ಕೆನರಾ ಬ್ಯಾಂಕಯಿಂದ ಕ್ರೀಡಾ ಸಾಮಗ್ರಿಗಳ ವಿತರಣೆ.
ಕೆನರಾ ಬ್ಯಾಂಕಯಿಂದ ಕ್ರೀಡಾ ಸಾಮಗ್ರಿಗಳ ವಿತರಣೆ.
ಶಹಾಪುರ : ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಕ್ರೀಡೆಗಳು ಅತ್ಯಂತ ಪ್ರಮುಖವಾಗಿವೆ,ಸಂತೋಷದ ಜೀವನಕ್ಕೆ ಕ್ರೀಡೆಯನ್ನು ಜೀವನದ ಒಂದು ಭಾಗವನ್ನಾಗಿ ನವಡಿಸಿಕೊಳ್ಳುವುದು ಮುಖ್ಯ ಎಂದು ಸಗರ ಕೆನರಾ ಬ್ಯಾಂಕಿನ ವ್ಯವಸ್ಥಾಪಕರಾದ ವಿವೇಕಾನಂದ ಹೇಳಿದರು.
ಸಗರ ಕೆನರಾ ಬ್ಯಾಂಕ್ ವತಿಯಿಂದ (ಸಿಎಸ್ಆರ್ ) ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ನೀತಿಯಲ್ಲಿ ಸಗರ ಗ್ರಾಮದ ಕನ್ಯಾ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಕ್ರೀಡಾ ಸಾಮಗ್ರಿಗಳು ವಿತರಿಸಿ ಮಾತನಾಡಿ ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ದೈಹಿಕ ಕ್ಷಮತೆಯ ಜೊತೆಗೆ ಕ್ರಿಯಾಶೀಲತೆಯನ್ನು ಹೆಚ್ಚಿಸಿ ಅಭ್ಯಾಸಕ್ಕೆ ಮತ್ತಷ್ಟು ಪೂರಕವಾಗುತ್ತದೆ ಎಂದು ನುಡಿದರು.
ಗ್ರಾಮದ ಯುವ ಮುಖಂಡ ಬಾಗೇಶ್ ಜಾಯಿ ಮಾತನಾಡಿ ಬ್ಯಾಂಕ್ ವತಿಯಿಂದ ಕೊಡುಗೆಯಾಗಿ ನೀಡಿರುವ ಕ್ರೀಡಾ ಸಾಮಗ್ರಿಗಳನ್ನು ಸರಿಯಾಗಿ ಸದ್ಬಳಿಕೆ ಮಾಡಿಕೊಂಡು ಒತ್ತಡ ಕಡಿಮೆ ಮಾಡಿಕೊಳ್ಳುವುದರ ಮೂಲಕ ಏಕಾಗ್ರತೆ ಹೆಚ್ಚಿಸಿಕೊಂಡು ಶಿಸ್ತು ಮತ್ತು ಸಂಘಟನಾ ಶಕ್ತಿ ಬೆಳೆಸಿಕೊಳ್ಳಿ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮದ ಯುವ ಮುಖಂಡ ಚಂದ್ರಶೇಖರ ಬಸ್ಸಾನೂರ,ಹಾಗೂ ಶಾಲಾ ಶಿಕ್ಷಕ ವೃಂದದವರಾದ ಯಾಸ್ಮಿನಾ ಬಾನು, ಗುತ್ತಪ್ಪ,ಭಾಗ್ಯಶ್ರೀ,ಸುಜಾತಾ, ಸೇರಿದಂತೆ ಇನ್ನಿತರರು ಹಾಜರಿದ್ದರು.
