ಶಹಾಬಾದ: ಮಾತಾ ಮಹಾಕಾಳಿ ದೇವಸ್ಥಾನದಲ್ಲಿ ದಿ. ಯಲ್ಲಪ್ಪ ಚಿಂತಾಮಣಿ ಜನ್ಮದಿನ ಆಚರಣೆ
ಶಹಾಬಾದ: ಮಾತಾ ಮಹಾಕಾಳಿ ದೇವಸ್ಥಾನದಲ್ಲಿ ದಿ. ಯಲ್ಲಪ್ಪ ಚಿಂತಾಮಣಿ ಜನ್ಮದಿನ ಆಚರಣೆ
ಶಹಾಬಾದ ಪಟ್ಟಣದ ವಾರ್ಡ್ 25 ರ ಮಡ್ಡಿ ನಂ. 1 ರಲ್ಲಿರುವ ಮಾತಾ ಮಹಾಕಾಳಿ ದೇವಸ್ಥಾನದ ಸಂಸ್ಥಾಪಕ ದಿ. ಯಲ್ಲಪ್ಪ ಚಿಂತಾಮಣಿ ಅವರ ಜನ್ಮದಿನವನ್ನು ಭಕ್ತಿಭಾವದಿಂದ ಆಚರಿಸಲಾಯಿತು.
ದೇವಸ್ಥಾನದ ಖಜಾಂಚಿ ಕುಮಾರಿ ನೀಲಮ್ಮ ಮಾತನಾಡಿ, "ಯಲ್ಲಪ್ಪ ಚಿಂತಾಮಣಿ ಅವರ ಆತ್ಮಕ್ಕೆ ಶಾಂತಿ ಮತ್ತು ಮುಕ್ತಿ ದೊರೆತಿದೆ, ಅವರ ಆಶೀರ್ವಾದದಿಂದ ಸಂಸ್ಥೆ ಉತ್ತಮ ದಾರಿಯಲ್ಲಿ ಸಾಗುತ್ತಿದೆ" ಎಂದು ಹರ್ಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕಲಬುರಗಿಯ ಹಿರಿಯ ವಕೀಲ ಸಂಜೀವ ಕುಮಾರ ಡೊಂಗರಗೌವ ಮಾತನಾಡಿ, "ನಿಮ್ಮ ತಂದೆ ಹಾಗೂ ಕಾಕಾ ಭೀಮಪ್ಪ ಅವರ ಆರಾಧನೆಯ ಫಲವೇ ಇಂದು ದೇವಸ್ಥಾನಕ್ಕೆ ನ್ಯಾಯ ಲಭಿಸಿದೆ. ಇದನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ. ಭಕ್ತಿಯಿಂದ ಸೇವೆ ಮುಂದುವರಿಸಬೇಕು" ಎಂದು ಸಲಹೆ ನೀಡಿದರು.
ಸ್ಥಳೀಯ ಮುಖಂಡ ಡಾ.ಮಹೇಂದ್ರ ಕೋರಿ ಮುತ್ತಗಿಯವರನ್ನು ಗಣೇಶ ಹಬ್ಬದ ಅಂಗವಾಗಿ ಗೌರವಿಸಲಾಯಿತು. "ದಿ. ಭೀಮಪ್ಪ ಕಾಕಾ ಅವರ ಆಶೆಯನ್ನು ನೆರವೇರಿಸಿ ಕೊಡಬೇಕು" ಎಂದು ಸದಸ್ಯರು ವಿನಂತಿಸಿದರು.
ಇನ್ನೊಬ್ಬ ವಕೀಲ ಶೈಲೇಶ್ ಲಾಡೆ ಮಾತನಾಡಿ, "ಈ ದೇವಸ್ಥಾನದ ಚಿರ ಅಸ್ತಿ ಹಿರಿಯರು ಶ್ರದ್ಧೆಯಿಂದ ಕಾಪಾಡಿಕೊಂಡು ಬಂದಿದ್ದಾರೆ. ಅದನ್ನು ಪದ್ಧತಿ ಹಾಗೂ ಸಂಪ್ರದಾಯದಂತೆ ಪೂಜಿಸಬೇಕು" ಎಂದು ಹೇಳಿದರು.
ಕಾರ್ಯಕ್ರಮದ ಆರಂಭದಲ್ಲಿ ನ್ಯಾಯವಾದಿ ಜೆ. ವಿನೋದ ಕುಮಾರ ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕ ಭಾಷಣ ಮಾಡಿದರು. "ಮಾತಾ ಮಹಾಕಾಳಿ ಆಶೀರ್ವಾದದಿಂದ ಸಂಸ್ಥೆ ಹೆಮ್ಮರವಾಗಿ ಬೆಳೆಯಲಿ, ಎಲ್ಲ ಭಕ್ತರೂ ಆಶೀರ್ವಾದ ಪಡೆದು ಪುನೀತರಾಗಲಿ" ಎಂದು ಶುಭಾಶಯ ಕೋರಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯ ಅರ್ಚಕ ಹಾಗೂ ಸಂಸ್ಥೆಯ ಅಧ್ಯಕ್ಷರಾದ ಬಲಭೀಮ್ ಚಿಂತಾಮಣಿ ವಹಿಸಿದ್ದರು. ಕೊನೆಯಲ್ಲಿ ಉಪಾಧ್ಯಕ್ಷೆ ಶ್ರೀಮತಿ ದುರ್ಗಾ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು.