ಸಾಹಿತ್ಯ–ಸಮಾಜ ಸೇವೆಗಾಗಿ ಸಿದ್ದಪ್ಪ ತಳ್ಳಳ್ಳಿ, ಲಿಂಗಾರೆಡ್ಡಿ ಶೇರಿ ಅವರಿಗೆ ಕರುನಾಡ ಮಾಣಿಕ್ಯ ರತ್ನ ಪ್ರಶಸ್ತಿ

ಸಾಹಿತ್ಯ–ಸಮಾಜ ಸೇವೆಗಾಗಿ ಸಿದ್ದಪ್ಪ ತಳ್ಳಳ್ಳಿ, ಲಿಂಗಾರೆಡ್ಡಿ ಶೇರಿ ಅವರಿಗೆ ಕರುನಾಡ ಮಾಣಿಕ್ಯ ರತ್ನ ಪ್ರಶಸ್ತಿ

ಸಾಹಿತ್ಯ–ಸಮಾಜ ಸೇವೆಗಾಗಿ ಸಿದ್ದಪ್ಪ ತಳ್ಳಳ್ಳಿ, ಲಿಂಗಾರೆಡ್ಡಿ ಶೇರಿ ಅವರಿಗೆ ಕರುನಾಡ ಮಾಣಿಕ್ಯ ರತ್ನ ಪ್ರಶಸ್ತಿ

ವಿಜಯನಗರ ಜಿಲ್ಲೆ: ಜಿಲ್ಲೆಯ ಇಟ್ಟಗಿಯ ಶ್ರೀ ಉತ್ಸವಾಂಬ ಪ್ರಕಾಶನ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದ ಸಾಧಕರನ್ನು ಗುರುತಿಸಿ ಪ್ರತಿ ವರ್ಷದಂತೆ ಈ ವರ್ಷವೂ (2026) ರಾಜ್ಯ ಮಟ್ಟದ ಗೌರವ ಪ್ರಶಸ್ತಿಗಳನ್ನು ಪ್ರದಾನ ಮಾಡಲು ತೀರ್ಮಾನಿಸಲಾಗಿದೆ.

ಚಿಗಟೇರಿಯ ಜಾನಪದ ಜಂಗಮ ಎಂದೇ ಖ್ಯಾತಿ ಪಡೆದ ದಿವಂಗತ ಮುದೇನೂರು ಸಂಗಜ್ಜರವರ ಸ್ಮರಣಾರ್ಥವಾಗಿ ಈ ಪ್ರಶಸ್ತಿಗಳನ್ನು ನೀಡಲಾಗುತ್ತಿದ್ದು, ಪುರುಷರಿಗೆ “ಕರುನಾಡ ಮಾಣಿಕ್ಯ ರತ್ನ” ಮತ್ತು ಮಹಿಳೆಯರಿಗೆ “ಕರುನಾಡ ಹೆಮ್ಮೆಯ ಕನ್ನಡತಿ” ಎಂಬ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತಿದೆ.

ಈ ವರ್ಷ ಸಾಹಿತ್ಯ ಮತ್ತು ಸಮಾಜ ಸೇವೆ ಕ್ಷೇತ್ರದಲ್ಲಿ ಮಾಡಿದ ವಿಶಿಷ್ಟ ಸೇವೆಯನ್ನು ಪರಿಗಣಿಸಿ ಶ್ರೀ ಸಿದ್ದಪ್ಪ ತಳ್ಳಳ್ಳಿ ಹಾಗೂ ಹಿರಿಯ ಸಾಹಿತಿ ಶ್ರೀ ಲಿಂಗಾರೆಡ್ಡಿ ಶೇರಿ ಅವರನ್ನು ಕರುನಾಡ ಮಾಣಿಕ್ಯ ರತ್ನ ರಾಜ್ಯ ಮಟ್ಟದ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಇದೇ ಮಾರ್ಚ್ 18 ರಂದು ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಶ್ರೀ ಉತ್ಸವಾಂಬ ಪ್ರಕಾಶನ, ಇಟ್ಟಗಿ ತಾ. ಹೂವಿನಹಡಗಲಿ ಇದರ ಪ್ರಕಾಶಕರು ಹಾಗೂ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷರಾದ ಹಾಚಿ ಇಟ್ಟಿಗಿ (ಹಾಲಪ್ಪ ಚಿಗಟೇರಿ)ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.