ಬಿಜೆಪಿ.ಹಿ.ವ.ಮೊ. ಕಲಬುರಗಿ ಜಿಲ್ಲೆ ವತಿಯಿಂದ ಪ್ರತಿಭಟನೆ ನಡೆಸಿ ಸಿಎಂಗೆ ಮನವಿ
ಬಿಜೆಪಿ.ಹಿ.ವ.ಮೊ. ಕಲಬುರಗಿ ಜಿಲ್ಲೆ ವತಿಯಿಂದ ಪ್ರತಿಭಟನೆ ನಡೆಸಿ ಸಿಎಂಗೆ ಮನವಿ
ಕಲಬುರಗಿ: ಹಿಂದುಳಿದ ವರ್ಗಗಳ ನಿಗಮಗಳಿಗೆ ಸಮರ್ಪಕ ಅನುದಾನ ಬಿಡುಗಡೆ ಮತ್ತು ನೆಟೆರೋಗದಿಂದ ಹಾಳಾಗಿರುವ ತೊಗರಿ ಬೆಳೆಗಳಿಗೆ ಪರಿಹಾರ ನೀಡಬೇಕೆಂದು ಭಾರತೀಯ ಜನತಾ ಪಾರ್ಟಿ ಹಿಂದುಳಿದ ವರ್ಗಗಳ ಮೊರ್ಚಾ ಕಲಬುರಗಿ ಜಿಲ್ಲೆ ವತಿಯಿಂದ ಎಸ್.ವಿ.ಪಿ ವೃತ್ತದಲ್ಲಿ ಪ್ರತಿಭಟನೆ ನಡೆಸಿ ನಂತರ ನಗರಕ್ಕೆ ಅಗಮಿಸಿದ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
ಜಿಲ್ಲೆಯಲ್ಲಿ ಹೆಚ್ಚು ಹಿಂದುಳಿದ ಜನಾಂಗವಾಗಿರುವದರಿAದ ಸಮರ್ಪಕ ಅನುದಾನ ಬಿಡುಗಡೆ ಮಾಡಿ ಇವರ ಆರ್ಥಿಕ ಮತ್ತು ಶೈಕ್ಷಣಿಕ ಪ್ರಗತಿಗೆ ಅನುಕುಲ ಮಾಡಿಕೊಡಬೇಕು,
2024-25ನೇ ಸಾಲಿನಲ್ಲಿ ಕಲಬುರಗಿ ಜಿಲೆಯಲ್ಲಿ ದೇವರಾಜ ಅರಸು, ಒಕ್ಕಲಿಗ ಮರಾಠ, ವಿಶ್ವಕರ್ಮ, ವೀರಶೈವ ಲಿಂಗಾಯತ, ನಿಜಶರಣ ಅಂಬಿಗರ ಚೌಡಯ್ಯ, ಸವಿತಾ ಸಮಾಜ, ಅಲೆಮಾರಿ ಅರೆ ಅಲೆಮಾರಿ, ಮಡಿವಾಳ ಮಾಚಿ ದೇವ, ಮತ್ತು ಕಾಡುಗೊಲ್ಲ ಅಭಿವೃದ್ಧಿ ನಿಗಮಗಳಿಗೆ ಹೀಗೆ 11 ನಿಗಮಗಳಿಗೆ, ಸ್ವಯಂ ಉದ್ಯೋಗ, ಗಂಗಾ ಕಲ್ಯಾಣ ಯೋಜನೆ, ಅರಿವು ಶೈಕ್ಷಣಿಕ ಯೋಜನೆ, ನೇರ ಸಾಲ ಯೋಜನೆಗಳಿಗಾಗಿ ಒಟ್ಟು 16142 ಅರ್ಜಿಗಳು ಸಲ್ಲಿಕೆಯಾಗಿದ್ದು 8.14 ಕೋಟಿ ರೂಪಾಯಿ ಮಾತ್ರ ನಿಗದಿ ಪಡಿಸಿ 411 