅವರ ವಚನಗಳಲ್ಲಿ ಪ್ರಸ್ತಾಪವಾದ ಮುಖ್ಯ ಅಂಶಗಳನ್ನು ಕುರಿತು ಇಲ್ಲಿ ಲೇಖಕರು ಸಾಧಾರವಾದ ಚರ್ಚೆಯನ್ನು ಮಾಡಿದ್ದಾರೆ.
ಕಾಯಕ ಶರಣರು ಸಾರಿದ ಮುಖ್ಯವಾÀದ ತತ್ವ. ಕಾಯಕವಿಲ್ಲದೇ ಗುರುವಾಗಲಿ ಜಂಗಮವಾಗಲಿ, ಲಿಂಗವಾಗಲಿ ಉಳಿಯಲಾಗದು ಎಂಬುದು ಅವರ ಸಿದ್ಧಾಂತವಾಗಿತ್ತು ತಾವು ಮಾಡುವ ಕಾಯಕವನ್ನೇ ನಿಜವಾದ ಪೂಜೆಯಂದು ಶರಣರು ತಿಳಿದಿದ್ದರು. ಇದಕ್ಕೆ ಬಸವಣ್ಣನವರೂ ಹೊರತಲ್ಲ .ಈ ತತ್ವವನ್ನು ಕುರಿತಂತೆ “ಕಾಯಕ ಎಂಬ ಪದಕ್ಕೆ ಬಸವಣ್ಣನ ಚಳುವಳಿಯಲ್ಲಿ ವಿಶಿಷ್ಟ ಅರ್ಥವಿದೆ. ದುಡಿಯುವ ಹಕ್ಕನ್ನು ಅನಿವಾರ್ಯವಾಗಿಸಿದ ಬಸವಣ್ಣ ಹನ್ನೆರಡನೆಯ ಶತಮಾನದಲ್ಲಿಯೆ ‘ಕಾಯಕ’ ಪರಿಕಲ್ಪನೆಯನ್ನು ಹೊಸದಾಗಿ ತಂದರು. ಹೀಗಾಗಿ ಶರಣರ ಪ್ರಮುಖ ಜೀವನ ಮೌಲ್ಯವೇ ಆಗಿತ್ತು” ಎಂಬ ಪೀಠಿಕೆಯೊಂದಿಗೆ ಈ ಲೇಖನವನ್ನು ಆರಂಭಿಸುತ್ತಾರೆ. ಅವರು ನೀಡುವ ಈ ಪ್ರಸ್ತಾವನೆಯ ಸಾಲುಗಳು ಲೇಖನಕ್ಕೆ ಒಂದು ಸುಂದರ ಆರಂಭವನ್ನು ಒದಗಿಸಿವೆ. ‘ಬಸವಣ್ಣ ಎಂದರೆ ಬೇರೆಯಲ್ಲ, ವಚನ ಚಳುವಳಿ ಎಂದರೆ ಬೇರೆಯಲ್ಲ’ ಎನ್ನುವ ಡಾ.ಗವಿಸಿದ್ದಪ್ಪ ಪಾಟಿಲರು ಶರಣರು ನೀಡಿದ ಎರಡು ಪ್ರಮುಖ ತತ್ವಗಳೆಂದು ಕಾಯಕ ಮತ್ತು ದಾಸೋಹ ಗಳನ್ನು ಹೆಸರಿಸಿದ್ದಾರೆ. ಅವರೆಡು ತತ್ವಗ¼ Àವಿಶೇಷವನ್ನು ಗುರುತಿಸುತ್ತಾ “ಕಾಯಕ ಶರಣರು ಪ್ರಪಂಚಕ್ಕಿತ್ತ ಸಾರ್ವಕಾಲಿಕ ಮೌಲ್ಯಗಳನ್ನೊಳಗೊಂಡ ತತ್ವ. ಈ ತತ್ವÀದಲ್ಲಿ ಮೇಲು ಕೀಳೆಂಬುದಿಲ್ಲ .ಬಡವ ಬಲ್ಲಿದನೆಂಬ ಭೇದ ಭಾವವಿಲ್ಲ . ಜಾತಿ ಭೇದವಿಲ್ಲ . ಮತ್ತು ಲಿಂಗ ಭೇದವಿಲ್ಲ . ಮನಸ್ಸಿಲ್ಲದ ಮನಸ್ಸಿನಿಂದ ಮಾಡುವ ಕೆಲಸವೇ ಅಲ್ಲ ಎಂಬುವುದು ಶರಣರ ನಿಲುವಾಗಿತ್ತು. ಬಸವಣ್ಣನವರ ಪ್ರಕಾರ ಕಾಯಕದಲ್ಲಿ ನಿಜವಾದ ಪ್ರಾಮಾಣಿಕತೆ ಇರಬೇಕು. ಸತ್ಯಶುದ್ಧವಾಗಿರಬೇಕು ,..ಒಟ್ಟಾರೆ ಶ್ರಮ ಶುದ್ಧತೆ ,ಪ್ರಾಮಾಣಿಕತೆ , ವಿಶಾಲತೆ ಬಸವಣ್ಣನ ಕಾಯಕದ ಪ್ರಮುಖ ಲಕ್ಷಣಗಳಾಗಿದ್ದವು” ಎನ್ನುತ್ತಾರೆ. ಬಸವಣ್ಣವರ ಪ್ರಕಾರ ಕಾಯಕ ಸತ್ಯಶುದ್ಧವಾಗಿರಬೇಕು . ಅದರಲ್ಲಿ ಮೇಲು ಕೀಳೆಂಬುದಿಲ್ಲ . ತನ್ನ ಒಡಲಿಗಾಗಿ ಮಾತ್ರ ಅಲ್ಲ -ಹೀಗೆ ಮಹತ್ವದ ಅಂಶಗಳನ್ನು ಕಾಯಕ ತತ್ವದಲ್ಲಿ ಗುರುತಿಸಿ ಅದಕ್ಕೆ ಆಧಾರವಾಗುವ ವಚನಗಳನ್ನು ಉಲ್ಲೇಖಿಸು ತ್ತಾರೆ.
