ಭೀಮನಳ್ಳಿ-ನಾಲವಾರ ಶ್ರೀಗಳಿಗೆ ಗುರುವಂದನೆ ರಜತ ಕಿರೀಟ ಅರ್ಪಣೆ ಮತ್ತು ಮೂರ್ತಿ ಪ್ರತಿಷ್ಠಾಪನೆ

ಭೀಮನಳ್ಳಿ-ನಾಲವಾರ ಶ್ರೀಗಳಿಗೆ ಗುರುವಂದನೆ ರಜತ ಕಿರೀಟ ಅರ್ಪಣೆ ಮತ್ತು ಮೂರ್ತಿ ಪ್ರತಿಷ್ಠಾಪನೆ

ಭೀಮನಳ್ಳಿ-ನಾಲವಾರ ಶ್ರೀಗಳಿಗೆ ಗುರುವಂದನೆ ರಜತ ಕಿರೀಟ ಅರ್ಪಣೆ ಮತ್ತು ಮೂರ್ತಿ ಪ್ರತಿಷ್ಠಾಪನೆ 

ಶ್ರೀಕ್ಷೇತ್ರ ನಾಲವಾರ ಸದ್ಗುರು ಶ್ರೀ ಕೋರಿಸಿದ್ದೇಶ್ವರ ಸಂಸ್ಥಾನ ಮಹಾಮಠದ ಪೀಠಾಧಿಪತಿಗಳಾದ ಪೂಜ್ಯಶ್ರೀ ಡಾ ಸಿದ್ಧ ತೋಟೆಂದ್ರ ಶಿವಾಚಾರ್ಯ ಮಹಾಸ್ವಾಮಿಗಳವರಿಗೆ ಗುರುವಂದನೆ ಮತ್ತು ರಜತಕಿರೀಟ ಧಾರಣೆ ಸಮಾರಂಭವು ಸಹಸ್ರ ಸಹಸ್ರ ಭಕ್ತರ ಭಕ್ತಿಯ ಮದ್ಯ ಸಡಗರ ಸಂಭ್ರಮದಿಂದ ನೆರವೇರಿತು ನಂತರ ನಡೆದ ಸಮಾರಂಭದ ಸನ್ನಿಧಾನವಹಿಸಿದ ಶ್ರೀಗಳವರು ಆಶೀರ್ವಚನ ನೀಡುತ್ತಾ

 :ಬದುಕಿಗೆ ಶಾಂತಿ ಮತ್ತು ನೆಮ್ಮದಿಗಳ ಅವಶ್ಯಕತೆವಿದೆ.ದೇವಸ್ಥಾ ಮಠ ಮಂದಿರ ಆಧ್ಯಾತ್ಮಿಕ ಕೇಂದ್ರಗಳಿಗೆ ಹೋಗುವುದರಿಂದ ಮನುಷ್ಯನ ಮನಸ್ಸಿಗೆ ಶಾಂತಿ ಮತ್ತು ನೆಮ್ಮದಿ ಲಭಿಸುತ್ತದೆ ಎಂದು ನಾಲವರ ಶ್ರೀ ನುಡಿದರು 

 ತಾಲೂಕಿನ ಭೀಮನಹಳ್ಳಿ ಗ್ರಾಮದಲ್ಲಿ ಮಂಗಳವಾರ ನೂತನವಾಗಿ ನಿರ್ಮಾಣಗೊಂಡಿರುವ ಅಳಲಿಂಗ ದೇವಸ್ಥಾನದ ಉದ್ಘಾಟನೆ ಹಾಗೂ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಹಾಗೂ ಗುರುವಂದನ ಮತ್ತು ರಜತ ಕಿರುಟ ಸಮರ್ಪಣ. ತುಲಾಭಾರ ಸಮಾರಂಭದ ಸಾನಿಧ್ಯವನ್ನು ವಹಿಸಿ ಆಶೀರ್ವಚನ ನೀಡಿದರು.

ಮನುಷ್ಯನು ತನ್ನ ಲೌಕಿಕ ಸುಖಕ್ಕಾಗಿ ದುಡ್ಡು ಗಳಿಸುತ್ತಿದ್ದಾನೆ.ಮಾನಸಿಕ ನೆಮ್ಮದಿಯನ್ನು ಕಳೆದುಕೊಂಡು ಒತ್ತಡದಲ್ಲಿ ಜೀವನವನ್ನು ನಡೆಸುತ್ತಿದ್ದಾರೆ ಮನುಷ್ಯನ ಒತ್ತಡ ಮತ್ತು ಮನಸ್ಸಿಗೆ ಶಾಂತಿ ನೆಮ್ಮದಿಗಳು ಇಂತಹ ಧಾರ್ಮಿಕ ಕಾರ್ಯಗಳು ಮಾಡುವುದರಿಂದ ಪ್ರಾಪ್ತಿ ದೊರೆಯುತ್ತದೆ.

