ದೇಶಕ್ಕೆ ಡಾ. ಬಿ. ಆರ್. ಅಂಬೇಡ್ಕರ್ ಕೊಡುಗೆ ಅಪಾರ : ಸುಬ್ಬಣ್ಣ ಜಮಖಂಡಿ

ದೇಶಕ್ಕೆ ಡಾ. ಬಿ. ಆರ್. ಅಂಬೇಡ್ಕರ್ ಕೊಡುಗೆ ಅಪಾರ : ಸುಬ್ಬಣ್ಣ ಜಮಖಂಡಿ

ಚಿಂಚೋಳಿ: ಜಗತ್ತಿನ ಹಲವು ರಾಷ್ಟ್ರಗಳ ಸಂವಿಧಾನ ಅಧ್ಯಾಯನ ಮಾಡಿ ಜಗತ್ತಿಗೆ ಮಾದರಿ ಭಾರತ ಪ್ರಜಾಸತಾತ್ಮಕ ಸಂವಿಧಾನ ರಚನೆ ಮಾಡಿ ದೇಶಕ್ಕೆ ಅರ್ಪಿಸಿದ ಡಾ. ಬಿ. ಆರ್.ಅಂಬೇಡ್ಕರ್ ಅವರ ಕೊಡುಗೆ ದೇಶಕ್ಕೆ ಅಪಾರವಾಗಿದೆ ಎಂದು ಆಡಳಿತ ದಂಡಾಧಿಕಾರಿ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಹೇಳಿದರು.

ಇಲ್ಲಿನ ಪೋಲಕಪಳ್ಳಿ ತಾಲೂಕ ಕ್ರೀಡಾಂಗಣದಲ್ಲಿ ತಾಲೂಕ ಆಡಳಿತ ವತಿಯಿಂದ ಹಮ್ಮಿಕೊಂಡಿರುವ 77ನೇ ಗಣರಾಜ್ಯೋತ್ಸವ ಕಾರ್ಯಕ್ರಮದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ಜಗತ್ತಿನಲ್ಲಿಯೇ ಅತಿ ದೊಡ್ಡ ಸಂವಿಧಾವಾಗಿದೆ. ಭಾರತ ವಿವಿಧತೆಯಲ್ಲಿ ಏಕತೆ ಹೊಂದಿರುವ ರಾಷ್ಟ್ರ. 64೦೦ ಪಂಗಡಗಳು, 1618 ರಾಜ್ಯಗಳು ಹೊಂದಿ ವಿವಿಧ ಹಬ್ಬಗಳನ್ನು ಆಚರಿಸುವ ಏಕೈಕ ಒಕ್ಕೂಟ ರಾಷ್ಟ್ರೀವಾಗಿದೆ. ಆದರೆ ಜಾತಿ ಧರ್ಮಗಳ ಹೆಸರಿನಲ್ಲಿ ಭೀನತೆಯನ್ನು ಉಂಟಿಸಲಾಗುತ್ತಿದೆ. ಮುಗ್ದ ಜನರನ್ನು ದುರುಪಯೋಸಿಕೊಳಲಾಗುತ್ತಿದ್ದು, ಜನರು ಜಾಗೃತಿ ವಹಿಸಬೇಕು. ಸಂವಿಧಾನ ಜಾತ್ಯತೀತ ತತ್ವದೊಂದಿಗೆ ಏಕ ಪೌರತ್ವವನ್ನು ಪ್ರತಿಪಾದಿಸಿದೆ ಎಂದರು.

ಕಾರ್ಯಕ್ರಮದಲ್ಲಿ ರೈತ ಗೀತೆಗೆ ಗೌರವ ಸಲ್ಲಿಸುವುದರೊಂದಿಗೆ, ವಿವಿಧ ಶಾಲೆಗಳ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಸಲಾಯಿತು.

 ತಾಲೂಕಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿಯರಿಗೆ ಉಚಿತ ಲ್ಯಾಪ್ ಟಾಪ್ ಮತ್ತು ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿ ಹೆಸರು ಪಡೆದಿರುವ ಸಾಧಕರಿಗೆ ಆಡಳಿತ ಗುರುತಿಸಿ ಸನ್ಮಾನಿಸಿ ಪ್ರಶಸ್ತಿ ಪ್ರಮಾಣಪತ್ರ ವಿತರಿಸಲಾಯಿತು.

ಈ ಸಂದರ್ಭದಲ್ಲಿ ತಾ. ಪಂ. ಕಾರ್ಯನಿರ್ವಾಹ ಅಧಿಕಾರಿ ಸಂತೋಷ ಚವ್ಹಾಣ, ಡಿವೈ ಎಸ್ ಪಿ ಸಂಗಮನಾಥ ಹಿರೇಮಠ, ಗ್ರೇಡ್- 2 ತಹಸೀಲ್ದಾರ್ ವೆಂಕಟೇಶ ದುಗ್ಗನ್, ಪುರಸಭೆ ಮುಖ್ಯ ಅಧಿಕಾರಿ ಕಾಶಿನಾಥ ಧನಿ, ಶಿಕ್ಷಣ ಅಧಿಕಾರಿ ವಿ. ಲಕ್ಷ್ಮಯ್ಯ, ಆರೋಗ್ಯ ಅಧಿಕಾರಿ, ಡಾ. ಗಫಾರ್, ಸಿಪಿಐ ಕಪಿಲದೇವ್, ಪಶುವೈದ್ಯಾಧಿಕಾರಿ ಡಾ.ಮಲ್ಲಿಕಾರ್ಜುನ ಗುತ್ತೇದಾರ, ಕೃಷಿ ಅಧಿಕಾರಿ ವೀರಶೆಟ್ಟಿ ರಾಠೋಡ, ಪ್ರಾಚಾರ್ಯ ಪ್ರೊ. ಮಲ್ಲಿಕಾರ್ಜುನ ಪಾಲಾಮೂರ್, ಶಿಕ್ಷಣ ಸಂಯೋಜಕ ಅಶೋಕ ಹೂವಿನಭಾವಿ, ವಕೀಲ ಶ್ರೀಮಂತ ಕಟ್ಟಿಮನಿ, ಕೆ. ಎಂ. ಬಾರಿ, ಅಮರ ಲೋಡನೂರ್, ಶಾಮರಾವ ಕೊರವಿ, ಲಕ್ಷ್ಮಣ ಆವಂಟಿ, ಸುರೇಶ ಭಂಟ, ಸುರೇಶ ದೇಶಪಾಂಡೆ,ವಿಠಲ್ ಕುಸಾಳೆ ಅವರು ಸೇರಿದಂತೆ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಶಿಕ್ಷಕ ವೃಂದ್ಧದವರು ಉಪಸ್ಥಿತರಿದ್ದರು.