ಸರಕಾರಿ ಕನ್ನಡ ಹೆಣ್ಣು ಮಕ್ಕಳ ಶಾಲೆಯಲ್ಲಿ ಸಂಸ್ಕಾರಯುತ ಸಮಾಜ ನಿರ್ಮಾಣಕ್ಕೆ ಚಾಲನೆ
ಸರಕಾರಿ ಕನ್ನಡ ಹೆಣ್ಣು ಮಕ್ಕಳ ಶಾಲೆಯಲ್ಲಿ ಸಂಸ್ಕಾರಯುತ ಸಮಾಜ ನಿರ್ಮಾಣಕ್ಕೆ ಚಾಲನೆ
ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನರೇಗಲ್ಲ ಪಟ್ಟಣದ ಸರಕಾರಿ ಕನ್ನಡ ಹೆಣ್ಣು ಮಕ್ಕಳ ಶಾಲೆಯಲ್ಲಿ ಎಲ್ಲಾ ತಂದೆ ತಾಯಿಯರಿಗೆ ಅವರವರ ಮಕ್ಕಳು ಪಾದ ಪೂಜೆ ಮಾಡುವುದರೊಂದಿಗೆ ಒಳ್ಳೆಯ ಸಂಸ್ಕಾರಯುತ ಸಮಾಜ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು . ಈ ಒಂದು ಸಂದರ್ಭದಲ್ಲಿ ಗಜೇಂದ್ರಗಡ ತಾಲೂಕ ಪಂಚಾಯಿತಿಯ ಶ್ರೀ ವಿ ವಿ ಹಿರೇಮಠ ಕಾರ್ಯನಿರ್ವಹಣಾಧಿಕಾರಿ ತಾಲೂಕು ಪಂಚಾಯತ್ ಗಜೇಂದ್ರಗಡ ಭಾಗವಹಿಸಿ ಮಕ್ಕಳಿಗೆ ಇಂಥ ಕಾರ್ಯಕ್ರಮಗಳು ಮಕ್ಕಳಿಗೆ ತಂದೆ ತಾಯಿಯರ ಶ್ರಮದ ಫಲ ಮತ್ತು ಸಂಸ್ಕಾರವನ್ನು ಕಲಿಸುತ್ತವೆ ಮತ್ತು ತಂದೆ ತಾಯಿಯರಿಗೆ ಗೌರವ ಕೊಡುವುದನ್ನು ಕಲಿಸುತ್ತದೆ ಇದು ಒಂದು ವಿನೂತನ ಕಾರ್ಯಕ್ರಮವಾಗಿದ್ದು ತಂದೆ ತಾಯಿಯರು ಈ ಒಂದು ಕಾರ್ಯಕ್ರಮದಿಂದ ಭಾವನಾತ್ಮಕವಾದರು ಮತ್ತು ನಮ್ಮ ಮಕ್ಕಳಿಗೆ ಇಂಥ ಶಿಕ್ಷಣದ ಅವಶ್ಯಕತೆ ಇದೆ ಎಂದು ಹರ್ಷಿತರಾದರೆಂದು ತಿಳಿಸಿದರು ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಮ್ಮ ಶಾಲೆಯ ಅಧ್ಯಕ್ಷರಾದ ಶ್ರೀಯುತ ಆನಂದ್ ಎಸ್ ಕೊಟಗಿ ಅಧ್ಯಕ್ಷತೆಯನ್ನು ವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಸುಮಾರು 130 ಪಾಲಕರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು ಮತ್ತು ಈ ಕಾರ್ಯಕ್ರಮದಲ್ಲಿ ಶಿಕ್ಷಕರಾದ ಶ್ರೀ ಬಸವರಾಜ್ ಕುರಿ ನಾವು ನಮ್ಮ ಮಕ್ಕಳಿಗೆ ಬೇಕಾದ ಶೈಕ್ಷಣಿಕ ಮತ್ತು ಸಾಮಾಜಿಕ ಜ್ಞಾನವನ್ನು ಹೇಳಿಕೊಡುತ್ತೇವೆ ನೀವು ಮನೆಯಲ್ಲಿ ಮಕ್ಕಳಿಗೆ ಸಂಸ್ಕಾರವನ್ನು ಕಲಿಸುವದು ನಿಮ್ಮ ಮೇಲಿದೆ ಎಂದು ಹೇಳಿದರು ಎಲ್ಲಾ ತಂದೆ ತಾಯಿಯರಿಗೆ ಸ್ವತಹ ಮಕ್ಕಳೇ ಉದಿನಕಡ್ಡಿ ಸಿಹಿ ಅರಿಶಿನ ಕುಂಕುಮವನ್ನು ತಂದು ತಮ್ಮ ತಮ್ಮ ತಂದೆ ತಾಯಿಯರಿಗೆ ಮಕ್ಕಳು ಪಾದಪೂಜೆ ಮಾಡಿದರು ಈ ಕಾರ್ಯಕ್ರಮದಲ್ಲಿ ನಮ್ಮ ಶಾಲೆಯ ಎಲ್ಲಾ ಗುರುಗಳು ಗುರುಮಾತೆಯರು ಮಕ್ಕಳು ಎಸ್ ಡಿ ಎಂ ಸಿ ಅಧ್ಯಕ್ಷರು ಸರ್ವ ಸದಸ್ಯರು ಹಾಗೂ ಗಜೇಂದ್ರಗಡ ತಾಲೂಕಿನ ಪಂಚಾಯತಿಯ ಸಿಬ್ಬಂದಿಗಳು ಸಹ ಭಾಗವಹಿಸಿದ್ದರು.
ವರದಿ ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ ಕಲ್ಯಾಣ ಕಹಳೆ ಗದಗ