ದಾಸೋಹ ಕೂಡ ಶರಣರು ಸಾರಿದ ಇನ್ನೊಂದು ಮಹತ್ವದ ತತ್ವ. ಬಸವಣ್ಣನವರ ವಚನಗಳಲ್ಲಿ ಮೂಡಿ ಬಂದ ದಾಸೋಹ ತತ್ವವನ್ನು ಲೇಖಕರು ಚರ್ಚಿಸುತ್ತಾರೆ. “ಶರಣರು ದಾನ ಸಂಸ್ಕೃತಿಯನ್ನು ವಿರೋಧಿಸುತ್ತಲೆ ದಾಸೋಹ ಸಂಸ್ಕೃತಿಯನ್ನು ಬೆಳೆಸಿದವರು .ಶರಣರು ಕಾಯಕ ತತ್ವದಿಂದಲೇ ದಾಸೋಹ ಸಂಸ್ಕೃತಿಯನ್ನು ಬೆಳೆಸಿದವರು. . ಮಾರ್ಕ್ಷ ಹೇಳುವ ಆರ್ಥಿಕ ಸಮಾನತೆಯ ತತ್ವ ಇಂದು ಜಗತ್ತಿನಾದ್ಯಂತ ಜನಪ್ರಿಯತೆ ಯನ್ನು ಪಡೆದಿದೆ. ಬಸವಣ್ಣ ಹೇಳಿದ ದಾಸೋಹ ತತ್ವದಲ್ಲಿಯೂ ಮಾರ್ಕ್ಸನ ಹಾಗೂ ಬುದ್ಧನ ಅನೇಕ ವಿಚಾರಗಳು ಅಡಗಿವೆ” (ಪು-೨೭) ಎನ್ನುವ ಸಾಲುಗಳಲ್ಲಿ ದಾಸೋಹ ತತ್ವದ ಚಿಂತನೆಯೂ ಅಡಗಿರುವುದನ್ನು ಅವರ ಲೇಖನ ಗುರುತಿಸಿದೆ. ಅದಕ್ಕೆ ಪೂರಕವಾದ ವಚನಗಳನ್ನು ಉಲ್ಲೇಖಿಸಿ ದಾಸೋಹದ ಮಹತ್ವ ಮತ್ತು ಅಗತ್ಯವನ್ನು ಸಾರಿದ್ದಾರೆ.
‘ಬಸವಣ್ಣ ಮತ್ತು ಜಾತಿ ಸಂವೇದನೆ’ ಎಂಬ ಲೇಖನ “ಮಾನವತಾವಾದಿಯಾಗಿ ಸಮಾಜಸುಧಾರಕರಾಗಿ ಅನೆಕ ಜನಪರ ಪ್ರಗತಿಪರ ಧೋರಣೆಗಳನ್ನು ಇಟ್ಟುಕೊಂಡು ಬದುಕಿದ ಕ್ರಾಂತಿಕಾರಕ ಬಸವಣ್ಣ ಸಮಾಜದಲ್ಲಿ ಸಮಾನತೆ ಸೋದರತ್ವ ಸಾರಿದ ಧೀಮಂತ ವ್ಯಕ್ತಿ” (ಪು - ೬೯) ಎಂದು ಸಾರುತ್ತದೆ. ಅವರು “ಸಮಾಜದಲ್ಲಿ ಸಮಾನತೆಯ ಹಣತೆ ಹಚ್ಚಲು ಅತ್ಯಂತ ನ್ಯಾಯಬದ್ದವಾಗಿ ಸಾರಿದುದನ್ನು” ಲೆಖನ ಚಿತ್ರಿಸುವ ಪ್ರಯತ್ನ ಮಾಡಿದೆ. ಸಮಾನತೆಯನ್ನುವದು ಅವರಿಗೆ ಹೊರಗಿನಿಂದ ಹೇಳುವ ಮಾತಾಗಿರದೇ ಬದುಕಿನ ರೀತಿಯೆ ಆಗಿತ್ತು ಎನ್ನುವದಕ್ಕೆ ಬಾಲ್ಯದಲ್ಲಿ ಅವರು ಉಪನಯನ ತಿರಸ್ಕರಿಸಿದುದು ಉದಾಹರಣೆಯಾಗಿ ನಿಲ್ಲುತ್ತದೆ ಎಂಬುದನ್ನು ಗುರುತಿಸುತ್ತಾರೆ. ಬಸವಣ್ಣನವರು “ಹುಟ್ಟಿನಿಂದ ಜಾತಿಯನ್ನು ಎಣಿಸಬಾರದು ನಾವು ಮಾಡುವ ವೃತ್ತಿಗನುಗುಣವಾಗಿ ಜಾತಿಗಳು ಬಂದಿವೆ “ ಎನ್ನುವ ವಿಚಾರವನ್ನು ಎತ್ತಿ ಹೇಳಿದ್ದು ಮಹತ್ವದ ಅಂಶವಾಗಿದೆ. ‘ವ್ಯಾಸ ಬೋಯಿತಿಯ ಮಗ..’ ಮುಂತಾದ ವಚನಗಳ ಉಲ್ಲೇಖದ ಮೂಲಕ ಬಸವಣ್ಣ ಸಾÀರಿದ ಸಮತೆಯನ್ನು ಲೇಖನ ಚಿತ್ರಿಸುವಲ್ಲಿ ಸಫಲವಾಗಿದೆ.