ಫಲಾನುಭವಿಗಳಿಗೆ ಮಾತ್ರ ಗುರಿ ನಿಗದಿಮಾಡಲಾಗಿದೆ. ಇದರಿಂದಗಾಗಿ ಜಿಲ್ಲೆಯಲ್ಲಿ ಸುಮಾರು 20 ಲಕ್ಷ ಜನ ಸಂಖ್ಯೆ ಹೊಂದಿರುವ ಹಿಂದುಳಿದ ವರ್ಗಗಳಿಗೆ ಕೇವಲ 8.14 ಕೋಟಿ ನಿಗದಿಮಾಡಿ ಇಲ್ಲಿಯವರೆಗು ಒಂದು ಪೈಸೆ ಕೂಡಾ ಹಣ ಬಿಡುಗಡೆಮಾಡಿದಿರುವದರಿಂದ ಈ ಸಮುದಾಯಗಳಿಗೆ ಅನ್ಯಾಯವಾಗಿದೆ ಆದ್ದರಿಂದ ಸನ್ಮಾನ್ಯ ಮುಖ್ಯ ಮಂತ್ರಿಗಳು ಜನ ಸಂಖ್ಯೆ ಅನುಗುಣವಾಗಿ ಆಯಾ ಸಮುದಾಯವರಿಗೆ ಅನುದಾನ ಹಂಚಿಕೆ ಮಾಡಿ ಕಲಬುರಗಿ ಜಿಲ್ಲೆಯ ಹಿಂದುಳಿದ ವರ್ಗಗಳ ಸಮುದಾಯಕ್ಕೆ ಕನಿಷ್ಠ 100 ಕೋಟಿ ಅನುದಾನ ಬಿಡುಗಡೆ ಮಾಡಬೇಕು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಎಲೆಮರೆ ಕಾಯಿಯಂತೆ ಇರುವ ಅತ್ಯಂತ ಹಿಂದುಳಿದ ಸಮುದಾಯಗಳಾದ ಹೂಗಾರ, ಗಾಣಿಗ, ಹಡಪದ, ಈಡಿಗ, ಮಾಲಗಾರ, ನೇಕಾರ, ಕುಂಬಾರ, ಬಲಿಜ. ಪಿಂಜಾರ, ನದಾಫ, ತಿಗಳ ಹೀಗೆ 13 ಸಮುದಾಯಗಳು ಕೂಡಾ ಆರ್ಥಿಕ ಮತ್ತು ಶೈಕ್ಷಣಿಕವಾಗಿ ಮುಖ್ಯ ವಾಹಿನಿಗೆ ಬರಬೇಕೆಂದು ಪ್ರತ್ಯೇಕ ಅಭಿವೃದ್ಧಿ ನಿಗಮಗಳನ್ನು ಹಿಂದಿನ ಸರಕಾರ ಸ್ಥಾಪಿಸಿತ್ತು. ಆದರೆ ತಮ್ಮ ಸರ್ಕಾರ ಇಂತಹ ಸಣ್ಣ ಸಣ್ಣ ಹಿಂದುಳಿದ ಸಮುದಾಯಗಳ ನಿಗಮಗಳಿಗೆ ಅನುದಾನ ನಿಡದೆ ಮತ್ತು ಅನುಷ್ಠಾನವಾಗದೆ ಇರುವದರಿಂದ ಈ ಸಮುದಾಯವು ತುಂಬಾ ತೊಂದರೆಯಲ್ಲಿದಾರೆ ಕಾರಣ ಕೂಡಲೆ ತಾವುಗಳು ಇಂತಹ ಶೋಷಿತ ಸಮುದಾಯಗಳ ಪುನಶ್ನೆತನಕ್ಕಾಗಿ ನಿಗಮಗಳನ್ನು ಅನುಷ್ಠಾನಗೊಳಿಸಿ ಹಣ ಬಿಡುಗಡೆ ಮಾಡಬೇಕು.
