ಕ್ರಿಶ್ಚನ್ ರುದ್ರ ಭೂಮಿಯಲ್ಲಿ ಚರಂಡಿಗೆ ಮೇಲ್ಛಾವಣಿ ಹಾಗೂ ರುದ್ರಭೂಮಿ ಒಳಗಡೆ ವಾಕಿಂಗ್ ಟ್ರ‍್ಯಾಕ್ ಅಳವಡಿಸಬೇಕೆಂದು ಮೇಯರ್‌ಗೆ ಮನವಿ

ಕಲಬುರಗಿ: ನಗರದ ವೆಂಕಟೇಶ ನಗರ ಬಡಾವಣೆಯಲ್ಲಿರುವ ಕ್ರಿಶ್ಚನ್ ರುದ್ರ ಭೂಮಿ ಹತ್ತಿರ ಇರುವ ಚರಂಡಿಗೆ ಮೇಲ್ಛಾವಣಿ ಹಾಗೂ ರುದ್ರಭೂಮಿ ಒಳಗಡೆ ವಾಕಿಂಗ್ ಟ್ರ‍್ಯಾಕ್ ಅಳವಡಿಸಬೇಕೆಂದು ಯುನೈಟೆಡ್ ಕ್ರಿಶ್ಚನ್ಸ್ ಮತ್ತು ಫಾಸ್ಟರ್ ವೇದಿಕೆ ವತಿಯಿಂದ ಮೇಯರ್ ಯಲ್ಲಪ್ಪ ನಾಯಕೋಡಿ ಅವರಿಗೆ ಮನವಿ ಸಲ್ಲಿಸಿದರು.

ವೆಂಕಟೇಶ ನಗರ ಬಡಾವಣೆಯಲ್ಲಿರುವ ಕ್ರಿಶ್ಚನ್ ರುದ್ರ ಭೂಮಿಯ ಹತ್ತಿರ ತೆರೆದ ಚರಂಡಿ ಇರುತ್ತದೆ. ಇದರಿಂದ ಚರ್ಚೆಗೆ ಬರುವ ಜನರಿಗೆ ತಮ್ಮ ದ್ವಿಚಕ್ರವನ್ನು ನಿಲ್ಲುಗಡೆ ಮಾಡಲು ಬಹಳ ತೊಂದರೆಯಾಗುತ್ತಿದೆ. ಮತ್ತು ರುದ್ರ ಭೂಮಿಯ ಒಳಗಡೆ ಸರಿಯಾದ ರೀತಿಯಲ್ಲಿ ಫ್ಲೋರಿಂಗ್ ಇಲ್ಲದಿರುವ ಪ್ರಯುಕ್ತ ಅಂತ್ಯಕೀಯ ಪ್ರಕ್ರಿಯೆಯನ್ನು ವಹಿಸಲು ಬಹಳ ತೊಂದರೆ ಅನುಭವಿಸುತ್ತಿದ್ದೇವೆ.

ಆದ್ದ ಕಾರಣ ದಯಾಳುಗಳಾದ ತಾವು ರುದ್ರ ಭೂಮಿಯ ಹತ್ತಿರ ಇರುವ ತೆರೆದ ಚರಂಡಿಗೆ ಸ್ಥ್ಯಾಬ ಮತ್ತು ಫ್ಲೋರಿಂಗ್, ನೀರಿನ ವ್ಯವಸ್ಥೆ ಹಾಗೂ ಮೂಲಭೂತ ಸೌಕರ್ಯಗಳು ಒದಗಿಸಕೊಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಸಂಧ್ಯಾರಾಜ್ ಸ್ಯಾಮ್ಯುಯೆಲ್, ಲೂಯಿಸ್ ಕೋರಿ, ದೇವಸುಂದರ್ ಬಾಗೋಡಿ, ಜಯಪ್ರಭು ಸ್ಯಾಮ್ಯುಯೆಲ್, ಸುನಂದ್ ಜೋಕರ್, ಮನಮೋಹನ್ ಇದ್ದರು.