"ಅನಧಿಕೃತ ಆಗ್ರೋ ಮಳಿಗೆಗಳ ವಿರುದ್ಧ ಕ್ರಮ ಕೈಗೊಳ್ಳಿ :ಮಹಾಂತಗೌಡ ಆರ್. ಪಾಟೀಲ್ ಆಗ್ರಹ

"ಅನಧಿಕೃತ ಆಗ್ರೋ ಮಳಿಗೆಗಳ ವಿರುದ್ಧ ಕ್ರಮ ಕೈಗೊಳ್ಳಿ :ಮಹಾಂತಗೌಡ ಆರ್. ಪಾಟೀಲ್ ಆಗ್ರಹ
ಜೇವರ್ಗಿ ಹಾಗೂ ಯಡ್ರಾಮಿ ತಾಲೂಕಿನಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯ ವಿರುದ್ಧವಾಗಿ ಅಹಿಂಧ ಸಂಘಟನೆಯ ತಾಲೂಕ ಅಧ್ಯಕ್ಷ ಮಹಾಂತಗೌಡ ಆರ್. ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಹಾಗೂ ತಾಲೂಕು A.D. ಅವರು ನಡೆಸಿದ ದಾಳಿ ವೇಳೆ ಆಗ್ರೋ ಏಜೆನ್ಸಿ ಮಾಲೀಕರು ರೈತರಿಗೆ ವಂಚನೆ ಮಾಡಿರುವುದು ಸಾಬೀತಾಗಿದೆ. ಇಂತಹ ಏಜೆನ್ಸಿಗಳ ಪರವಾನಗಿ ರದ್ದುಮಾಡಿ, ಮಾಲೀಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವ ಬದಲು ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದನ್ನು ಪಾಟೀಲ್ ಗಂಭೀರವಾಗಿ ಖಂಡಿಸಿದ್ದಾರೆ.
“ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳದ ಅಧಿಕಾರಿಗಳು ಜವಾಬ್ದಾರಿ ವಹಿಸಿ ತಕ್ಷಣ ರಾಜೀನಾಮೆ ನೀಡಲಿ. ಇಲ್ಲವಾದರೆ ಅವರ ವಿರುದ್ಧ ಕಟ್ಟುನಿಟ್ಟಿನ ಹೋರಾಟ ನಡೆಸಲಾಗುವುದು. ಅನಿವಾರ್ಯವಾದಲ್ಲಿ ಜಂಟಿ ಕೃಷಿ ನಿರ್ದೇಶಕರ ಕಚೇರಿಯ ಎದುರುಗಡೆ ಅನಿರ್ದಿಷ್ಟ ಸತ್ಯಾಗ್ರಹಕ್ಕೆ ಕೈಹಾಕಬೇಕಾಗುತ್ತದೆ,” ಎಂದು ಪಾಟೀಲ್ ಎಚ್ಚರಿಕೆ ನೀಡಿದ್ದಾರೆ.
ವರದಿ: ಜೇಟ್ಟೆಪ್ಪ ಎಸ್. ಪೂಜಾರಿ