ಕೋಳೂರ ಎಂ ಗ್ರಾಮ ಪಂಚಾಯತಿ ಕಾರ್ಯ ಶ್ಲಾಘಿಸಿದ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲದಾಪುರ
ಕೋಳೂರ ಎಂ ಗ್ರಾಮ ಪಂಚಾಯತಿ ಕಾರ್ಯ ಶ್ಲಾಘಿಸಿದ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲದಾಪುರ
ಶಹಾಪುರ: ಗ್ರಾಮದ ಕಿರಾಣಿ ಅಂಗಡಿಗಳು, ಪಾನ್ ಶಾಪ್ ಸೇರಿ ಇತರೆ ಕಡೆಗಳಲ್ಲಿ ಮದ್ಯ ಮಾರಾಟ ವಿರುದ್ಧ ಜಾಗೃತಿ ಮೂಡಿಸುತ್ತಿರುವ ಕೋಳೂರ ಎಂ ಗ್ರಾಮ ಪಂಚಾಯತಿ ಕಾರ್ಯವು ಇತರೆ ಗ್ರಾಮ ಪಂಚಾಯತಿಗಳಿಗೆ ಮಾದರಿಯಾಗಿದೆ ಎಂದು ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲದಾಪುರ ಹೇಳಿದರು.
ಶಹಾಪುರ ತಾಲೂಕಿನ ಕೋಳೂರ ಎಂ ಗ್ರಾಮಕ್ಕೆ ಭೇಟಿ ನೀಡಿದ, ಶರಣಪ್ಪ ಸಲಾದಪುರ ಅವರು, ಅಕ್ರಮ ಮದ್ಯ ಮಾರಾಟದ ವಿರುದ್ಧ ಜಾಗೃತಿ ಮೂಡಿಸುತ್ತಿರುವ ಕೋಳೂರ ಎಂ ಗ್ರಾಮ ಪಂಚಾಯತಿ ಅಧ್ಯಕ್ಷರು, ಪಿಡಿಒ ಹಾಗೂ ಇತರರಿಗೆ ಸನ್ಮಾನಿಸಿ ಮಾತನಾಡಿದರು.
ಹಳ್ಳಿ ಹಳ್ಳಿಗಳ ಕಿರಾಣಿ, ಪಾನ್ ಮಾರಾಟ ಮಾಡುವ ಅಂಗಡಿಗಳಲ್ಲಿ ಅಕ್ರಮ ಮದ್ಯ ಸೇವಿಸಿ, ಜನರು ಮದ್ಯ ವ್ಯಸನಿಗಳಾಗಿ ಕೊನೆಗೆ ತಮ್ಮ ಜೀವವನ್ನು ಕಳೆದುಕೊಳ್ಳುತ್ತಿದ್ದು, ಅವರ ಕುಟುಂಬದವರು ಬೀದಿಗೆ ಬರುವತ್ತಾಗಿದೆ. ಪರವಾನಗಿ ಇಲ್ಲದೇ ಹಳ್ಳಿಗಳಲ್ಲಿ ಮದ್ಯ ಮಾರಾಟವಾಗುತ್ತಿರುವ ಸಂಪೂರ್ಣ ನಿಲ್ಲಸಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕೈಜೋಡಿಸುವ ಅಗತ್ಯತೆಯಿದೆ.
ಕೋಳೂರ ಎಂ ಗ್ರಾಮ ಪಂಚಾಯತಿಯ ಈ ಸಮಾಜಮುಖಿ ಕಾರ್ಯ ಯಾದಗಿರಿ ಜಿಲ್ಲೆ ಸೇರಿದಂತೆ ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿಗಳಿಗೆಪ್ರೇರಣೆಯಾಗಲಿ ಎಂದು ಹೇಳಿದರು.
ಜನಾಕ್ರೋಶ ಪತ್ರಿಕೆ ಸಂಪಾದಕರಾದ ಲಕ್ಷ್ಮೀಕಾಂತ ನಾಯಕ ಮಾತನಾಡಿ, ಯಾದಗಿರಿ ಜಿಲ್ಲಾ ಪಂಚಾಯತ್ ಸಿಇಒ ಅವರು ಕೋಳೂರ ಎಂ ಗ್ರಾಮದಲ್ಲಿ ಮದ್ಯ ಮಾರಾಟ ನಿಲ್ಲಿಸುವಂತೆ ಬರೆದಿರುವ ಪತ್ರಕ್ಕೆ ಸ್ಪಂದಿಸಿದ್ದು, ಗ್ರಾಮದಲ್ಲಿ ಮದ್ಯ ಮಾರಾಟ ಮಾಡದಂತೆ ಧ್ವನಿ ವರ್ಧಕ ಮೂಲಕ ಜಾಗೃತಿ ಮೂಡಿಸುತ್ತಿರುವ ಅಭಿನಂದನೆಗೆ ಅರ್ಹವಾಗಿದೆ ಎಂದರು.
ಕೋಳೂರ ಎಂ ಗ್ರಾಮ ಪಂಚಾಯತಿ ಅಧ್ಯಕ್ಷೆ ಪವಿತ್ರಾ ದೇವೇಂದ್ರ, ಪಿಡಿಒ ರೇವು ರೆಡ್ಡಿ ರಾಠೋಡ್, ಸೇರಿದಂತೆ ಗ್ರಾಪಂ ಸದಸ್ಯರು, ಇತರರು ಇದ್ದರು.
