ಜಗದ್ಗುರು ಶ್ರೀ ಶ್ರೀ ಶ್ರೀ ಚಿಕ್ಕೇಶ್ವರ ಮಹಾ ಸ್ವಾಮಿಗಳ ಆರಾಧನೆ ನಿಮಿತ್ತ ಪೂರ್ವ ಸಭೆ

ಜಗದ್ಗುರು ಶ್ರೀ ಶ್ರೀ ಶ್ರೀ ಚಿಕ್ಕೇಶ್ವರ ಮಹಾ ಸ್ವಾಮಿಗಳ ಆರಾಧನೆ ನಿಮಿತ್ತ ಪೂರ್ವ ಸಭೆ
ಕಲಬುರಗಿ: ಪ್ರತಿ ವರ್ಷದ ಪದ್ಧತಿಯೆಂತೆ ಈವರ್ಷ ಕೂಡ ಇದೆ ಡಿಸೇಂಬರ್ 7 ನೇ ತಾರೀಕು ರವಿವಾರ ನಡೆಯುವ ಜಗದ್ಗುರು ಶ್ರೀ ಶ್ರೀ ಶ್ರೀ ಚಿಕ್ಕೇಶ್ವರ ಮಹಾ ಸ್ವಾಮಿಗಳ ಆರಾಧನೆ ನಿಮಿತ್ತ ಪೂರ್ವ ಸಭೆ ಅಫಜಲಪುರ ಪಟ್ಟಣದ ಶ್ರೀ ಕಾಳಿಕಾದೇವಿ ಮಂದಿರದಲ್ಲಿ ನಡೆಯಿತು.
ಈ ಸಭೆಯಲ್ಲಿ ಶ್ರೀಮಠದ ಹಿರಿಯ ಸ್ವಾಮೀಜಿಗಳಾದ ಶ್ರೀ ಶ್ರೀ ಶ್ರೀ ಚಿಕ್ಕೇಂದ್ರ ಮಹಾಸ್ವಾಮಿಗಳು ಮೂರು ಝಾವದ ಮಠ ಅಪಜಲಪೂರ, ಪರಮ ಪೂಜ್ಯ ರಾಮಚಂದ್ರ ಮಹಾ ಸ್ವಾಮೀಜಿ ಅಲಮೇಲ ಸಿಂದಗಿ ಹಾಗೂ ಶ್ರೀ ಬ್ರಹ್ಮಾನಂದ ಮಹಾಸ್ವಾಮಿಗಳು ಅಫಜಲಪುರ ಪರಮಪೂಜ್ಯ ಶ್ರೀ ಕುಮಾರ ಸ್ವಾಮಿಗಳು ಫಜಲಪುರ ಎಲ್ಲಾ ಪೂಜ್ಯರ ನೇತೃತ್ವದಲ್ಲಿ ಹಾಗೂ ಸಮಸ್ತ ವಿಶ್ವಕರ್ಮ ಸಮಾಜದ ಶ್ರೀಮಠದ ಭಕ್ತರ ಸಮ್ಮುಖದಲ್ಲಿ ಪೂರ್ವಭಾವಿ ಸಭೆ ಯಶಸ್ವಿಯಾಗಿ ನಡೆಯಿತು.
ಆದ್ದರಿಂದ ಮುಂಬರುವ ಇದೇ ಡಿಸೆಂಬರ್ 7 ರವಿವಾರ ರಂದು ನಡೆಯುವ ಆರಾಧನಾ ಮಹೋತ್ಸವದಲ್ಲಿ ಉಚಿತ ಉಪನಯನ ಕಾರ್ಯಕ್ರಮ ಶ್ರೀಮಠದ ಹಿರಿಯ ಸ್ವಾಮೀಜಿಗಳಾದ ಚಿಕ್ಕೇಂದ್ರ ಮಹಾಸ್ವಾಮಿಗಳ ತುಲಾಭಾರ ಕಾರ್ಯಕ್ರಮ ಸಂಗೀತ ಸಭೆ ಸಾಧಕರಿಗೆ ಸನ್ಮಾನ ಈ ರೀತಿ ಹತ್ತು ಹಲವಾರು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಈ ಕಾರ್ಯಕ್ರಮದಲ್ಲಿ ನಾಡಿನ ಹರ ಗುರು ಚರಮೂರ್ತಿಗಳು ವಿಶೇಷವಾಗಿ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ರಾಜ್ಯ ಅಧ್ಯಕ್ಷರು ಹಾಗೂ ಮಾಜಿ ವಿಧಾನ ಪರಿಷತ್ನ ಸದಸ್ಯರಾಗಿರುವ ಸನ್ಮಾನ್ಯ ಶ್ರೀ ಕೆಪಿ ನಂಜುಂಡಿ ವಿಶ್ವಕರ್ಮ ಬೆಂಗಳೂರು ಹಾಗೂ ರಾಜ್ಯ ಮಹಿಳಾ ಘಟಕದ ಅಧ್ಯಕ್ಷರಾದ ವಸಂತ ಮುರಳಿ ಆಚಾರ್ಯ ಬೆಂಗಳೂರು ಹಾಗೂ ರಿಷಿ ವಿಶ್ವಕರ್ಮ ಮೈಸೂರು ಶ್ರೀ ಯುತ ದೇವೇಂದ್ರ ದೇಸಾಯಿ ಕಲ್ಲೂರ ವಿಶ್ವಕರ್ಮ ಹೋರಾಟ ಸಮಿತಿ ಕಲಬುರ್ಗಿ ಹಾಗೂ ತಾಲೂಕಿನ ಶಾಸಕರು ರಾಜಕೀಯದ್ದು ಧುರೀಣರು ವಿಶ್ವಕರ್ಮ ಸಮಾಜದ ಮುಖಂಡರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮವು ಪಟ್ಟಣದ ನ್ಯಾಷನಲ್ ಫಂಕ್ಷನ್ ಹಾಲ್ ದಲ್ಲಿ ಕಾರ್ಯಕ್ರಮ ನಡೆಯಲಿದ್ದು ಆದ ಕಾರಣ ಸಮಸ್ತ ವಿಶ್ವಕರ್ಮ ಸಮಾಜದ ಎಲ್ಲಾ ಬಂಧುಗಳು ಈ ಆರಾಧನೆ ಮಹೋತ್ಸವದಲ್ಲಿ ತಾವುಗಳೆಲ್ಲ ಭಕ್ತರು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸಿ ತನು ಮನ ಧನದಿಂದ ಸೇವೆಯನ್ನು ಸಲ್ಲಿಸಿ ಪುನೀತರಾಗಬೇಕಾಗಿ ಶ್ರೀಮಠದ ಪೂಜ್ಯರಾದ ಬ್ರಹ್ಮಾನಂದ ಮಹಾಸ್ವಾಮಿಗಳು ತಿಳಿಸಿದರು
.