ವಿಳಂಬ ನೀತಿ ಅನುಸರಿಸದೇ ಖರೀದಿ ಕೇಂದ್ರ ಪ್ರಾರಂಭಿಸಲು ರಾಜ್ಯ ಸರಕಾರ ಕ್ರಮವಹಿಸಬೇಕು : ಗೌತಮ್ ಪಾಟೀಲ ಆಗ್ರಹ

ವಿಳಂಬ ನೀತಿ ಅನುಸರಿಸದೇ ಖರೀದಿ ಕೇಂದ್ರ ಪ್ರಾರಂಭಿಸಲು ರಾಜ್ಯ ಸರಕಾರ ಕ್ರಮವಹಿಸಬೇಕು : ಗೌತಮ್ ಪಾಟೀಲ  ಆಗ್ರಹ

ತೊಗರಿ ಕಟ್ಟಾವು ಮಾಡುವ ಮೊದಲೆ ಬೆಂಬಲ ಬೆಲೆ ‍ಘೋಷಿಸಿದ ಕೇಂದ್ರ ಸರಕಾರ ಕ್ರಮ ಶ್ಲಾಘನೀಯವಾದದು

ವಿಳಂಬ ನೀತಿ ಅನುಸರಿಸದೇ ಖರೀದಿ ಕೇಂದ್ರ ಪ್ರಾರಂಭಿಸಲು ರಾಜ್ಯ ಸರಕಾರ ಕ್ರಮವಹಿಸಬೇಕು : ಗೌತಮ್ ಪಾಟೀಲ ಆಗ್ರಹ

ಚಿಂಚೋಳಿ :ರೈತರ ಬೆಳೆದ ತೊಗರಿ ಬೆಳೆಗೆ ಬೆಂಬಲ ಬೆಲೆಯಲ್ಲಿ ಖರೀದಿಗೆ ಕೇಂದ್ರ ಸರ್ಕಾರ ಅನುಮತಿಸಿರುವುದು ಅತ್ಯಂತ ಶ್ಲಾಘನೀಯ. ಕಟಾವು ಪ್ರಾರಂಭವಾಗುವ ಮುನ್ನವೇ ಕೇಂದ್ರ ಆದೇಶಿಸಿರುವುದು ಖಷಿ ತಂದಿದೆ ಎಂದು ಕಲಬುರಗಿ-ಯಾದಗಿರಿ ಡಿಸಿಸಿ ಬ್ಯಾಂಕ್ ನ ನಿರ್ದೇಶಕ ಗೌತಮ್ ವೈಜಿನಾಥ ಪಾಟೀಲ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.  

ಪ್ರಕಟಣೆ ನೀಡಿರುವ ಅವರು, ತೊಗರಿ ಬೆಲೆ ಪಾತಾಳಕ್ಕೆ ಕುಸಿದಿರುವ ಸಮಯದಲ್ಲಿ ಪ್ರಸಕ್ತ ವರ್ಷಕ್ಕೆ 9.67 ಲಕ್ಷ ಮೆಟ್ರಿಕ್ ಟನ್ ತೊಗರಿ ಖರೀದಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿರುವುದು ಅಭಿನಂದನಾರ್ಹ.

ಕಲ್ಯಾಣ ಕರ್ನಾಟಕ ಭಾಗದ ರೈತರ ಕಷ್ಟ ಕಂಡು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಪ್ರಯತ್ನದ ಮನವಿಗೆ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಹಾಗೂ ಪ್ರಧಾನಿ ನರೇಂದ್ರ ಮೋದಿಯ ಸ್ಪಂದಿಸಿ ಆದೇಶಿಸಿರುವುದು ರೈತಾಪಿ ವರ್ಗಕ್ಕೆ ಹರ್ಷವನ್ನುಂಟು ಮಾಡಿದೆ.

ರಾಜ್ಯ ಸರ್ಕಾರ ವಿಳಂಬ ಧೋರಣೆ ಅನುಸರಿಸದೇ ಕೂಡಲೇ ಪ್ರತಿ ಕ್ವಿಂಟಲ್‌ಗೆ ಹೆಚ್ಚುವರಿ ₹2000 ಸಹಾಯಧನ ಸೇರಿಸಿ ಒಟ್ಟು ₹10,000 ರು ಬೆಲೆ ನಿಗದಿಪಡಿಸಿ, ರೈತರಿಗೆ ಅಗತ್ಯ ಬೆಂಬಲ ಒದಗಿಸಬೇಕು ಮತ್ತು ಜಿಲ್ಲೆಯ ಎಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು (PACS) ಖರೀದಿ ಕೇಂದ್ರಗಳನ್ನಾಗಿ ಗುರುತಿಸಿ, ತ್ವರಿತವಾಗಿ ಖರೀದಿ ಪ್ರಕ್ರಿಯೆ ಪ್ರಾರಂಭಿಭಿಸಿ, ಅತಿವೃಷ್ಠಿಯಿಂದ ಹಾನಿಗೊಳಗಾಗಿ ಸಂಕಷ್ಟ ಎದುರುಸುತ್ತಿರುವ ರೈತಾಪಿ ವರ್ಗಕ್ಕೆ ಕೈಹಿಡಿಯುವ ಕೆಲಸ ರಾಜ್ಯ ಸರಕಾರ ಮಾಡಬೇಕೆಂದು ಗೌತಮ ಪಾಟೀಲ್ ಆಗ್ರಹಿಸಿದ್ದಾರೆ

.