ಬಹುಜನ ಸಮಾಜ ಪಕ್ಷದಿಂದ ಮಾಯಾವತಿಜೀ 70ನೇ ಜನ್ಮದಿನ ಆಚರಣೆ – ಜನಕಲ್ಯಾಣ ಆರ್ಥಿಕ ಸಹಯೋಗ ದಿನ
ಬಹುಜನ ಸಮಾಜ ಪಕ್ಷದಿಂದ ಮಾಯಾವತಿಜೀ 70ನೇ ಜನ್ಮದಿನ ಆಚರಣೆ – ಜನಕಲ್ಯಾಣ ಆರ್ಥಿಕ ಸಹಯೋಗ ದಿನ
ಕಲಬುರಗಿ:ಬಹುಜನ ಸಮಾಜ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಬಹುಜನ ಸಮಾಜದ ಆಶಾಕಿರಣವಾಗಿರುವ ಮಾಯಾವತಿಜೀಯವರ 70ನೇ ಜನ್ಮದಿನವನ್ನು ದಿನಾಂಕ 15-01-2026 ರಂದು ಇಡೀ ಭಾರತಾದ್ಯಾಂತ ಜನಕಲ್ಯಾಣ ಆರ್ಥಿಕ ಸಹಯೋಗ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ಕಲಬುರಗಿ ಜಿಲ್ಲಾ ಬಹುಜನ ಸಮಾಜ ಪಕ್ಷದ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಲಾಯಿತು.
ಅದೇ ದಿನ ಕರ್ನಾಟಕ ರಾಜ್ಯದ ಕಲಬುರಗಿ ವಲಯ ಮಟ್ಟದ ಅಂದರೆ ಕಲಬುರಗಿ, ಬೀದರ, ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳ ಕಾರ್ಯಕರ್ತರ ಸಹಭಾಗಿತ್ವದಲ್ಲಿ ಕಲಬುರಗಿ ನಗರದ ಡಾ. ಬಾಬಾ ಸಾಹೇಬ್ ಬಿ.ಆರ್. ಅಂಬೇಡ್ಕರ್ ಪುತ್ಥಳಿ ಜಗತ್ ಆವರಣದಲ್ಲಿ ಅತ್ಯಂತ ವಿಜೃಂಭಣೆಯಿಂದ ಈ ಕಾರ್ಯಕ್ರಮವನ್ನು ಆಚರಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಈ ಕಾರ್ಯಕ್ರಮಕ್ಕೆ ಬಹುಜನ ಸಮಾಜ ಪಕ್ಷದ ರಾಜ್ಯಾಧ್ಯಕ್ಷರಾದ ಎಂ. ಕೃಷ್ಣಮೂರ್ತಿಜಿ, ರಾಜ್ಯ ಸಂಯೋಜಕರು ಹಾಗೂ ಕಲಬುರಗಿ ವಲಯ ಉಸ್ತುವಾರಿಯಾದ ಎಲ್.ಆರ್. ಬೋಸ್ಲಿಜಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಜೊತೆಗೆ ರಾಜ್ಯ ಕಾರ್ಯದರ್ಶಿಗಳಾದ ಡಾ. ಅನೀಲ ಟೆಂಗಳಿ, ತಿಪ್ಪಣ್ಣ ಕಿನ್ನೂರ, ಮೈಲಾರಿ ಶೆಳ್ಳಗಿ, ಹುಚ್ಚೇಶ್ವರ ವಠಾರ, ಬೀದರದಿಂದ ಜ್ಞಾನೇಶ್ವರ ಸಿಂಗಾರೆ, ಅಶೋಕ ಮಂಠಾಳೆ, ರಾಯಚೂರದಿಂದ ಬಸವರಾಜ ಭಂಡಾರಿ, ಹಣಮಂತಪ್ಪ ಅತನೂರ, ಪ್ರಭು ದಳಪತಿ, ಹಾಗೂ ಯಾದಗಿರಿಯಿಂದ ದೇವಾನಂದ ಕೋಳಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ.
ಇದಲ್ಲದೆ ಕಲಬುರಗಿ ವಲಯ ಮಟ್ಟದ ಜಿಲ್ಲಾಧ್ಯಕ್ಷರಾದ ಶಿವಯೋಗಿ ಹಡಗಿಲಕರ್, ಬೀದರ ಜಿಲ್ಲಾಧ್ಯಕ್ಷ ಕಪೀಲ ಗೋಡಬೋಲೆ, ಯಾದಗಿರಿ ಜಿಲ್ಲಾಧ್ಯಕ್ಷ ಎಂ.ಡಿ. ತಾಜುದ್ದಿನ್, ರಾಯಚೂರು ಜಿಲ್ಲಾಧ್ಯಕ್ಷ ಜೈಭೀಮ್ ವಲ್ಲಭ ಸೇರಿದಂತೆ ವಲಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಅಧ್ಯಕ್ಷರು, ಕಾರ್ಯದರ್ಶಿಗಳು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಈ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆಯ ಬಹುಜನ ಪಕ್ಷದ ಹಿತೈಷಿಗಳು, ಪ್ರಗತಿಪರ ಚಿಂತಕರು, ಸಾಹಿತಿಗಳು, ಕಲಾವಿದರು ಹಾಗೂ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಪತ್ರಿಕಾಗೋಷ್ಠಿಯ ಮೂಲಕ ಮನವಿ ಮಾಡಲಾಯಿತು.
ಪತ್ರಿಕಾಗೋಷ್ಠಿಯಲ್ಲಿ ಎಲ್.ಆರ್. ಬೋಸ್ಲಿ, ಶಿವಯೋಗಿ ಹಡಗಿಲಕರ್, ಡಿ. ಹಡಗಿಲಕರ್, ಡಾ. ಅನೀಲ ಟೆಂಗಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
