ಸಗರ : 28 ರಂದು ಕರಿಬಸವೇಶ್ವರ ಜಾತ್ರೆ

ಸಗರ : 28 ರಂದು ಕರಿಬಸವೇಶ್ವರ ಜಾತ್ರೆ

 ಸಗರ : 28 ರಂದು ಕರಿಬಸವೇಶ್ವರ ಜಾತ್ರೆ

ಶಹಾಪುರ : ತಾಲೂಕಿನ ಸಗರ ಗ್ರಾಮದ ಶ್ರೀ ಕರಿಬಸವೇಶ್ವರ ಜಾತ್ರಾ ಮಹೋತ್ಸವ ಫೆಬ್ರವರಿ 28 ರಂದು ಜರಗಲಿದೆ ಎಂದು ಒಕ್ಕಲಿಗರ ಹಿರೇಮಠದ ಪರಮ ಪೂಜ್ಯರಾದ ಮರುಳ ಮಹಾಂತ ಶಿವಾಚಾರ್ಯರು ತಿಳಿಸಿದ್ದಾರೆ.

28 ರಂದು ಬೆಳಗಿನ ಬ್ರಾಹ್ಮಿ ಮುಹೂರ್ತದಲ್ಲಿ ಪೂಜೆ ಪುನಸ್ಕಾರಗಳ ಜೊತೆಗೆ ಹಲವಾರು ಧಾರ್ಮಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯುವವು ಅಂದು ಸಾಯಂಕಾಲ 6 ಗಂಟೆಗೆ ಮಹಾ ರಥೋತ್ಸವ ಜರುಗಲಿದೆ. ನಂತರ ಧಾರ್ಮಿಕ ಸಭೆ ಪ್ರಾರಂಭವಾಗುವುದು.

ನಂತರ ಜಾತ್ರಾ ಮಹೋತ್ಸವ ಅಂಗವಾಗಿ ಗ್ರಾಮೀಣ ಕ್ರೀಡೆಗಳಾದ ಬಾರ ಎತ್ತುವು ಸ್ಪರ್ಧೆ ಏರ್ಪಡಿಸಲಾಗಿದ್ದು,ಈ ಸ್ಪರ್ಧೆಯಲ್ಲಿ ವಿಜೇತರಿಗೆ ಬೆಳ್ಳಿಯ ಖಡಗ ತೊಡಿಸಿ ಗೌರವಿಸಲಾಗುವುದು.ಆದ್ದರಿಂದ ಈ ಜಾತ್ರೆಗೆ ಸಗರ ಗ್ರಾಮದ ಸುತ್ತಮುತ್ತಲಿನ ಭಕ್ತಾದಿಗಳು ಪ್ರತಿ ವರ್ಷದಂತೆ ಈ ವರ್ಷವೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ,ದರ್ಶನ ಪಡೆದು ಪುನೀತರಾಗಬೇಕೆಂದು ವಿನಂತಿಸಿಕೊಂಡಿದ್ದಾರೆ.