ವಿದ್ಯಾನಗರದಲ್ಲಿ ಮಹಿಳಾ ದಿನಾಚರಣೆ ನಿಮಿತ್ತ ಶಿವಲಿಲಾ ಚಟ್ನಳ್ಳಿ ಅವರಿಗೆ ಗೌರವ ಸನ್ಮಾನ..
ವಿದ್ಯಾನಗರದಲ್ಲಿ ಮಹಿಳಾ ದಿನಾಚರಣೆ ನಿಮಿತ್ತ ಶಿವಲಿಲಾ ಚಟ್ನಳ್ಳಿ ಅವರಿಗೆ ಗೌರವ ಸನ್ಮಾನ..
ಇತ್ತೀಚೆಗೆ ಸೇಡಂ ರಸ್ತೆಯ ಬಸವೇಶ್ವರ ಆಸ್ಪತ್ರೆಯ ಎದುರುಗಡೆ ಇರುವ ವಿದ್ಯಾನಗರ ಕಾಲೋನಿಯ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಅಖಿಲ ಕರ್ನಾಟಕ ಸರಕಾರಿ ನೌಕರರ ಮಹಿಳಾ ಕಾಳಗಿ ತಾಲೂಕು ಘಟಕದ ಅಧ್ಯಕ್ಷರಾಗಿ ನೇಮಕಗೊಂಡ ಶ್ರೀಮತಿ ಶಿವಲೀಲಾ ಚಟ್ನಳ್ಳಿ ಅವರಿಗೆ ಟೆಂಗಳಿ ಅಂಡಗಿ ಪ್ರತಿಷ್ಠಾನ ಹಾಗೂ ಅಕ್ಕಮಹಾದೇವಿ ಮಹಿಳಾ ಟ್ರಸ್ಟ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಅಂಡಗಿ ಪ್ರತಿಷ್ಠಾನ ಕಾರ್ಯದರ್ಶಿ ರೇಖಾ ಅಂಡಗಿ ಅಕ್ಕಮಹಾದೇವಿ ಮಹಿಳಾ ಟ್ರಸ್ಟ್ ಅಧ್ಯಕ್ಷೆ ರತ್ನಮ್ಮ ನಿಂಬೂರ ಇವರಿಂದ ಸನ್ಮಾನಿಸಿ ಗೌರವಿಸಲಾಯಿತು. ಪದಾಧಿಕಾರಿಗಳಾದ ವಿಜಯಲಕ್ಷ್ಮಿ ರಟಕಲ್, ರಾಜೇಶ್ವರಿ ಕಂಠಿ, ತಾರಾ ಪಾಟೀಲ, ಮಧು ಹಿಂದೊಡ್ಡಿ, ಶರಣಮ್ಮ ಬೀದಿಮನಿ, ವಿಜಯಶ್ರೀ ಹೆಬ್ಬಾಳ, ಅರುಣಾ ಸಂಗಶೆಟ್ಟಿ, ಉಮಾದೇವಿ ಹೆಬ್ಬಾಳ, ಸುಮಂಗಲಾ ನಾಗಶೆಟ್ಟಿ, ಸುರೇಖಾ ಯಾದಗಿರಿ, ಬಸಮ್ಮ ಮಗಲಿ ಉಪಸ್ಥಿತರಿದ್ದರು.