ಅದರಂತೆ ಈ ಎಲ್ಲಾ 20 ಹಿಂದುಳಿದ ವರ್ಗಗಳು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು ಇವುಗಳು ಪರಿಹಾರಕ್ಕೆ ತಮಗೆ ವರದಿ ಸಲ್ಲಿಸುವಂತೆ ಮಾನ್ಯ ಜಿಲ್ಲಾಧಿಕಾರಿಗಳು ಕಲಬುರಗಿ ಇವರ ನೆತೃತ್ವದಲ್ಲಿ ಸಭೆ ಸಡೆಸಲು ಸೂಚಿಸಬೇಕು,
ಕಲಬುರಗಿ ಜಿಲ್ಲೆಯಲ್ಲಿ ಜೂನ್-ಜೂಲೈ ತಿಂಗಳಲ್ಲಿ ಅಧಿಕ ಮಳೆಯಾಗಿ ಚಿತ್ತಾಪೂರ, ಸೇಡಂ, ಚಿಂಚೋಳಿ, ಕಮಲಾಪೂರ, ಆಳಂದ, ಜೇವಗಿ, ಮತ್ತು ಕಲಬುರಗಿಯ ಎಲ್ಲಾ ತಾಲೂಕುಗಳಲ್ಲಿ ಹೆಸರು- 978, ಉದ್ದು-7094, ಸೊಯಾ-186, ತೊಗರಿ-10538 ಒಟ್ಟು 19,565 ಹೇಕ್ಟರ್ ಪ್ರದೇಶದಲ್ಲಿ ಬೆಳೆ ಹಾಳಾಗಿದ್ದು, ಸರಕಾರಕ್ಕೆ ವರದಿ ಸಲ್ಲಿಕೆಯಾಗಿದೆ. ಆದರೂ ಇಲ್ಲಿಯವೆರೆಗೆ ರೈತರಿಗೆ ಯಾವುದೇ ಪರಿಹಾರ ನೀಡಿರುವುದಿಲ್ಲ. ಕೂಡಲೇ ಪ್ರತಿ ಎಕರೆ, ಕನಿಷ್ಠ 25 ಸಾವಿರ ರೂಪಾಯಿ ಪರಿಹಾರ ನೀಡಬೇಕು, ಕಲಬುರಗಿ ಜಿಲ್ಲೆ ಅತಿ ಹೆಚ್ಚು ತೊಗರಿ ಬೆಳೆಯುವ ಪ್ರದೇಶವಾಗಿದ್ದು, ರೈತರ ಜೀವನಾಡಿಯಾಗಿದೆ, ಸುಮಾರು 6.6 ಲಕ್ಷ ಹೇಕ್ಟರನಲ್ಲಿ ಪ್ರದೇಶದಲ್ಲಿ ತೊಗರಿ ಬೆಳೆ ಬಿತ್ತೆನೆಯಾಗಿದ್ದು, ಆದರೆ ತೇವಾಂಶ ಕೊರತೆ, ಕಳಪೆ ಬೀಜ, ಮತ್ತು ಮೈಕ್ರೋ ಪೊಮಿನಾ, ಫೈಟೋಪ್ತರ ರೋಗ ಬಾಧೆಯಿಂದಾಗಿ ಜಿಲೆಯಲ್ಲಿ 1 ಲಕ್ಷ 82 ಸಾವಿರ ಹೇಕ್ಟರ ತೊಗರಿ ನೆಟ ರೋಗದಿಂದ ಹಾಳಾಗಿದೆಯೆಂದು ಕೃಷಿ ಇಲಾಖೆ ಸರಕಾರಕ್ಕೆ ವರದಿ ಸಲ್ಲಿಸಿರುತ್ತದೆ. ಹೀಗಾಗಿ ಪ್ರತಿ ಎಕರೆಗೆ 25 ಸಾವಿರ ರೂಪಾಯಿ ಪರಿಹಾರ ಘೋಷಣೆ ಮಾಡುವಂತೆ ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಓಬಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಅವಣ್ಣಾ ಮ್ಯಾಕೇರಿ, ಈರಣ್ಣ ಹಡಪದ, ಓಬಿಸಿ ಗ್ರಾಮಂತರ ಅಧ್ಯಕ್ಷ ಮಲ್ಲಿಕಾರ್ಜುನ ಯಮ್ಮೇನೂರ, ಓಬಿಸಿ ಕಾರ್ಯಕಾರಿಣಿ ಸದಸ್ಯ ಶರಣಗೌಡ ಐಕೂರ, ಓಬಿಸಿ ಜಿಲ್ಲಾ ಮುಖಂಡ ಬಸವರಾಜ ಮದ್ರಿಕಿ ಸೇರಿದಂತೆ ಇತರರು ಇದ್ದರು.