 ದೇವಸ್ಥಾನಗಳು ನಿರ್ಮಾಣ ಮಾಡುವುದು ದೊಡ್ಡ ವಿಷಯವಲ್ಲ ಜೊತೆಗೆ ದೇವಸ್ಥಾನದ ಪವಿತ್ರತೆಯನ್ನು ಕಾಪಾಡಬೇಕು ಅದರ ಸುತ್ತಲಿನ ವಾತಾವರಣವನ್ನು ಸ್ವಚ್ಛವಾಗಿರಬೇಕು ನಿರಂತರ ನಿತ್ಯ ಧಾರ್ಮಿಕ ಸಾಮಾಜಿಕ ಶೈಕ್ಷಣಿಕ ಸಾಹಿತಿಕ ಚಟುವಟಿಕೆಗಳು ನಡೆಯಬೇಕು. ನಾಡಿಗೆ ಮತ್ತು ದೇಶಕ್ಕೆ ಒಳ್ಳೆಯ ದಾಗುವ ವಿಚಾರಗಳನ್ನು ಬಿತ್ತರಿಸುವ ಕಾರ್ಯಗಳು ನಿರಂತರವಾಗಿ ಸಾಗಲಿ ಬೇಕು ಎಂದರು.

 ಗುರುವಿನಿಂದ ಗುರು ಭಕ್ತಿ ಶ್ರೇಷ್ಠವಾಗಿದ್ದು ಉಳ್ಳುವವರು ಭಕ್ತರು ತಮ್ಮ ಭಕ್ತಿಯನ್ನು ತೋರಿಸುವ ಮುಖಾಂತರ ಸೇವೆಯನ್ನು ಮಾಡುತ್ತಾರೆ ಗುರು ಭಕ್ತರನ್ನು ಸನ್ಮಾರ್ಗದಲ್ಲಿ ನಡೆಯುವಂತೆ ದಾರಿ ತೋರಿಸುತ್ತಾರೆ ಗುರುವಿನ ಆಶೀರ್ವಾದದ ಫಲದಿಂದ ಅಸಾಧ್ಯವಾದ ಕೆಲಸವನ್ನು ಕೂಡ ಮಾಡಲು ಅವರ ಆಶೀರ್ವಾದದ ಬಲ ಬಲಿಷ್ಠ ವಾಗಿರುತ್ತದೆ ಎಂದರು.

 ಕಾರ್ಯಕ್ರಮದಲ್ಲಿ ಶಿವಲಿಂಗ ಕೊಳ್ಳಿ ಬೀಮನಹಳ್ಳಿ ಬೆಂಗಳೂರು ಅವರ ಪರಿವಾರದ ಮತ್ತು ಗ್ರಾಮಸ್ಥರಿಂದ ಶ್ರೀಗಳಿಗೆ ಗುರುವಂದನ ಹಾಗೂ ರಜತ ಕಿರೀಟ ಸಮರ್ಪಣೆ ಮಾಡಲಾಯಿತು. ಇದಕ್ಕೂ ಪೂರ್ವದಲ್ಲಿ ಗ್ರಾಮಕ್ಕೆ ಆಗಮಿಸಿದ ನಾಲವಾರ ಶ್ರೀಗಳನ್ನು ಸಾರಾಟಿನಲ್ಲಿ ಭವ್ಯವಾಗಿ ಮೆರವಣಿಗೆ ನೆರವೇರಿತು ಈ ಸಂದರ್ಭದಲ್ಲಿ ಡೊಳ್ಳು ಹಲೆಗೆ ಬಾಜಿ ಭಜಂತ್ರಿ ಮತ್ತು ಪೂರ್ಣ ಕುಟುಂಬ ಕಳಸಗಳೊಂದಿಗೆ ಭಕ್ತಿ ಪೂರ್ವಕವಾಗಿ ಸಹಸ್ರಾರು ಭಕ್ತರು ಸ್ವಾಗತಿಸಿದರು ಮೆರವಣಿಗೆ ದಗಲಕ್ಕೂ ಶ್ರೀ ಕೋರಿಸಿದ್ದೇಶ್ವರ ಮಹಾರಾಜಕಿ ಜೈ ಎಂದು ಜೈಂಕಾರ ಮೊಳಗಿಸಿದರು ತದನಂತರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಅಯ್ಯಾಳ ಲಿಂಗೇಶ್ವರ ಮಂದಿರ ಉದ್ಘಾಟನೆ ಮತ್ತು ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆ ನೆರವೇರಿತು ಈ ಕಾರ್ಯಕ್ರಮದಲ್ಲಿ ಓಂಕಾರ ಸಾವುಕಾರ್. ರವೀ ಶಿಕ್ಷಕರು. ಬಸವರಾಜ್ ಕೊಳ್ಳಿ. ಅಶೋಕ್. ನರಸಪ್ಪ ದಂಡೋತಿ. ಭೀಮರಾಯ ಆಭರ್. ಸುಭಾಷ್ ಗೌಡ. ಮಲ್ಲಿಕಾರ್ಜುನ್. ಭೀಮಣ್ಣ ಹಳ್ಳಿ. ನಾಗರೆಡ್ಡಿ ಗೋಪ್ಸನ್ ಚಿತ್ತಾಪುರ. ರವಿ ಸಾವು ರೇಷ್ಮೆ. ಬಸವರಾಜ್ ಗಾರಂಪಳ್ಳಿ. ಮಹದೇವ ಗoವಾರ. ಮಲ್ಲಿಕಾರ್ಜುನ್ ಎಣ್ಣೆ ನಾಲವಾರ. ಚಿತ್ತಾಪುರ ಕುಮಾರಿ ಪ್ರತಿಕ್ಷ ಗಾರಂಪಳ್ಳಿ ಅವರಿಂದ ಭರತನಾಟ್ಯ ನಡೆಯಿತು ನವಲಿಂಗಗ ಪಾಟೀಲ್ ಬೀದರ್ ಕಾರ್ಯಕ್ರಮ ನಿರೀಕ್ಷಿಸಿದರು