ಬಸವಣ್ಣನವರ ವಿಚಾರಗಳನ್ನು ಕುರಿತ ಇನ್ನೊಂದು ಲೇಖನ ‘ಮೂಡನಂಬಿಕೆ ವಿರುದ್ದ ದನಿಯೆತ್ತಿದ ಬಸವಣ್ಣ’ ಎಂಬುದು .’ನಂಬಿಕೆಗಳು ಇರಲಿ ಮೂಢನಂಬಿಕೆಗಳು ಬೇಡ’ ಎಂಬುದನ್ನು ಸಾರಿದವರು ಶರಣರು ಎನ್ನುವ ಲೇಖಕರು ಬಸವಣ್ಣನವರು ಹೇಗೆ ಮೂಢನಂಬಿಕೆಗಳನ್ನು ವಿರೋಧಿಸುತ್ತಲೆ ವೈಚಾರಿಕತೆಯ ಪರವಾಗಿ ನಿಂತರು ಎನ್ನುವದನಮ್ನೂ ಸಾರುತ್ತಾರೆ. ಹಲವಾರು ಸಲ ನಮ್ಮ ಅಜ್ಞಾನವೇ ಮೂಢನಂಬಿಕೆಗೆ ಕಾರಣವಾಗಿ ನಾವು ನಂಬುವ ದೇವರುಗಳು ಪೂಜಾವಿಧಾನ ಇವುಕೂಡ ತಪ್ಪು ದಾರಿ ಹಿಡಿಯುತ್ತವೆ ‘ಅರಗು ತಿಂದಡೆ ಕರಗುವ ದೈವವ ‘ ಮೊದಲಾದ ವಚನಗಳ ಉಲ್ಲೇಖದಿಂದ ಸಮಾಜದಲ್ಲಿ ನಡೆಯುವ ಇಂಥ ಮೂಢನಂಬಿಕೆಗಳನ್ನು ಬಸವಣ್ಣನವರು ತಿರಸ್ಕರಿಸಿದುದನ್ನು ಲೇಖನ ಗುರುತಿಸಿದೆ. ’ಹಾವಾಡಿಗನು ಮೂಕೊರತಿಯು ..’ ಎಂಬ ಬಸವಣ್ಣನವರ ವಚನ ಕೂಡ ಇಂಥದೆ ಸಂದರ್ಭ ಬಿಬಂಬಿಸುವದನ್ನು ವಚನದ ಉಲ್ಲೇಖದೊಂದಿಗೆ ವಿಶ್ಲೇಷಿಸಿದ್ದಾರೆ. ‘ಶುಭ ಲಗ್ನ ಶುಭವಾರ ಶುಭರಾಸಿ ಎಂಬುವಿಲ್ಲ’ ಎಂದು ಕಾರ್ಯ ಸಾಧ್ಯವಾಗುತ್ತದೆಯೋ ಅಂದೇ ಶುಭ ದಿನ ಎನ್ನುವ ವೈಜ್ಞಾನಿಕ ಸತ್ಯವನ್ನು ಸಾರುತ್ತಾರೆ. ಮೂಢನಂಬಿಕೆಗೆ ದಾರಿಕಾಡಿಕೊಡುವ ಅನೆಕ ಆಚರಣೆಗಳನ್ನು ಅಲ್ಲಗಳೆಯುವ ಶರಣರು ದೇವ ಪೂಜೆಗೆ ಯಾವುದೇ ಕುಲ , ನೆಲ ಎಂಬ ಅಂತರಗಳಿಲ್ಲ ಎಂಬುದನ್ನು ಸಾರಲು ಹೇಳಿದ್ದ ನೆಲನೊಂದೆ ಹೊಗೇರಿ ಶಿವಾಲಯಕ್ಕೆ ‘ ಮೊದಲಾದ ವಚನಗಳ ಉಲ್ಲೇಖ ಮಾಡಿದ್ದು ಅವರ ಲೇಖನಕ್ಕೊಂದು ಗಟ್ಟಿಯಾದ ನೆಲೆ ಒದಗಿಸಿದೆ. ಹೀಗೆ ಇಡೀ ಲೇಖನ ಬಸವಣ್ಣನವರ ಪ್ರಗತಿ ಪರ ವಿಚಾರಗಳನ್ನು ಪ್ರಸ್ತಾಪಿಸುತ್ತಾ ಹೋಗುತ್ತದೆ.
ಹನ್ನೆರಡನೆಯ ಶತಮಾನದ ವಚನಕಾರರಲ್ಲಿ ಪ್ರಖರ ಚಿಂತಕನೆAದು ಹೆಸರಾದವರು ಅಂಬಿಗರ ಚೌಡಯ್ಯನವರು. ಅವರು ವಚನಗಳ ವಿವೇಚನೆಗೆ ಮೂರು ಲೇಖನಗಳಿ ಈ ಸಂಕಲನದಲ್ಲಿರುವದು ವಿಶೇಷವಾಗಿದೆ. ಚೌಡಯ್ಯ ವಿಚಾರಗಳಲ್ಲಿಯೂ ಅವನ್ನು ವ್ಯಕ್ತ ಮಾಡುವ ಭಾಷೆಯಲ್ಲಿಯೂ ವಿಶಿಷ್ಟತೆ ಮೆರೆದಿದ್ದಾನೆ. ‘ಅಂಬಿಗರ ಚೌಡಯ್ಯನವರ ವಚನಗಳಲ್ಲಿ ಆಡುನುಡಿ’ ಎನ್ನುವ ಲೇಖನದಲ್ಲಿ “ಚೌಡಯ್ಯ ಜನಸಾಮಾನ್ಯರ ನಡುವೆಯೆ ಬದುಕಿದ್ದುದರಿಂದ ಅವನ ವಚನಗಳು ಆಡುಭಾಷೆಗೆ ಹತ್ತಿರವಾಗಿವೆ” (ಪು-೫೦) ಎನ್ನುತ್ತ ಜನರು ಬಳಸುವ ಉಪಮೆ ಮತ್ತು ಆಡುನುಡಿಗಳು ಅವನ ವಚನಗಳಲ್ಲಿ ಅತ್ಯಂತ ಹೆಚ್ಚು ಬಳಕೆಯಾದುದನ್ನು ಗುರುತಿಸುತ್ತಾರೆ. “ಅವನ ವಚನಗಳಲ್ಲಿ ಆಡುಭಾಷೆ, ಒಳ್ಳೆಯ ಉಪಮೆಗಳು ನುಡಿಗಟ್ಟು ಗಳು ಕಾಣಬಹುದು. ನೇರವಾಗಿ ಕಂಡದ್ದನ್ನು ಕಂಡAತೆ ನುಡಿಯುವ ಚೌಡಯ್ಯು ಒಬ್ಬ ಬಂಡಾಯ ವಚನಕಾರ .ಈತನ ವಚನಗಳಲ್ಲಿ ಸಾಮಾಜಿಕ ವಿಡಂಬನೆ ಇದೆ, ಆತ್ಮವಿಮರ್ಶೆ ಇದೆ. ಸಾಮಾಜಿಕ ಕಳಕಳಿ ಇದೆ” ಎನ್ನುವ ಸಾಲುಗಳು ಅಂಬಿಗರ ಚೌಡಯ್ಯನಮ ವಚನಗಳ ಒಟ್ಟು ಮೌಲ್ಯಮಾಪನವನ್ನು ಸರಿಯಾಗಿಯೇ ಮಾಡಿವೆ. ಮುಂದೆ ಆತ ಬಳಸುವ ಅನೇಕ ಆಡುನುಡಿಗಳನ್ನು ಇಡಿಯಾದ ವಚನ ಉದ್ಧರಿಸುವ ಮೂಲಕ ಹೇಗೆ ಬಳಕೆಯಾಗಿವೆ ಎಂಬುದನ್ನು ಸಾರುತ್ತಾರೆ,
ಅಂಬಿಗರ ಚೌಡಯ್ಯನ ವಚನಗಳಲ್ಲಿ ಸಾಮಾಜಿಕ ಚಿಂತನೆ ಕಡ್ಡಾಯವೇ.ಸಾಮಾಜಿಕ ಚಿಂತನೆಗೆ ಅವನದು ಪ್ರಥಮ ಅದ್ಯತೆ. ಇದೇ ವಿಷಯ ಡಾ.ಗವಿಸಿದ್ದಪ್ಪನವರಲ್ಲಿ ‘ಅಂಬಿಗರ ಚೌಡಯ್ಯನವರ ವಚನಗಳಲ್ಲಿ ಸಾಮಾಜಿಕ ಚಿಂತನೆ’‘ ಎಂಬ ಹೆಸರಿನಲ್ಲಿ ಲೇಖನದ ರೂಪ ಪಡೆದಿದೆ. ಅವನ ಸಾಮಾಜಿಕ ಚಿಂತನೆ
೧ ಬಹುದೇವೋಪಾಸನೆಯನ್ನು ತಿರಸ್ಕರಿಸಿ ಏಕದೇವತೋಪಾಸನೆಯನ್ನು ವಿವರಿಸಿದ್ದು
೨ ದೇವರು ಕಲ್ಲು ಮೊರಡಿಗಳಲ್ಲಿ ಇಲ್ಲ ಎನ್ನುವದನ್ನು ಸಾರಿದ್ದು
೩ ಸಮಾಜದ ಗೊಡ್ಡು ಸಂಪ್ರದಾಯಗಳನ್ನು ಮೂಢನಂಬಿಕೆಗಳನ್ನು ದಿಕ್ಕರಿಸಿದ್ದು
೪ ಹುಸಿ ಜಾತಿ ವ್ಯವಸ್ಥೆಯನ್ನು ತಿರಸ್ಕರಿಸಿದ್ದು
ಚೌಡಯ್ಯನವರ ಸಾಮಾಜಿಕ ಚಿಂತನೆ ಅನೆಕ ಬಗೆಯಾಗಿ ಹರಡಿದ್ದುದನ್ನು ವಚನಗಳ ಉಲ್ಲೇಖದ ಆಧಾರದ ಮೆಲೆ ಸವಿವರವಾಗಿ ಚರ್ಚಿಸಿದ್ದಾರೆ. “ಚೌಡಯ್ಯನ ವಚನಗಳಲ್ಲಿ ಸಾಮಾಜಿಕ ಚಿಂತನೆ ತೀರ ಒರಟಾದ ಭಾಷೆಯಲ್ಲಿ ಬಂದಿದೆ. ತಪ್ಪು ಮಾಡಿದವರಿಗೆ ಬೆದರಿಕೆಯನ್ನು ಒಡ್ಡುವದು ಮತ್ತು ತಪ್ಪಿತಸ್ಥರನ್ನು ಹಿಡಿದು ತಂದು ಅವರ ಮೂಗು ಕೊಯ್ದು ಮೆನಸಿನ ಹಿಟ್ಟು ತುಂಬಿ ಎಂದು ಹೇಳುವಲ್ಲಿ ಹೊಸತನ ಕಾಣುತ್ತೇವೆ. ಸಾಮಾಜಿಕ ವ್ಯವಸ್ಥೆಗೆ ಸಮಾನತೆಯ ಕನಸು ಕಟ್ಟಿ ನನಸು ಮಾಡಲು ಪ್ರಯತ್ನಿಸಿದ ಅಂಬಿಗರ ಚೌಡಯ್ಯನ ವಚನಗಳು ಸಾರ್ವಕಾಲಿಕ ವಾಗಿ ಪ್ರಸ್ತುತವಾಗಿವೆ” (ಪು- ೬೮) ಎನ್ನುತ್ತಾರೆ.
ಚೌಡಯ್ಯನನ್ನು ಕುರಿತು ರಚಿಸಿದ ಮೂರನೆಯ ಲೇಖನ ‘ಅಂಬಿಗರ ಚೌಡಯ್ಯನ ವಚನಗಳಲ್ಲಿ ವೈಚಾರಿಕತೆ’ ಎಂಬುದು. ಇಡೀ ವಚನಸಾಹಿತ್ಯದಲ್ಲಿಯೆ ಪ್ರಖರ ವಿಚಾರವಾದಿಯಾಗಿ ಕಾಣಿಸಿಕೊಳ್ಳುವ ಚೌಡಯ್ಯ ಲೋಕದಲ್ಲಿ ಕಂಡ ಅನ್ಯಾಯ ಅನಾಚಾರಗಳನ್ನು ಕಟುವಾದ ಮಾತುಗಳಲ್ಲಿ ಖಂಡಿಸುತ್ತಾನೆ. ಭಕ್ತರೆನಿಸಿ ಕೊಂಡವರು ಮಾಡುವ ದುಷ್ಟ ಆಚಾರಗಳು ಅವನಿಗೆ ಒಪ್ಪಿತವಿಲ್ಲ. ಅಂಥದೇನಾದರೂ ಕಣ್ಣಿಗೆ ಕಂಡರೆ ನಿಂದಿಸುವದರಲ್ಲಿ ಅವನು ಸದಾ ಮುಂದೆಯೇ ಇರುವವನು. ಶರಣ ಸದಾ ನ್ಯ ನಿಷ್ಠೂರಿ ದಯಾದಾಕ್ಷಿಣ್ಯ ಪರನಲ್ಲವಯ್ಯ ಎನ್ನು ಬಸವಣ್ಣನವರ ಮಾತು ಅವನಿಗೆ ನೂರಕ್ಕೆ ನೂರು ಅನ್ವಯಿಸುತ್ತದೆ.ಇದನ್ನು ಲೇಖಕರು “ಸ್ಪೋಟಕ ಗುಣ, ತೀವ್ರವಾದ ಪ್ರತಿಭಟನೆ” ಎಂದು ಗುರುತಿಸುತ್ತಾರೆ. ಒಟ್ಟಾರೆ ಅವನದು “ಜನಪರ ನಿಲುವು, ವೈಚಾರಿಕ ಚಿಂತನೆ, ಸಾಮಾಜಿಕ ಕಳಕಳಿ,ಪ್ರಗತಿಪರ ಆಲೋಚನೆಗಳ:ಇಂದ ,ಜನಪರ ಜೀವಪರವಾದ ಸಂಸ್ಕçತಿ ಅವೈದಿಕ ವಿಚಾರಧಾರೆಗಳನ್ನು ಮೈಗೂಡಿಸಿಕೊಂಡು ಬಂದ ಶರಣ ಅಂಬಿಗರ ಚೌಡಯ್ಯನವ ರಾಗಿದ್ದಾರೆ .