ಛoದ:ದ ಛoಧಸ್ಸು ಒಂದು ಅವಲೋಕನ

ಛoದ:ದ ಛoಧಸ್ಸು ಒಂದು ಅವಲೋಕನ

ಛoದ:ದ ಛoಧಸ್ಸು ಒಂದು ಅವಲೋಕನ

ಕನ್ನಡ ಸಾಹಿತ್ಯದಲ್ಲಿ ಸಾವಿರದ ಐದುನೂರು ವರ್ಷಗಳಿಂದ ಕಾವ್ಯ ಪರಂಪರೆ ಬೆಳೆದು ಬಂದಿರುವುದು ಕಾಣುತ್ತೇವೆ. ಈ ಕಾವ್ಯ ಪರಂಪರೆಯನ್ನು ಅರಿಯಲು ಛಂದಸ್ಸಿನ ಅಭ್ಯಾಸವು ಅವಶ್ಯವಾಗಿದೆ. ವ್ಯಾಕರಣವು ಗದ್ಯ ಪದ್ಯಗಳೆರಡಕ್ಕೂ ಸಂಬಂಧಿಸಿದರೆ ಛಂದಸ್ಸು ಕೇವಲ ಪದ್ಯಕ್ಕೆ ಮಾತ್ರ ಸಂಬಂಧಿಸಿದೆ. ಹೀಗಾಗಿ ಛಂದಸ್ಸನ್ನು ಪದ್ಯ ರಚನಾಶಾಸ್ತ್ರ ಎಂದು ಕರೆಯುವರು, ಈ ಛಂದಶಾಸ್ತ್ರ ಅಧ್ಯಯನವು ಕನ್ನಡದ ಅಭ್ಯಾಸಿಗಳಿಗೆ, ವಿಜ್ಞಾನವ ಗಣಿತಶಾಸ್ತ್ರದಂತೆ ಇಂದಿನ ಆಧುನಿಕ ಶಿಕ್ಷಣ ಪದ್ಧತಿಯಲ್ಲಿ ವಿದ್ಯಾರ್ಥಿಗಳಿಗೆ ಈ ವಿಷಯ ಗ್ರಹಿಕೆ ಬಹಳವೇ ಕೃಷ್ಟ ಕೇವಲ ಎರಡರಿಂದ ಮೂರು ತಿಂಗಳಲ್ಲಿ ಓದಿ ಮುಗಿಸಬೇಕೆನ್ನುವುದು ಶಿಕ್ಷಣದ ಪದ್ಧತಿಯಾಗಿರುವುದರಿಂದ ಪರಿಪೂರ್ಣವಾದ ಭಂದಸ್ಸಿನ ಓದು ಆಗಧ ಹಿನ್ನೆಲೆಯಲ್ಲಿ "ಛoದದ ಛಂದಸ್ಸು" ಎಂಬ ಛಂದಸ್ಸಿನ ಒಂದು ಸಂಕ್ಷಿಪ್ತ ಅವಲೋಕನದ ಹಿನ್ನೆಲೆಯಲ್ಲಿ ಡಾ. ಪ್ರೇಮಾ ಅಪಚಂದ ಅವರು ಶ್ರಮವಹಿಸಿ ಪುಸ್ತಕ ರಚಿಸಿದ್ದು ಕನ್ನಡದ ಎಲ್ಲ ಮನಸುಗಳಿಗೆ ಉಪಯುಕ್ತ ಕೃತಿಯಾಗಿದೆ.

ಈ ಪುಸ್ತಕವು ಕಲಬುರಗಿಯ ಬಸವ ಪ್ರಕಾಶನದಿಂದ 2020 ರಲ್ಲಿ ಪ್ರಕಟಗೊಂಡಿದ್ದು 114 ಪುಟಗಳನ್ನು ಹೊಂದಿರುವ ಪುಸ್ತಕದ ಬೆಲೆ 120 ರೂಪಾಯಿ ನಿಗದಿಪಡಿಸಲಾಗಿದೆ.

                                  ಡಾ. ಶರಣಬಸಪ್ಪ ವಡ್ಡನಕೇರಿ