ಸಂವಿಧಾನ ಸಮರ್ಪಣ ದಿನಾಚರಣೆ

ಸಂವಿಧಾನ ಸಮರ್ಪಣ ದಿನಾಚರಣೆ

ಸಂವಿಧಾನ ಸಮರ್ಪಣ ದಿನಾಚರಣೆ

ಕಲಬುರಗಿ: ಜಗತ್ ವೃತ್ತದ ಡಾ: ಅಂಬೇಡ್ಕರ ಪುತ್ಥಳಿ ಹತ್ತಿರದ ಆವರನದಲ್ಲಿ ಕರ್ನಾಟಕ ಸಮತಾ ಸೈನಿಕದಳ ಕೆಎಸ್‌ಎಸ್‌ಡಿ ಜಿಲ್ಲಾ ಸಮಿತಿ ಹಾಗೂ ವಿವಿಧ ಘಟಕದ ವತಿಯಿಂದ 76 ನೇ ವರ್ಷದ ಸಂವಿಧಾನ ಸಮರ್ಪಣ ದಿನಾಚರಣೆಯನ್ನು ಕೆಎಸ್‌ಎಸ್‌ಡಿ ರಾಜ್ಯ ಉಪಾಧ್ಯಕ್ಷರಾದ ಸಂಜೀವ ಟಿ ಮಾಲೆಯವರ ನೇತೃತ್ವದಲ್ಲಿ ಆಚರಿಸಲಾಯಿತು. 

ಇದೇ ಸಂದರ್ಭದಲ್ಲಿ ಸಂವಿಧಾನ ಬದ್ಧವಾಗಿ ಉತ್ತಮ ಸೇವೆಗೈದ ಮಹನೀಯರನ್ನು ಸನ್ಮಾನಿಸಲಾಯಿತು. ಸದರಿ ಕಾರ್ಯಕ್ರಮದಲ್ಲಿ ಮಾಜಿ ಸಿಂಡಿಕೇಟ್ ಸದಸ್ಯರಾದ ಡಾ. ಸುನಿಲಕುಮಾರ್ ಒಂಟಿ ಅವರು ಅತಿಥಿಗಳಾಗಿ ಆಗಮಿಸಿದರು, 

ಜಿಲ್ಲಾಧ್ಯಕ್ಷ ಈರಣ್ಣ ಜಾನೆ, ಮಹಾದೇವ ನಾಟಿಕರ್, ಮಲ್ಲಿಕಾರ್ಜುನ್ ಉದಯಕರ್, ವಿಜಯಕುಮಾರ್ ಉದ್ದಾ, ಶರಣು ಮದ್ನಾಳ, ಸಿದ್ದಾರ್ಥ್ ಕಣಮಸ್, ಶರಣು ಕಡಗಂಚಿ, ಅಮೃತರಾವ್ ನಾಯ್ಕೋಡಿ, ಸವಿತಾ ಒಂಟಿ, ಸಾಹಿತಿ ಬಾಬುರಾವ್ ಕಾಂಬಳೆ, ವಿಜಯಕುಮಾರ್ ಸಾವಳಗಿ, ಶಿವಮೂರ್ತಿ ಬಳಿಚಕ್ರ, ಇಂದುಬಾಯಿ ಭರತನೂರ, ಪದ್ಮ ಅಟ್ಟುರ, ಜ್ಯೋತಿ ಎಸ್ ದರ್ಗಿ, ಕಪಿಲ್ ಜಾನೆ, ಮಲ್ಲು ನಂದೂರ್, ಕಾವೇರಿ ಗೋರಂಪಳ್ಳಿ, ಲಲಿತಾಬಾಯಿ ಬಿಲ್ಕರ್, ಉಮೇಶ್ ಪಾಳಾ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು. ಸಾಹಿತಿ ಎಂ. ಎನ್ ಸುಗಂಧಿ ರಾಜಾಪೂರ ಸಂವಿಧಾನ ಪೀಠಿಕೆ ಬೋಧಿಸಿದರು, ಈರಣ್ಣ ಜಾನೆ ಸ್ವಾಗತ ಮಾಡಿದರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಪ್ಪಾರಾವ ಭಾವಿಮನಿ ವಂದನಾರ್ಪಣೆ ಮಾಡಿದರು.