ಶರಣರ ಬಂಡಾಯದ ಸಾಕ್ಷಿ ಪ್ರಜ್ಞೆಯಾಗಿ ಕಂಡು ಬರುವ ವಚನಕಾರರಲ್ಲಿ ಅಂಬಿಗರ ಚೌಡಯ್ಯ ನವರ ಹೆಸರು ಗಟ್ಟಿಯಾಗಿ ನಿಲ್ಲುತ್ತವೆ.” (ಪು- ೧೧೯) ವೇದಶಾಸ್ತç, ಪುರಾಣಗಳ ಪಾರಮ್ಯವನ್ನು ಖಂಡಿಸಿದ ಅವನು ಅವುಗಳು ಅಪೌರುಷೇಯವಲ್ಲ ಎಂದು ಸಾರುತ್ತಾನೆ. ಓದಿದವರು ಎಂಬ ಕಾರಣಕ್ಕೆ ಸಮಾಜದ ಶೋಷಣೆ ಮಾಡುವ ಒಂದು ವರ್ಗಕ್ಕೆ ‘ನಿಮ್ಮ ಓದು ಕೂಡಾ ಒಂದು ಹೊಟ್ಟೆ ಪಾಡಿನ ಉದ್ಯೋಗ’ ಎಂಬುದನ್ನು ಮನವರಿಕೆ ಮಾಡಿ ಕೊಡುತ್ತಾನೆ. ಮನುಷ್ಯ ಮಾಡಿಕೊಂಡ ದೈವಗಳನ್ನು ತಿರಸ್ಕರಿಸುವ ವಚನಕಾರ ಅವುಗಳ ರಚನೆಯ ಹಿಂದೆ ಕೇವಲ ಜನರ ಶೋಷಣೆಯ ಉದ್ದೇಶವಿರುವದನ್ನು ಗುರುತಿಸಿದ್ದಾನೆ. ಶರಣರು ಭಕ್ತನ ಕೈಗೆ ಇಷ್ಟಲಿಂಗವನ್ನು ಕೊಟ್ಟರು ಅದನ್ನು ಇಟ್ಟುಕೊಂಡು ಭಕ್ತನಾದವನು ಮತ್ತೊಂದು ದೈವಕ್ಕೆ ಎರಗುವದನ್ನು ಅಂಬಿಗರ ಚೌಡಯ್ಯ ಸಹಿಸಲಾg.À ಅಂಥ ಎಡಬಿಡಂಗಿಗಳನ್ನು ಅತ್ಯಂತ ಉಗ್ರವಾದ ಭಾಷೆಯಲ್ಲಿ ನಿಂದಿಸುತ್ತಾನೆ. ಮಠಮಾನ್ಯಗಳ ಸ್ವಾಮಿಗಳೆನಿಸಿಕೊಂಡವರು ನಿಜವಾದ ಭಕ್ತಿಯನ್ನು ಗಣಿಸದೆ ಶ್ರೀಮಂತರಿಗೆ ಮಾತ್ರ ತಮ್ಮ ಮಠಗಳಲ್ಲಿ ಗೌರವ ಕೊಡುವ ಮಠಾಧೀಶರನ್ನು ಉಗ್ರವಾದ ಮಾತುಗಳಲ್ಲಿ ತರಾಟೆಗೆ ತಗೆದುಕೊಂಡಿರುವದನ್ನು ಲೇಖನ ಅವನ ಹತ್ತಾರು ವಚನಗಳನ್ನು ಉದ್ಧರಿಸುವದರ ಮೂಲಕ ಚರ್ಚಿಸಿದೆ.
ಆದ್ಯ ವಚನಕಾರನೆಂದು ನಂಬಲಾಗುವ ಜೇಡರ ದಾಸಿಮಯ್ಯನವರ ವಚನಗಳಲ್ಲಿ ಜಾತಿ ಕಲ್ಪನೆ ಹೇಗೆ ಅವರನ್ನು ಕಾಡಿತ್ತು ಎನ್ನುವದರ ಚಿಂತನೆ ಇದೆ, ಮುಂದಿನ ವಚನಕಾರರಲ್ಲಿ ಈ ಚರ್ಚೆ ಇನ್ನಷ್ಟು ಆಳವಾದ ಚಿಂತನೆಯಾಗಲು ದಾಸಿಮಯ್ಯನವರ ವಚನಗಳು ತಳಹದಿಯಾದುದನ್ನು ಲೇಖಕರು ಸರಿಯಾಗಿಯೇ ಗುರುತಿಸಿದ್ದಾರೆ. ಭಕ್ತಿ ಹನ್ನೆರಡನೆಯ ಶತಮಾನದ ಶರಣರ ವಚನಗಳ ಆದ್ಯ ಚಿಂತನೆ. ಅದನ್ನು ಪ್ರಾಮಾಣಿಕವಾಗಿ ಅನುಸರಿಸುವವನೇ ಭಕ್ತ .ದಾಸಿಮಯ್ಯನವರ ವಚನಗಳಲ್ಲಿ ಭಕ್ತಿ ಮತ್ತು ಭಕ್ತ ಎಂಬ ತತ್ವಗಳ ಕುರಿತು ಸ್ಪಷ್ಟವಾದ ಆಲೋಚನೆಗಳಿವೆ.
೧ ಭಕ್ತಿಗೆ ನಂಬಿಕೆ ವಿಶ್ವಾಸವೇ ಮೂಲ
೨ ಭಗವಂತ ಭಕ್ತರಿಗೆ ಸುಲಭಸಾಧ್ಯವಾಗುವದಿಲ್ಲ
೩ ಡಂಬಾಚಾರ ಕಾಟಾಚಾರದಿಂದ ಭಕ್ತಿ ಮಾಡಲಾಗುವುದಿಲ್ಲ
೪ ಅನುಭಾವದಿಂದ ಕೂಡಿದ ಭಕ್ತಿ ಉನ್ನತವಾದದ್ದು ಮತ್ತು ಶ್ರೇಷ್ಠವಾದದ್ದು
ಎನ್ನುವದನ್ನು ಈ ಲೇಖನದಲ್ಲಿ ಅವರು ಬಿಂಬಿಸುವ ಯತ್ನ ಮಾಡಿದ್ದಾರೆ.
‘ಚನ್ನಬಸವಣ್ಣನವರ ಜಾತಿಕಲ್ಪನೆ’ ಎಂಬ ಲೇಖನ ಜಾತಿ ಕುರಿತು ಚೆನ್ನಬಸವಣ್ಣನವರ ವಿಚಾರಗಳು ಪ್ರಗತಿಪರವಾಗಿದ್ದು ಮನುಷ್ಯ ತಾನು ಮಾಡುವ ಕಾರ್ಯದಿಂದ ಗೌರವಿಸಲ್ಪಡುತ್ತಾನೆ ಎಂದು ಹೇಳಿವೆ. “ಚೆನ್ನಬಸವಣ್ಣ ಧರ್ಮವನ್ನು ಒಪ್ಪಿ ಅಪ್ಪಿಕೊಂಡರೂ ಸಹ ಸಂಪ್ರದಯವಾದಿಯಲ್ಲ ವೈಚಾರಿಕವಾಗಿ ಕಂಡವರು .ಜಿಡ್ಡುಗಟ್ಟಿ ಹೋದ ಅನೇಕ ಸಂಗತಿಗಳು ವಚನದಲ್ಲಿ ಅದಕ್ಕೆ ಹೊಸ ಸ್ಪರ್ಶ ನೀಡಿದ್ದಾನೆ”(ಪು ೧೪೪) ಎನ್ನುತ್ತಾರೆ.
