ಕಲಬುರಗಿ: ಕೃಷ್ಣಭೀಮ ಸಮೃದ್ಧಿ ಲೋಕಲ್ ಏರಿಯಾ ಬ್ಯಾಂಕ್ 25ನೇ ವರ್ಷದ ಸಂಭ್ರಮ

ಕಲಬುರಗಿ: ಕೃಷ್ಣಭೀಮ ಸಮೃದ್ಧಿ ಲೋಕಲ್ ಏರಿಯಾ ಬ್ಯಾಂಕ್ 25ನೇ ವರ್ಷದ ಸಂಭ್ರಮ

ಕಲಬುರಗಿ: ಕೃಷ್ಣಭೀಮ ಸಮೃದ್ಧಿ ಲೋಕಲ್ ಏರಿಯಾ ಬ್ಯಾಂಕ್ 25ನೇ ವರ್ಷದ ಸಂಭ್ರಮ

ಕಲಬುರಗಿ ನಗರದ ಸೂಪರ್ ಮಾರ್ಕೆಟ್ ಪ್ರದೇಶದಲ್ಲಿರುವ ಕೃಷ್ಣಭೀಮ ಸಮೃದ್ಧಿ ಲೋಕಲ್ ಏರಿಯಾ ಬ್ಯಾಂಕ್ ತನ್ನ 25ನೇ ವರ್ಷದ ವಾರ್ಷಿಕೋತ್ಸವವನ್ನು ಭಾನುವಾರ ಸಂಭ್ರಮವಾಗಿ ಆಚರಿಸಿತು. ಕಾರ್ಯಕ್ರಮವನ್ನು ಗುಲಬರ್ಗಾ ವಕೀಲರ ಸಂಘದ ಅಧ್ಯಕ್ಷರಾದ ಎಸ್.ವಿ. ಪಸಾರ ಅವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಬ್ಯಾಂಕಿನ ಎಜಿಎಂ ಚಂದ್ರಕಾಂತ ಕುಲಕರ್ಣಿ, ಮಧುಸುಧನರಾವ, ಶ್ರೀನಿವಾಸ ಸಿರನೂರಕರ್, ರವಿಂದ್ರ ಪಾಟೀಲ (ಕೆಎಸ್‌ಆರ್‌ಟಿಸಿ), ಚಿದಂಬರಾವ ಪಾಟೀಲ, ಗಂಗಾಧರ ಪಾಟೀಲ, ಎಂ.ಎನ್. ಪಾಟೀಲ (ನ್ಯಾಯವಾದಿಗಳು), ಉದಯಕುಮಾರ ಉಪ್ಪಿನ್ ಸೇರಿದಂತೆ ಬ್ಯಾಂಕಿನ ಸಿಬ್ಬಂದಿ ಹಾಗೂ ಗಣ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಬ್ಯಾಂಕ್ ಸಂಸ್ಥಾಪನೆಯಿಂದ ಪಡೆದ ಸಾಧನೆಗಳು, ಗ್ರಾಹಕ ಸೇವಾ ವಿಸ್ತರಣೆ ಮತ್ತು ಮುಂದಿನ ದಿನಗಳ ಅಭಿವೃದ್ಧಿ ಯೋಜನೆಗಳ ಕುರಿತು ಚರ್ಚಿಸಲಾಯಿತು. ಬ್ಯಾಂಕ್‌ನ್ನು ವಿಶ್ವಾಸದಿಂದ ಬೆಂಬಲಿಸಿದ ಗ್ರಾಹಕರಿಗೆ ಈ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸಲಾಯಿತು.