ಸಾರ್ವಜನಿಕರ ಮೂಲಭೂತ ಸೌಲಭ್ಯಕ್ಕಾಗಿ ಪ್ರತಿಭಟನೆ
| ನಗರದ ಸಾರ್ವಜನಿಕರ ವಿವಿಧ ಬೇಡಿಕೆಗಳ ಈಡೇರಿಗಾಗಿ ಒತ್ತಾಯಿಸಿ ಪ್ರತಿಭಟನೆ |
ಸಾರ್ವಜನಿಕರ ಕುಂದುಕೊರತೆಗಳನ್ನು ಪೌರಾಯುಕ್ತರು ಸ್ಪಂದಿಸಲಿ :
ನಾಗರಾಜ್ ದಂಡಾವತಿ ವರದಿ
ಶಹಾಬಾದ : - ನಗರ ಸಭೆ ವ್ಯಾಪ್ತಿಯಲ್ಲಿ ಸಾರ್ವಜನಿಕರ ಮೂಲಭೂತ ಸೌಲಭ್ಯಗಳನ್ನು ತಕ್ಷಣವೆ ಗಮನ ಹರಿಸಿ ಸಾರ್ವಜನಿಕರ ಕುಂದು ಕೊರತೆಗಳನ್ನು ಪೌರಾಯುಕ್ತರು ಸ್ಪಂದನೆ ಮಾಡಬೇಕು ಎಂದು ದಸಂಸ(ಅಂಬೇಡ್ಕರವಾದ) ದ ತಾಲ್ಲೂಕ ಸಂಚಾಲಕ ಸುಭಾಷ ಸಾಕ್ರೆ ಯವರು ಒತ್ತಾಯಿಸಿದರು.
ಅವರು ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರವಾದ) ತಾಲೂಕ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಬೃಹತ ಪ್ರತಿಭಟನಾ ಧರಣಿ ಸತ್ಯಾಗ್ರಹವನ್ನು ಉದ್ದೇಶಿಸಿ ಮಾತನಾಡಿದರು.
ನಗರ ಸಭೆಯ ವಾರ್ಡ್ ನಂ 11,12,13 ಮತ್ತು 14ರ ಬಡವಾಣೆಯ ಕೋಳವೆ ಭಾವಿಗಳು ಕೆಟ್ಟು ಹೋಗಿವೆ ಬೇಸಿಗೆ ಕಾಲವಾಗಿದರಿಂದ ಮೋಟರ್ ಮತ್ತು ಪೈಪ್ ಲೈನ್ ಅಳವಡಿಸಿ ತಕ್ಷಣವೆ ದುರಸ್ತಿ ಮಾಡಿಸಬೇಕು ಎಂದು ಒತ್ತಿ ಹೇಳಿದರು.
ವಾರ್ಡ ನಂ:14 ರ ಭಾರತ ಲೇ-ಔಟ್ ನಲ್ಲಿ ಚರಂಡಿ ಮತ್ತು ರಸ್ತೆ ನಿರ್ಮಾಣ ಮಾಡಿ ವೈಮಸ ಹೈಮಾಸ್ಟ ದೀಪಯನ್ನು ಅಳವಡಿಸಿ. ಸಿ.ಸಿ.ರಸ್ತೆ, ಚರಂಡಿ ನಿರ್ಮಾಣ ಮಾಡಬೇಕು, ಪ. ಜಾತಿ/ಪಂಗಡ ದವರಿಗೆ ಕಂಪ್ಯೂಟರ ತರಭೇತಿ, ಅಂಗವಿಕಲರ ದ್ವಿಚಕ್ರ ವಾಹನ ಮತ್ತು ಸಹಾಯ ದಾನ ನೀಡಿಲ್ಲ, ಆಶ್ರಯ ಕಾಲೋನಿ ನಿಜವಾದ ಫಲಾನುಭವಿಗಳಿಗೆ ನಿವೇಶನ ನೀಡಬೇಕು, ನಗರ ಸಭೆ ವ್ಯಾಪ್ತಿಯ ಉದ್ಯಾನವನಗಳನ್ನು ಅತಿಕ್ರಮಣ ಮಾಡಿದವರ ವಿರುದ್ದ ಕಾನೂನಿನ ಕ್ರಮ ಜರುಗಿಸಿ, ಉದ್ಯಾನವನ ಅಭಿವೃದ್ಧಿ ಪಡಿಸಬೇಕು, ನಗರ ಸಭೆ ಕಾರ್ಯಲಯದಲ್ಲಿ ಬ್ರಷ್ಟಾಚಾರ ತಾಂಡವ ವಾಡುತ್ತಿದೆ, ಸಿಬ್ಬಂದಿಗಳು ಲಂಚಕ್ಕಾಗಿ ಕೈ ಒಡ್ಡುತ್ತಾರೆ, ಹಣ ನೀಡದೆ ಹೋದರೆ, ಇಲ್ಲದ ಸಲ್ಲದ ಪತ್ರಗಳನ್ನು ತರುವಂತೆ ಒತ್ತಾಯಿಸುತ್ತಾರೆ, ಖಾತಾ ಮತ್ತು ಮೊಟೇಷನ್ ಗಾಗಿ ರಣಹದ್ದಿನಂತೆ ಕಿತ್ತು ತಿನ್ನುತ್ತಾರೆ, ಲಂಚಾವತಾರಕ್ಕೆ ತಕ್ಷಣ ಕಡಿವಾಣ ಹಾಕಬೇಕೆಂದು ಆಗ್ರಹಿಸಿದರು.
ಜಿಲ್ಲಾ ಸಂ. ಸಂಚಾಲಕರಾದ ಸತೀಶ ಕೋಬಾಳಕರ ಮತ್ತು ಬಸವರಾಜ ಮಯೂರ ಮಾತನಾಡಿ, ಪೌರ ಕಾರ್ಮಿಕರ ವೇತನ ಪಾವತಿ ಮಾಡಬೇಕು, ನಗರದ ತುಂಬಾ ಪ್ಲಾಸ್ಟಿಕ್ ಮತ್ತು ಕಸದ ರಾಶಿ, ರಾಶಿ ಬಿದ್ದಿದೆ, ನೈರ್ಮಲ್ಯಿಕರಣ ಜೊತೆ ನಾಯಿಗಳ ಹಾವಳಿ ತಡೆಯಬೇಕು, ಮಾಸ್ಟರ ಪ್ಲಾನ್ ನಿಂದ ತೆರೆವಾದ ಜಾಗ ಈಗ ಮತ್ತೆ ಅತಿಕ್ರಮಿಸುತ್ತಿದ್ದಾರೆ ಕಾನೂನು ಬಾಹಿರ ನಿಲುವನ್ನು ತಡೆಯಬೇಕು, ನಗರದಲ್ಲಿ ರಸ್ತೆ ಇದ್ದ ಕಡೆ ರಸ್ತೆ ನಿರ್ಮಾಣ ಮಾಡುತ್ತಿದ್ದಾರೆ ಆದರೆ ವಾರ್ಡ ನಂ: 11,12,13 ರಲ್ಲಿ ರಸ್ತೆಗಾಗಿ ಪರದಾಡುವಂತ ಪರಸ್ಥಿತಿ ಇದೆ, ತಕ್ಷಣವೆ ರಸ್ತೆ ನಿರ್ಮಾಣ ಮಾಡಿಕೊಡಬೇಕು, ನಗರ ಸಭೆಯ ಅಧಿಕಾರಿ ಹಾಗೂ ಸಿಬ್ಬಂದಿಗಳು ಕರ್ತವಕ್ಕೆ ತಡವಾಗಿ ಬಂದು ಬೇಗನೆ ಹೋಗುತ್ತಾರೆ ಎಂದು ಆರೋಪಿಸಿದರು.
ನಗರ ಸಭೆ ವ್ಯಾಪ್ತಿಯಲ್ಲಿ ಬರುವ ಬಹು ಮಹಡಿ (ಜಿ+) ಕಟ್ಟಡಗಳು ಸಂಪೂರ್ಣವಾಗಿ ಕಾನೂನಿನ ಬಾಹಿರವಾಗಿ ನಿರ್ಮಾಣ ಮಾಡಲಾಗಿದೆ ಅಂತವರ ಮೇಲೆ ಕಠಿಣ ಕಾನೂನಿನ ಕ್ರಮ ಜರುಗಿಸಬೇಕು,
ನಗರ ಸಭೆಯ ಸರ್ಕಾರಿ ಜಾಗಗಳನ್ನು ಅತಿಕ್ರಮಣ ಮಾಡಿಕೊಂಡ ಜಾಗವನ್ನು ತೆರೆಯುವ ಗೋಳಿಸಬೇಕು ಹಾಗೂ ಕಾನೂನು ಬಾಹಿರವಾಗಿ ಸರ್ಕಾರದ ಜಾಗದಲ್ಲಿ ಖಾಸಗಿ ಕಟ್ಟಡ ನಿರ್ಮಾಣ ಮಾಡಿರುವ ಎಲ್ಲಾ ಕಟ್ಟಡಗಳನ್ನು ತೆರೆವುಗೋಳಿಸಬೇಕು ಎಂದು ಹೇಳಿದರು.
ಸಾರ್ವಜನಿಕರ ಎಲ್ಲಾ ಬೇಡಿಕೆಗಳಿಗೆ ಸ್ಪಂದನೆ ಮಾಡಿ ತಕ್ಷಣವೇ ನ್ಯಾಯ ಒದಗಿಸಿಕೊಡಬೇಕು, ಒಂದು ವೇಳೆ ವಿಳಂಬ ನೀತಿ ಅನುಸರಿಸಿದರೆ ಮತ್ತು ಬೇಡಿಕೆಗಳನ್ನು ಇಡಿರಿಸದೇ ಹೋದಲ್ಲಿ ಪುನ: ಮುಂದಿನ ದಿನಗಳಲ್ಲಿ ಉಗ್ರ ಸ್ವರೂಪದ ಹೋರಾಟ ಹಾಗೂ ನಗರ ಸಭೆಗೆ ಮುತ್ತಿಗೆ ಹಾಕಲಾಗುವದು ಎಂದು ಎಚ್ಚರಿಕೆ ನೀಡಿ ಧರಣಿ ಸತ್ಯಾಗ್ರಹ ಅಂತ್ಯಗೊಳಿಸಿದರು.
ಮಾನ್ಯ ತಾಲ್ಲೂಕ ತಹಸೀಲ್ದಾರ ರಾದ ನೀಲಪ್ರಬಾ ಬಬಲಾದ ಅವರ ಮೂಲಕ ಮನವಿ ಪತ್ರವನ್ನು ಮಾನ್ಯ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಂಘಟನಾ ಸಂಚಾಲಕರಾದ ಶಿವಶಾಲ ಪಟ್ಟಣ, ಮರೇಪ್ಪ ಬಣಮಿ, ಮನೋಹರ ಕೊಳೂರ, ಹುಲಗೇಶ ನಾಟೇಕರ, ರಾಣೋಜಿ ಹಾದಿಮನಿ, ಪರಶುರಾಮ ಚಲವಾದಿ, ಕಾರ್ಮಿಕರ ಮುಖಂಡ ನಾಗಪ್ಪ ರಾಯಚೂರಕರ, ಅಂಗವಿಕಲರ ಸಂಘದ ಅಧ್ಯಕ್ಷ ಚಂದ್ರಕಾಂತ ಪಾಟೀಲ, ಗೋವರ್ಧನ ರಾಠೋಡ, ಬಿಎಸ್ಪಿ ಜಿಲ್ಲಾ ಕಾರ್ಯದರ್ಶಿ ಶೇಖ ಬಾಬು ಉಸ್ಮಾನ, ಶಹಾಬಾದ ಅಧ್ಯಕ್ಷ ಆಂಜನೇಯ ಕುಸಾಳೆ, ದಸಂಸ ಸಂ.ಸಂಚಾಲಕರಾದ ಮಲ್ಲಣ್ಣ ಮಸ್ಕಿ, ನರಸಿಂಹಲು ರಾಯಚೂರಕರ ಮತ್ತು ಮೋಹನ ಹಳ್ಳಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.