ಮೋಳಿಗೆಯ ಮಾರಯ್ಯನವರ ವಚನಗಳಲ್ಲಿ ಗುರು’ ಎನ್ನುವದು ಕೂಡ ವಚನಕಾರರ ಒಂದು ಆದ್ಯತತ್ವವನ್ನು ಕುರಿತ ಆಲೋಚನೆಯೇ. ಮೋಳಿಗೆಯ ಮಾರಯ್ಯನವರು ಮೂಲತ: ಕಾಶ್ಮಿರದ ಅರಸ ಮಹಾದೇವ ಭೂಪಾಲ. ಅªರು ಬಸವಣ್ಣನವರ ಭಕ್ತಿಯ ಮಹತ್ವವನ್ನು ಅರಿತು ಕಲ್ಯಾಣಕ್ಕೆ ಬರುತ್ತಾರೆ ತಾನು ಸ್ವತ: ಭಕ್ತರಾದ ಬಸವಣ್ಣನವರು ಭಕ್ತರಿಗಿಂತ ದೊಡ್ಡವರಿಲ್ಲ ಎಂದು ನಂಬಿದ್ದರು. ಮಾರಯ್ಯನವರು ಬಸವಣ್ಣಣವರಲ್ಲಿಯೇ ಗುರುವನ್ನು ಕಂಡರು.ಪೂರಕವಾಗಿ ‘ನಿನಗೆ ಗುರುವಾಗಿ ಬಂದನಯ್ಯ ಬಸವಣ್ಣನು ‘ ಎಂಬ ವಚನದ ಸಾಲನ್ನು ಲೇಖಕರು ಉದ್ದರಿಸುತ್ತಾರೆ. ಅರಿವು ಆಚಾರ ವಿಚಾರಗಳಲ್ಲಿ ಸಮನ್ವಯತೆ ಸಾಧಿಸಿದಾತನೆ ಗುರು ಎಂಬುದನ್ನು ಹೇಳುತ್ತಾರೆ.
ಎರಡು ಲೇಖನಗಳು ಅಲಕ್ಷಿತ ವಚನಕಾರರೆಂದು ಪರಿಗಣಿತವಾದ ಏಕಾಂತದ ರಾಮಯ್ಯನವರನ್ನು ಕುರಿತು ಒಂದು ಲೇಖನ (ಶರಣ ಏಕಾಂತದ ರಾಮಯ್ಯ) ಹಾಗೂ ವೀರಗೊಲ್ಲಾಳನ ಕುರಿತ ಲೇಖನಗಳು ಇವೆ. ಏಕಾಂತದ ರಾಮಯ್ಯನವರ ಪೂರ್ವಾಪರಗಳ್ನು ಲೇಖನ ಚರ್ಚಿಸಿದುದೇ ಅಲ್ಲದೇ ಅವರು ಶಾಸನಗಳಲ್ಲಿ ಉಲ್ಲೇಖ ಕೂಡಾ ಗಮನಿಸಲಾಗಿದೆ. ಅಲಕ್ಷಿತ ವಚನಕಾರ ವೀರಗೊಲ್ಲಾಳ ಎನ್ನುವ ಲೇಖನ ಕೂಡ ಗೊಲ್ಲಾಳನ ಜಿವನ ಚರಿತ್ರೆಯನ್ನು ಕುರತು ಮಹತ್ವದ ಅಂಶಗಳನ್ನು ಕ್ರೋಢೀಕರಿಸಿದೆ. “ಅವನು ಕುರುಬ ಜನಾಂಗದವನು , ಸಿಂಧಗಿ ತಾಲೂಕಿನ ಗೋಲಗೇರಿ ಸಮೀಪದ ಢವಳಾರ ಎಂಬ ಹಳ್ಳಿಯವನು, ತಂದೆ ಕಾಟಕೂಟ, ತಾಯಿ ದುಗ್ಗಳೆ.ವೀರಬೀರೇಶ್ವರ ಲಿಂಗ ಅಂಕಿತದಿಂದ ವಚನ ಬರೆದಿರುವದು” ಈ ಎಲ್ಲ ಅಂಶಗಳನ್ನು ಹೇಳುತ್ತಾರೆ.
ಇನ್ನೊಂದು ಬಗೆಯ ಲೇಖನಗಳ ಶರಣರು ಕೆಲವು ವಿಚರಗಳಲ್ಲಿ ಒಟ್ಟಾಗಿ ಮಾಡುವ ಆಲೋಚನೆಗಳನ್ನು ಕುರಿತದ್ದವಾಗಿವೆ. ಅವುಗಳಲ್ಲೊಂದು ‘ಶರಣರ ಚಿಂತನೆಗಳಲ್ಲಿ ಮೂಢನಂಬಿಕೆ’ , ಪ್ರತ್ಯೇಕವಾಗಿ ಬಸವಣ್ಣನವರ ವಚನಗಳಲ್ಲಿ ಮೂಡನಂಬಿಕೆ ಎಂಬ ಲೇಖನದ ಹಾಗೆಯೇ ಇನ್ನಿತg Àಶರಣರ ವಿಚಾರಗಳೇನು ಎಂಬುದನ್ನು ಹೇಳುವುದು ಈ ಲೇಖನದ ಉದ್ದೇಶವಾಗಿದೆ. ಮೌಢ್ಯತೆಯನ್ನು ವಿರೋಧಿಸಿದ ಶರಣರು ಆಧುನಿಕತೆಯನ್ನು ,ವೈಚಾರಿಕತೆಯನ್ನು ಸಾರಿದುದನ್ನು ಈ ಲೇಖನದಲ್ಲಿ ಗುರುತಿಸುತ್ತೇವೆ. ಒಟ್ಟಾಗಿ ಜನರ ಡಾಂಭಿಕ ಭಕ್ತಿ , ಅನಾಚಾರಗಳ ಅನುರಣೆಯನ್ನು ಕುರಿತು ಶರಣರು ತಮ್ಮವಿರೋಧವನ್ನು ವ್ಯಕ್ತಪಡಿಸುತ್ತಾರೆ.
