ಜಯದೇವ ಹೃದ್ರೋಗ ಸಂಸ್ಥೆಯಿಂದ ಸೇಡಂನಲ್ಲಿ 8 ರಂದು ಉಚಿತ ಹೃದಯ ತಪಾಸಣೆ ಶಿಬಿರ

ಜಯದೇವ ಹೃದ್ರೋಗ ಸಂಸ್ಥೆಯಿಂದ ಸೇಡಂನಲ್ಲಿ 8 ರಂದು ಉಚಿತ ಹೃದಯ ತಪಾಸಣೆ ಶಿಬಿರ

ಜಯದೇವ ಹೃದ್ರೋಗ ಸಂಸ್ಥೆಯಿಂದ ಸೇಡಂನಲ್ಲಿ

8 ರಂದು ಉಚಿತ ಹೃದಯ ತಪಾಸಣೆ ಶಿಬಿರ 

ಸೇಡಂ: ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ, ಪೂಜ್ಯ ಶ್ರೀ ಮಡಿವಾಳಯ್ಯ ಸ್ವಾಮಿ ಸ್ಮಾರಕ ಚಿರಾಯು ಆಸ್ಪತ್ರೆ ಸೇಡಂ, ಡಾ. ಶರಣಪ್ರಕಾಶ ಪಾಟೀಲ್ ಅಭಿಮಾನಿ ಬಳಗ ಸೇಡಂ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ 8 ರಂದು ಕೊತ್ತಲ ಬಸವೇಶ್ವರ ದೇವಾಸ್ಥಾನದ ನಾಗೇಂದ್ರಪ್ಪ ಬಿ ಪಾಟೀಲ್ ಕಲ್ಯಾಣ ಮಂಟಪದಲ್ಲಿ ಬೆಳಗ್ಗೆ 10 ಸಂಜೆ 5 ಗಂಟೆಯ ವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಜಯದೇವ ಹೃದ್ರೋಗ ಆಸ್ಪತ್ರೆಯ ವೈದ್ಯಕೀಯ ಆಡಳಿತಾಧಿಕಾರಿ ಡಾ.ರುದ್ರಪ್ಪ ಗುಗವಾಡ ಡಾ. ರುದ್ರಪ್ಪ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಆಧುನಿಕ ಜೀವನ ಶೈಲಿ ಮತ್ತು ಆಹಾರ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಹೃದಯಕ್ಕೆ ಸಂಬಂಧಿಸಿದಂತೆ ಕಾಯಿಲೆಗಳು ಹಾಗೂ ಹೃಯದದ ಬೇನೆ ಬಂದಾಗ ಯಾವೆಲ್ಲ ಮುನ್ನೆಚೆರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದು ಕುರಿತು ಜನರಲ್ಲಿ‌ ಜಾಗೃತಿ ಮೂಡಿಸುವುದರ ಜೊತೆಗೆ ಹೃದಯದ ತಪಾಸಣೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು. 

ಶುಗರ್, ಇಸಿಜಿ, ಬ್ಲಡ್ ಚೆಕಪ್, 2d ಇಕೋ ಸೇರಿದಂತೆ ಇನ್ನಿತರ ಹೃದಯಕ್ಕೆ‌ ಸಂಬಂಧಿಸಿದಂತೆ ತಪಾಸಣೆಗಳನ್ನು‌ ಮಾಡಲಾಗುವುದು ಎಂದರು.

ಉಚಿತ ಹೃದಯ ತಪಾಸಣೆ ಶಿಬಿರದಲ್ಲಿ ಶಿವಶಂಕರ ಮಠದ ಷ.ಬ್ರ. ಶಿವಶಂಕರ ಶಿವಾಚಾರ್ಯರು, ಹಾಲಪಯ್ಯ ವಿರಕ್ತ ಮಠದ ಪೂಜ್ಯ ಶ್ರೀ ಮ.ನಿ.ಪ್ರ ಪಂಚಾಕ್ಷರ ಮಹಾಸ್ವಾಮಿಗಳು, ಕೊತ್ತಲ ಬಸವೇಶ್ವರ ದೇವಾಸ್ಥಾನದ ಪೀಠಾಧಿಪತಿಗಳಾದ ಪೂಜ್ಯ ಶ್ರೀ ಡಾ. ಸದಾಶಿವ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಶರಣಪ್ರಕಾಶ ಪಾಟೀಲ್ ಉಡಗಿ, ಬೆಂಗಳೂರಿನ ಜಯದೇವ ಆಸ್ಪತ್ರೆಯ‌ ನಿರ್ದೇಶಕ ಡಾ. ಬಿ. ದಿನೇಶ, ಕಲಬುರಗಿ ಜಯದೇವ ಹೃದ್ರೋಗ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ರುದ್ರಪ್ಪ ಗುಗವಾಡ, ಜಯದೇವದ ವೈದ್ಯಕೀಯ ಅಧೀಕ್ಷಕರಾದ ಡಾ. ವಿರೇಶ ಪಾಟೀಲ್ ಅವರು ಸೇರಿದಂತೆ ಇನ್ನಿತರ ತಜ್ಞ ವೈದ್ಯರ ತಂಡ ಬರಲಿದ್ದು, ಸೇಡಂನ ಹೆಚ್ಚಿನ ಜನರು ಈ ಉಚಿತ ತಪಾಸಣೆಯಲ್ಲಿ ಭಾಗವಹಿಸಿ ಸದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಕೃಷಿ ಮಹಾಮಂಡಳಿಯ ರಾಜ್ಯ ಸದಸ್ಯರಾದ ಬಸವರಾಜ ಪಾಟೀಲ್ ಊಡಗಿ, ನಗರ ಯೋಜನಾ ಪ್ರಾಧಿಕಾರದ ‌ಅಧ್ಯಕ್ಷ ವಿಶ್ವನಾಥ ಪಾಟೀಲ್ ಬೊಮ್ಮನಳ್ಳಿ, ಬಸವರಾಜ ರೆವುಗೊಂಡ್, ವಿರೇಂದ್ರ ರುದನೂರು, ಸತೀಶ ಪೂಜಾರಿ, ಭೀಮು ಕೊಳ್ಳಿ,ಮಹೇಶ್ ಪಾಟೀಲ ತರನಳ್ಳಿ  ಇದ್ದರು