ಈ ಬಗೆಯ ಲೇಖನಗಳಲ್ಲಿ ಎರಡನೆಯದು ಲೇಖನ ‘ವಚನ ಸಾಹಿತ್ಯದಲ್ಲಿ ಮಹಿಳಾ ಸಂವೇದನೆೆ ಎನ್ನುವದು. ಜಾಗತಿಕ ಇತಿಹಾಸದಲ್ಲಿ ಮೊಟ್ಟ ಮೊzಲ ಬಾರಿಗೆ ಮಹಿಳೆಗೆ ಸ್ವಾತಂತ್ರö್ಯವನ್ನು ನೀಡಿದ ಚಳುವಳಿ ವಚನಕಾರರದು. ಪರಂಪರೆಯಿAದ ತುಳಿತಕ್ಕೊಳಗಾದ ಅಕೆಗೆ ಶರಣರು ಸ್ವಾತಂತ್ರö್ಯ ನೀಡಿದರೆಂದೇ ಐವತ್ತರಷ್ಟು ಮಹಿಳೆಯರು ಶರಣರ ಸಾಲಿನಲ್ಲಿಕುಳಿತು ಚರ್ಚಿಸುವಂತಾದದುನ್ನು ಗುರುತಿಸಿದ್ದಾರೆ. ಹೆಣ್ಣಿನ ಅಸ್ಮಿತೆಯನ್ನು ಸಾರುವ ಅನೇಕ ಅಪರೂಪದ ವಚನಗಳನ್ನು ಲೇಖನದುದ್ದಕ್ಕೂ ಉದ್ಧರಿಸಿರುವ ಅವರು ತಮ್ಮಬರಹಕ್ಕೆ ಅದಿಕೃತತೆ ದೊರಕುವಂತೆ ಮಾಡಿದ್ದಾರೆ.
ಸಂಕಲನದಲ್ಲಿ ಎರಡು ಲೇಖನಗಳು ಪ್ರತ್ಯೇಕವಾದ ಚರ್ಚೆ ಬಯಸುತ್ತವೆ. ಅವುಗಳಲ್ಲಿ ಒಂದು ಶರಣ ದಂಪತಿಗಳಾದ ಉರಿಲಿಂಗಪೆದ್ದಿ ಕಾಳವ್ವೆಯರದು .ಲೇಖನದ ಆರಂಭದಲ್ಲಿ ವಚನಸಾಹಿತ್ಯದಲ್ಲಿ ನಾಲ್ಕು ಜನ ಕಾಳವ್ವೆಯರು ದೊರಕುವ ಸಂಗತಿಯನ್ನು ಹೇಳಿರುವದು ಮುಖ್ಯವಾದ ಮಾತಾಗಿದೆ. ಅವರೆಂದರೆ ಸಿದ್ಧಬುದ್ದಯ್ಯಗಳ ಪತ್ನಿ ಕಾಳವ್ವೆ, ಬಾಚಿಕಾಯಕದ ಬಸವಯ್ಯಗಳ ಪತ್ನಿ ಕಾಳವ್ವೆ, ಕರ್ಮಹರ ಕಾಳೇಶ್ವರ ಕದಿಂiÀರಕಾಳವ್ವೆ ಮತ್ತು ಉರಿಲಿಂಗಪೆದ್ದಿಗಳ ಪತ್ನಿ ಕಾಳವ್ವೆ. ಇವರುಗಳಲ್ಲಿ ಉರಿಲಿಂಗ ಪೆದ್ದಿಗಳ ಪತ್ನಿ ಕಾಳವ್ವೆ “ಅತ್ಯಂತ ವೈಚಾರಿಕ ಮನೋಭಾವದವಳು,ಸಂಸ್ಕೃತ ವಿದ್ವಾಂಸಳು” ಆಗಿದ್ದುದನ್ನು ಗುರುತಿಸಿದ್ದಾರೆ. ಗಂಡ ಉರಿಲಿಂಗದೇವನ ಹಾಗೆ ಮಹಾರಾಷ್ಟçದ ಮಹಾರ ಜಾತಿಗೆ ಸೇರಿದ ಆಕೆಯೂ ತನ್ನ ವಚನಗಳಲ್ಲಿ ಸ್ವಾಭಿಮಾನದ ವಿಚಾರಗಳನ್ನು , ಜಾತಿ ವ್ಯವಸ್ಥೆ ವಿರೋಧವನ್ನು ವ್ಯಕ್ತ ಮಾಡಿದುದನ್ನು ಗುರುತಿಸಿದ್ದಾರೆ. “ಕಾಳವ್ವೆಯ ವಚನಗಳು ಕೆಂಡದುAಡೆಯಾಗಿವೆ. ತನ್ನ ಸುತ್ತಮುತ್ತಲಿನ ಡೋಂಗೀ ಭಕ್ತರನ್ನು ವಿಡಂಬನೆ ಮಾಡಿದುದನ್ನು ಕಾಣುತ್ತೇವೆ. ಕಾಳವ್ವೆ ಜಾತಿ ನೀತಿಯ ಬಗ್ಗೆ ತೀವ್ರ ಪ್ರತಿಭಟಣೆ ಮಾಡಿದ್ದಾಳೆ” (ಪು ೯೦) ಎನ್ನುವ ಅವರ ಮಾತುಗಳು ಕಾಳವ್ವೆಯ ವಿಚರಗಳನ್ನು ಎತ್ತಿ ಹೇಳಿವೆ. ವ್ರತನಿಷ್ಠಳೂ ಆಗಿದ್ದ ಕಾಳವ್ವೆ :ಅರಿವು ಆಚಾರ ಆಧ್ಯಾತ್ಮದಲ್ಲಿ ಕೂಡ ಪರಿವರ್ತನೆ ತರಬಯಸಿದ ಶರಣೆ ಕಾಳವ್ವೆ ವೃತನಿಷ್ಠಳಾಗಿದ್ದಳು.ವ್ರತಾಚರಣೆಯನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕೆಂದು ಹೇಳುತ್ತಾಳೆ. “ (ಪು ೯೩)
ಇಡೀ ಸಂಕಲನದಲ್ಲಿ ಪ್ರತ್ಯೇಕವಾಗಿ ಆಲೋಚಿಸಬೆಕಾದ ಲೇಖನ ‘ಬುದ್ದ-ಬಸವ ಚಿಂತಕರು ಎನ್ನುವದು. ಜಗತ್ತಿನ ಮಹಾನ್ ನಾಯಕನಾದ ಬುದ್ದ ದೇವನೊಂದಿಗೆ ಇನ್ನೊಬ್ಬ ಮಹಾನ್ ಚಿಂತಕ ಬಸವಣ್ಣ .ಅವರಿಬ್ಬರ ಸಾಮ್ಯವನ್ನು ಲೇಖಕರು “ಇಂಡಿಯಾದ ಸಂಸ್ಕೃತಿಯಲ್ಲಿ ತುಂಬಿಹೋದ ಮೌಢ್ಯತೆ ಕಿತ್ತು ಹಾÀಕಿ ಮನುಷ್ಯರೆಲ್ಲರೂ ಒಂದೇ ಎಂದು ಸಾರಿದ ವರಲ್ಲಿ ಬುದ್ಧ ಬಸವ ಪ್ರಮುಖರಾಗಿದ್ದಾರೆ” (ಪು ೯೮) ಎನ್ನುತ್ತ ಅವರಿಬ್ಬರ ಚಿಂತನೆ ಮತ್ತು ನಡೆಗಳಲ್ಲಿರುವ ಸಾಮ್ಯವನ್ನು ಸಾಧಾರವಾಗಿಯೆ ಹೋಲಿಸುತ್ತಾರೆ. ಮೂರು ಪುಟದಲ್ಲಿ ಲೇಖನ ಎರಡು ಮಹಾವ್ಯಕ್ತಿತ್ವಗಳನ್ನು ಸಮೀಕರಿಸಿತರುವ ರೀತಿ ಅನನ್ಯವಾಗಿದೆ.
ಪ್ರಧಾನವಾಗಿ ಈ ಸಂಕಲನ ಶರಣರ ವೈಚಾರಿಕ ಚಿಂತನೆಗಳತ್ತಲೆ ಗಮನ ನೆಟ್ಟಿದೆ. ಶರಣರ ಸಾಮಾಜಿಕ ಚಿಂತನೆ, ಅವರು ಮೂಡನಂಬಿಕೆಗಳ ವಿರುದ್ದ ಮಾಡಿದ ಹೋರಾಟ, ಅವರು ಹುಸಿ ಜಾತಿ ವ್ಯವಸ್ಥೆಯನ್ನು ಟೀಕಿಸುವದು ಹೀಗೆ ಬಹುತೇಕ ಲೇಖನUಳು ಶರಣರ ವೈಚಾರಿಕ ಚಿಂತನೆಯನ್ನು ಚರ್ಚಿಸುತ್ತವೆ. ಹೀಗಾಗಿ ಶರಣರನ್ನು ಸಾಮಾಜಿಕ ಮತ್ತು ವೈಚಾರಿಕ ನೆಲೆಗಟ್ಟಿನ ಮೇಲೆ ಅಧ್ಯಯನ ಮಾಡಿದ ಲೇಖನಗಳನ್ನು ಒಳಗೊಂಡದ್ದು ಈ ಸಂಕಲನದ ವೈಶಿಷ್ಟö್ಯವಾಗಿದೆ. ಶರಣರು ಸಾರಿದ ಗುರು, ಭಕ್ತ , ಭಕ್ತಿ .ಕಾಯಕ ದಾಸೋಹ ಇತ್ಯಾದಿ ಅಂಶಗಳನ್ನು ಇಲ್ಲಿನ ಲೇಖನಗಳು ಪ್ರಧಾನವಾಗಿ ಚರ್ಚಿಸಿವೆ. ಮೂಢನಂಬಿಕೆಗಳ ವಿರುದ್ದ ಹೋರಾಡಿದುದನ್ನು ಹೇಳುತ್ತವೆ. ಶರಣರ ಅಂತರAಗದ ಚಿತ್ರಣಕ್ಕಿಂತ ಬಹಿರಂಗದ ಹೋರಾಟದತ್ತ ಇಲ್ಲಿ ಲೇಖನಗಳ ಗಮನವಿದ್ದರೂ ಅಲ್ಲೊಂದು ಇಲ್ಲೊಂದು ಲೇಖನಗಳು( ದಾಸಿಮಯ್ಯನ ವಚನಗಳಲ್ಲಿ ಭಕ್ತಿಮತ್ತು ಭಕ್ತ) ಅಂತರAಗದ ಸಾಧನೆಯತ್ತವೂ ತಮ್ಮ ಚಿಂತನೆ ಹರಿಯಬಿಟ್ಟಿವೆ.
ಇಡೀ ಸಂಕಲನದಲ್ಲಿ ಅಲ್ಲಲ್ಲಿ ವಚನಗಳನ್ನು ಉದ್ಧರಿಸುವಾಗ ಅವುಗಳ ಸರಿಯಾದ ರೂಪ ಉಲ್ಲೇಖವಾಗು ವಂತೆ ನೋಡಿಕೊಳ್ಳಬೇಕಾಗಿತ್ತು ಎನಿಸುತ್ತದೆ. ಹಾಗೆಯೇ ಅಲ್ಲಲ್ಲಿ ಉಳಿದ ಮುದ್ರಣ ದೋಷಗಳು ಸ್ವಲ್ಪ ಅಸಂತೋಷ ಉಂಟು ಮಾಡುತ್ತವೆ. ಮುದ್ರಣದಲ್ಲಿ ಕಂಡು ಬರುವ ಅಕ್ಷರ ದೋಷಗಳನ್ನು ಸೂಕ್ಷö್ಮವಾಗಿ ಗಮನಿಸಿದ್ದರೆ ಪರಿಹರಿಸಬಹುದಾಗಿತ್ತು. ಇವೆಲ್ಲ ಮಹತ್ವದ ಸಂಗತಿಗಳೇನೂ ಅಲ್ಲ .ಒಟ್ಟಾರೆ ಡಾ ಗವಿಸಿದ್ದಪ್ಪನವರು ಅವರೇ ಹೇಳಿಕೊಂಡAತೆ “ವಚನಕಾರರನ್ನು ಕುರಿತು ಒಂದು ನೆಲೆಯಲ್ಲಿ ಹಲವು ಚಿಂತನೆಗಳನ್ನು” ಇಲ್ಲಿ ದಾಖಲಿಸಿದ್ದಾರೆ. ವಚನ ಸಾಹಿತ್ಯದ ವಿಶಿಷ್ಟ ವಿಮರ್ಶಾ ಸಂಕಲನವಾಗಿ ನಮ್ಮ ಅರಿವನ್ನು ವಿಸ್ತರಿಸುತ್ತದೆ.
ಡಾ.ವೈ.ಎಂ. ಯಾಕೊಳ್ಳಿಸವದತ್ತಿ
೯೭೩೧೯೭೦೮೫೭